ವರದಿ : ನಿಷ್ಕಲ ಎಸ್., ಮೈಸೂರು
ಮೈಸೂರು : ನಗರದ ಪ್ರತಿಷ್ಠಿತ ಸಂತ ಫಿಲೋಮಿನಾ ಕಾಲೇಜಿನಲ್ಲಿ ಮಂಗಳವಾರ ಪದವಿ ಪ್ರದಾನ ಸಮಾರಂಭ ವಿಜೃಂಭಣೆಯಿAದ ನೆರವೇರಿತು.
ಕಾಲೇಜಿನ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.
ಸ್ನಾತಕ ಹಾಗೂ ಸ್ನಾತಕೋತ್ತರ ಪದವೀಧರರ ಶೈಕ್ಷಣಿಕ ಸಾಧನೆಯನ್ನು ಗೌರವಿಸಿ, ಅವರ ಭವಿಷ್ಯದ ಜೀವನಯಾತ್ರೆಗೆ ಶುಭ ಹಾರೈಸುವ ಉದ್ದೇಶದಿಂದ ಆಯೋಜಿಸಲಾದ ಈ ಸಮಾರಂಭದಲ್ಲಿ ವಿದ್ಯಾರ್ಥಿಗಳು, ಪೋಷಕರು, ಅಧ್ಯಾಪಕರು, ಹಳೆಯ ವಿದ್ಯಾರ್ಥಿಗಳು ಹಾಗೂ ಗಣ್ಯರು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮೈಸೂರು ಧರ್ಮ ಪ್ರಾಂತ್ಯದ ಬಿಷಪ್ ಡಾ.ಬರ್ನಾರ್ಡ್ ಮೊರಾಸ್ ಮಾತನಾಡಿ, ಶಿಕ್ಷಣವು ಕೇವಲ ಪದವಿ ಪಡೆಯುವುದಕ್ಕಷ್ಟೇ ಸೀಮಿತವಾಗದೇ ವ್ಯಕ್ತಿತ್ವದ ವಿಕಾಸ, ಸಾಮಾಜಿಕ ಹೊಣೆಗಾರಿಕೆ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸುವ ಶಕ್ತಿಯಾಗಬೇಕು ಎಂದು ತಿಳಿಸಿದರು.
ವಿದ್ಯಾರ್ಥಿಗಳು ಸಮಾಜಮುಖಿ ಚಿಂತನೆ ಹೊಂದಿ ದೇಶದ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಕರೆ ನೀಡಿದ ಅವರು, ಪದವಿ ಪಡೆದ ವಿಧ್ಯಾರ್ಥಿಗಳ ಭವಿಷ್ಯ ಉಜ್ವಲವಾಗಲಿ ಎಂದು ಶುಭ ಹಾರೈಸಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ನಿರ್ದೇಶಕ ಡಾ.ದಿನೇಶ್ ಕುಮಾರ್ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಯುವಜನತೆ ನಿರಂತರ ಅಧ್ಯಯನ, ಕೌಶಲ್ಯಾಭಿವೃದ್ಧಿ ಹಾಗೂ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬೇಕು ಎಂದರು.
ಯಶಸ್ಸು ಸಾಧಿಸಲು ಶಿಸ್ತು, ಪರಿಶ್ರಮ, ಪ್ರಾಮಾಣಿಕತೆ ಮತ್ತು ಧೈರ್ಯ ಅತ್ಯಗತ್ಯವಾಗಿದ್ದು, ವಿಫಲತೆಗೆ ಹೆದರದೆ ಹೊಸ ಅವಕಾಶಗಳನ್ನು ಸ್ವೀಕರಿಸಬೇಕು ಎಂದು ವಿದ್ಯಾರ್ಥಿಗಳಿಗೆ ಪ್ರೇರಣಾದಾಯಕ ಸಂದೇಶ ನೀಡಿದರು.
ಈ ಸಂದರ್ಭದಲ್ಲಿ 2022-25ನೇ ಬ್ಯಾಚ್‌ನ 35 ಸ್ನಾತಕ ವಿದ್ಯಾರ್ಥಿಗಳು ಹಾಗೂ 2025-26ನೇ ಬ್ಯಾಚ್‌ನ 52 ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.
ವಿದ್ಯಾರ್ಥಿಗಳು ವೇದಿಕೆಗೆ ಆಗಮಿಸಿ ಪದವಿ ಸ್ವೀಕರಿಸಿದ ಕ್ಷಣಗಳು ಸಂಭ್ರಮಕ್ಕೆ ಕಾರಣವಾದವು. ಪೋಷಕರು ತಮ್ಮ ಮಕ್ಕಳ ಸಾಧನೆಯನ್ನು ಕಣ್ತುಂಬಿಕೊAಡು ಹರ್ಷ ವ್ಯಕ್ತಪಡಿಸಿದರು.
