ವರದಿ : ನಿಷ್ಕಲ ಎಸ್., ಮೈಸೂರು
ಮೈಸೂರು : ಶಾರದಾದೇವಿ ನಗರದಲ್ಲಿರುವ ಅನ್ನಪೂರ್ಣ ಕಣ್ಣಿನ ಆಸ್ಪತ್ರೆಯಲ್ಲಿ ವಿವಿಧ ಸೌಲಭ್ಯಗಳು, ಸರ್ಕಾರಿ, ಅರೆ ಸರ್ಕಾರಿ ಮತ್ತು ಖಾಸಗಿ ವಿಮಾ ಕಂಪನಿಗಳ ಸೌಭ್ಯಗಳು ದೊರಕಲಿದ್ದು, ಕಣ್ಣಿನ ತೊಂದರೆ ಇರುವವರು ಈ ಯೋಜನೆಗಳನ್ನು ಬಳಸಿಕೊಂಡು ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕೆಂದು ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರಾದ ಆರ್.ಅಶ್ವಥ್ ಕುಮಾರ್ ಹೇಳಿದರು.
ಶನಿವಾರ ಆಸ್ಪತ್ರೆಯಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ನಮ್ಮ ಆಸ್ಪತ್ರೆಯಲ್ಲಿ
ಕಾಂಪರೆನ್ಸೀವ್ ಐ ಎಕ್ಸಾಮಿನೇಷನ್, ಅಡ್ವಾನ್ಸ್ ಕ್ಯಾಟರಾಕ್ಟ್ ಫಾಕೋ ಸರ್ಜರಿ, ವಿಟ್ರೋ ರೆಟಿನಾ ಸರ್ಜರಿ, ಟಿರಿಗ್ಲಮ್ ಸರ್ಜರಿ, ಸ್ಕಿ÷್ವಂಟ್ ಕರೆಕ್ಷನ್, ಗ್ಲಾಕೋಮಾ ಸರ್ವಿಸ್, ಆಪ್ಟಿಕಲ್ ಸರ್ವಿಸ್ ಮುಂತಾದ ಸೌಲಭ್ಯಗಳು ನಮ್ಮ ಆಸ್ಪತ್ರೆಯಲ್ಲಿ ಸಿಗುತ್ತವೆ, ಜತೆಗೆ ಎಲ್ಲ ಸರ್ಕಾರಿ ಸೌಲಭ್ಯಗಳ ಯೋಜನೆಗಳು, 25ಕ್ಕೂ ಹೆಚ್ಚು ಇನ್ಸೂರೆನ್ಸ್ ಕಂಪನಿಗಳೊAದಿಗೆ ಹೊಂದಾಣಿಕೆಯನ್ನು
ಮಾಡಿಕೊAಡಿದ್ದೇವೆ. ಇಎಸ್‌ಐ, ಆಯುಷ್ಮಾನ್ ಭಾರತ್, ಎಬಿವೈ ಫೈರ್ ಡಿಪಾರ್ಟ್ಮೆಂಟ್, ಎಬಿವೈ ಪ್ರಿಸನ್, ಕೆಎಸ್‌ಆರ್‌ಟಿಸಿ, ಯೂನಿವರ್ಸಿಟಿ ಆಫ್ ಮೈಸೂರು, ಸಿಎಫ್‌ಟಿಆರ್‌ಐ ಆಯಿಷ್, ಸರ್ಕಾರಿ ಸ್ಕಿಂ ಸೌಲಭ್ಯಗಳು, ಯಶಸ್ವಿನಿ ಯೋಜನೆ, ಕೇಂದ್ರ ಸರ್ಕಾರದ ಯೋಜನೆಗಳು,
ಆಯುಷ್ಮಾನ್ ಭಾರತ್ ಆರೋಗ್ಯ
ಯೋಜನೆ, ಶ್ರೀ ಧರ್ಮಸ್ಥಳ ಮಂಜುನಾಥ ಹೆಲ್ತ್ ಸ್ಟೀಮ್ ಮೂಲಕ ಚಿಕಿತ್ಸೆ ಪಡೆಯಬಹುದಾಗಿದೆ.
ನಮ್ಮ ಆಸ್ಪತ್ರೆಯಲ್ಲಿ ಕಳೆದ 9 ವರ್ಷಗಳಲ್ಲಿ 18,000 ಕ್ಕೂ ಹೆಚ್ಚು ಕ್ಯಾಟರಾಕ್ಟ್ ಸರ್ಜರಿಯನ್ನು ಯಶಸ್ವಿಯಾಗಿ ನಡೆಸಿ ಸಾವಿರಾರು ಜನರಿಗೆ ಹೊಸ ಬೆಳಕನ್ನು ನೀಡಿದ್ದೇವೆ. ಅಲ್ಲದೇ ಜಿಲ್ಲಾ ಅಂದ ನಿಯಂತ್ರಣ ಸಂಸ್ಥೆಯೊAದಿಗೆ ಸೇರಿ 6000 ಕ್ಕೂ ಹೆಚ್ಚು ಉಚಿತ ಕ್ಯಾಟರಾಕ್ಟ್ ಶಸ್ತç ಚಿಕಿತ್ಸೆಗಳನ್ನು ನಡೆಸಿ ಸಾವಿರಾರು ಜನರಿಗೆ ಹೊಸ ಬೆಳಕನ್ನು ನೀಡಿದ್ದೇವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕಣ್ಣಿನ ತಜ್ಞ ವೈದ್ಯರಾದ ಡಾ.ಶಿವಾನಿ ನಾಯಕ್, ಎಂ. ಸೋಮು, ಅಡ್ಮಿನ್ ಚೈತ್ರ ಇತರರು ಭಾಗವಹಿಸಿದ್ದರು.