ಜೊತೆಗೆ 2022-25ನೇ ಬ್ಯಾಚ್‌ನ ಮೂವರು ಅತ್ಯುತ್ತಮ ಯುಜಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಧನೆ, ಶಿಸ್ತು ಹಾಗೂ ಸಮಗ್ರ ವ್ಯಕ್ತಿತ್ವದ ಆಧಾರದ ಮೇಲೆ ಚಿನ್ನದ ಪದಕ ನೀಡಿ ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಯುಯುಸಿಎಂಎಸ್ ಸಂಯೋಜಕಿ ಮಿಸೆಸ್ ಲಿಡಿಯಾ ಅನ್ಯಾಲಿ ಎ., ಪರೀಕ್ಷಾ ನಿಯಂತ್ರಕಿ ಡಾ. ರೀನಾ ಫ್ರಾನ್ಸಿಸ್, ಭಾಷಾ ವಿಭಾಗದ ಡೀನ್ ಡಾ.ಎ.ಟಿ. ಸದೇಬೋಸ್,
ಉಪ ಪ್ರಾಂಶುಪಾಲರಾದ ರೋನಾಲ್ಡ್ ಪ್ರಕಾಶ್ ಕುಟಿನ್ಹಾ, ರೆಕ್ಟರ್, ರೆವ್. ಡಾ. ಲೋರ್ಡು ಪ್ರಸಾದ್ ಜೋಸೆಫ್, ಪ್ರಾಂಶುಪಾಲರಾದ ಡಾ. ರವಿ ಜೆ. ಡಿ. ಸಲ್ಡಾನ್ಹಾ, ವಿಜ್ಞಾನ ವಿಭಾಗದ ಡೀನ್ ಆರ್. ಬ್ರಿಟ್ಟೋ ಡೊಮಿನಿಕ್, ಕಲಾ ವಿಭಾಗದ ಡೀನ್ ಡಾ. ಪ್ರವೀಣ್ ಸಲ್ಡಾನ್ಹಾ ರಾಯನ್, ಅಕಾಡೆಮಿಕ್ ಡೀನ್ ಶ್ರೀ ಆನಂದ್ ಸಿ., ಉಪಸ್ಥಿತರಿದ್ದರು.
ಪದಕ ವಿಜೇತರ ಸಾಧನೆಗೆ ಸಭಾಂಗಣದಲ್ಲಿ ಭರ್ಜರಿ ಕರತಾಡನ ಮೊಳಗಿತು.
ಕಾರ್ಯಕ್ರಮದ ಆರಂಭದಲ್ಲಿ ಪ್ರಾರ್ಥನೆ, ಸ್ವಾಗತ ಭಾಷಣ ಹಾಗೂ ಅತಿಥಿಗಳ ಪರಿಚಯ ನಡೆಯಿತು. ನಂತರ ಪದವಿ ಪ್ರದಾನ ಪ್ರಕ್ರಿಯೆ ನೆರವೇರಿತು. ಸಮಾರಂಭದ ಕೊನೆಯಲ್ಲಿ ಕಾಲೇಜಿನ ಪ್ರಾಂಶುಪಾಲರು ಹಾಗೂ ರೆಕ್ಟರ್ ಮಾತನಾಡಿ, ಪದವೀಧರರು ಕಾಲೇಜಿನ ಹೆಸರನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಬೇಕು ಎಂದು ಶುಭ ಹಾರೈಸಿದರು. ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಲು ಸಹಕರಿಸಿದ ಪೋಷಕರು, ಅಧ್ಯಾಪಕರು, ಸಿಬ್ಬಂದಿ ಹಾಗೂ ಹಾಜರಿದ್ದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದರು.
ಸಂಭ್ರಮ, ಗೌರವ ಹಾಗೂ ಹರ್ಷದ ವಾತಾವರಣದಲ್ಲಿ ನಡೆದ ಈ ಪದವಿ ಪ್ರದಾನ ಸಮಾರಂಭವು ವಿದ್ಯಾರ್ಥಿಗಳ ಜೀವನದಲ್ಲಿ ಹೊಸ ಅಧ್ಯಾಯಕ್ಕೆ ಚಾಲನೆ ನೀಡಿದ ಸ್ಮರಣೀಯ ಕ್ಷಣವಾಗಿ ಪರಿಣಮಿಸಿತು
