ನಗರದ ಜಲದರ್ಶಿನಿ ಅತಿಥಿಗೃಹದಲ್ಲಿ ಜಿಲ್ಲಾ ಅಧ್ಯಕ್ಷ ಸತ್ಯನಾರಾಯಣ ಅವರ ಅಧ್ಯಕ್ಷತೆ ಮತ್ತು ಗೌರವಾಧ್ಯಕ್ಷ ಬಿ.ಜಿ.ಕೇಶವ ಅವರ ಸಮ್ಮುಖದಲ್ಲಿ ನಡೆದ ತಿ.ನರಸೀಪುರ ತಾಲ್ಲೂಕು ಐದು ಹೋಬಳಿಗಳ ವೀರ ಮಡಿವಾಳ ಸಮುದಾಯದ ಮುಖಂಡರ ಸಭೆಯಲ್ಲಿ ಬೀಡನಹಳ್ಳಿ ಜಿ.ಎಸ್.ರವಿ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಅಧ್ಯಕ್ಷ ಸತ್ಯನಾರಾಯಣ ಮಾತನಾಡಿ, ವೀರ ಮಡಿವಾಳ ಸಮಾಜಕ್ಕೆ ಸರ್ಕಾರದಿಂದ ನ್ಯಾಯಯುತ ಸವಲತ್ತುಗಳನ್ನು ಹಾಗೂ ಸಂವಿಧಾನ ಬದ್ದ ಹಕ್ಕುಗಳನ್ನು ಪಡೆಯುವ ಸಲುವಾಗಿ ತಳಮಟ್ಟದಿಂದ ಸಂಘಟನೆ ಮಾಡಿ ಹೋರಾಟವನ್ನು ರೂಪಿಸಲು ಪ್ರತಿ ತಾಲ್ಲೂಕಿನಲ್ಲಿ ವೀರ ಮಡಿವಾಳ ಸಮಾಜದ ತಾಲ್ಲೂಕು ಅಧ್ಯಕ್ಷರನ್ನು ಸಮಾಜದ ಮುಖಂಡರ ಸಮ್ಮುಖದಲ್ಲಿ ಆಯ್ಕೆ ಮಾಡುತ್ತಿದ್ದು, ಅದರಂತೆ ಟಿ.ನರಸೀಪುರ ತಾಲ್ಲೂಕಿಗೆ ಜಿ.ಎಸ್. ರವಿ ಬೀಡನಹಳ್ಳಿ ಅವರನ್ನು ತಾಲ್ಲೂಕು ಅಧ್ಯಕ್ಷರನ್ನಾಗಿ ಒಮ್ಮತದಿಂದ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.
ನೂತನ ಅಧ್ಯಕ್ಷರಾದ ಜಿ.ಎಸ್. ರವಿ ಅವರು ಯುವ ಹೋರಾಟಗಾರರಾಗಿದ್ದು, ಸಮಾಜದ ಅಭಿವೃದ್ಧಿ ಬಗ್ಗೆ ಅಪಾರ ಕಾಳಜಿ ಹೊಂದಿದ್ದಾರೆ. ಹಲವು ವರ್ಷಗಳಿಂದಲೂ ಸಕ್ರಿಯವಾಗಿ ಸಮಾಜ ಸಂಘಟನೆಯಲ್ಲಿ ತೊಡಗಿದ್ದಾರೆ. ಅವರನ್ನು ಯಾವುದೇ ಗೊಂದಲವಿಲ್ಲದೆ ಆಯ್ಕೆ ಮಾಡಿರುವುದು ಸಭೆಗೆ ಶೋಭೆ ತಂದಿದೆ, ನೂತನ ಅಧ್ಯಕ್ಷರಾದ ರವಿ ಅವರು ಮುಂದೆ ಸಮಾಜದ ಹಿರಿಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರ ಮಾರ್ಗದರ್ಶನ ಪಡೆದು, ಹೆಚ್ಚೆಚ್ಚು ಯುವಕರನ್ನು, ವಿದ್ಯಾವಂತರನ್ನು ಸಂಘದಲ್ಲಿ ಸೇರಿಸಿಕೊಂಡು ಸಮಾಜಮುಖಿ ಕಾರ್ಯಕ್ರಮಗಳನ್ನು ರೂಪಿಸಿ ಆರ್ಥಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ನಮ್ಮ ಮಡಿವಾಳ ಸಮಾಜ ಮುಖ್ಯವಾಹಿನಿಗೆ ತರಲು ಶ್ರಮಿಸಬೇಕು ಹಾಗೂ ರವಿ ಅವರಿಗೆ ಸಮಾಜದ ಜನರು ಸಹಕಾರ ನೀಡಬೇಕು ಎಂದು ಸಲಹೆ ನೀಡಿದರು.
ಸಂಘದ ಗೌರವಾಧ್ಯಕ್ಷ ಬಿ.ಜಿ.ಕೇಶವ ಅವರು ಮಾತನಾಡಿ, ನಮ್ಮ ಸಮಾಜದವರು ತಮ್ಮಲ್ಲಿರುವ ಯಾವುದೇ ಸಣ್ಣ ಪುಟ್ಟ ಭಿನ್ನಾಭಿಪ್ರಾಯ ಬಿಟ್ಟು ಒಂದೇ ವೇದಿಕೆಯಲ್ಲಿ ಸಮಾಜದ ಪರವಾಗಿ ಹೋರಾಟವನ್ನು ಮಾಡಬೇಕು ಎಂದು ಕರೆ ನೀಡಿದರು.
ಸಭೆಯಲ್ಲಿ ಉಪಾಧ್ಯಕ್ಷರಾದ ಸಂತೋಷ, ವೆಂಕಟೇಶ್ (ಗುಂಡ), ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷರಾದ ವಸಂತಕುಮಾರಿ, ಬೃಂದಾವನ ಮಹೇಶ್, ಹುಣಸೂರು ತಾಲ್ಲೂಕು ಅಧ್ಯಕ್ಷರು ಮತ್ತು ಜಿಲ್ಲಾ ಉಪಾಧ್ಯಕ್ಷರಾದ ರವಿ ಚಿಲ್ಕುಂದ, ಕೆ.ಆರ್. ನಗರ ತಾಲ್ಲೂಕು ಅಧ್ಯಕ್ಷರು ಮತ್ತು ಜಿಲ್ಲಾ ಕಾನೂನು ಸಲಹೆಗಾರರಾದ ಕುಮಾರ್, ಜಿಲ್ಲಾ ಉಪಾಧ್ಯಕ್ಷರಾದ ಕೃಷ್ಣ (ಬಿಎಸ್‌ಎನ್‌ಎಲ್), ಸಾಲಿಗ್ರಾಮ ತಾಲ್ಲೂಕು ಅಧ್ಯಕ್ಷರು ಹಾಗೂ ಜಿಲ್ಲಾ ಉಪಾಧ್ಯಕ್ಷರಾದ ಹರ್ಷವರ್ಧನ್, ಪ್ರಧಾನ ಕಾರ್ಯದರ್ಶಿ ಕೆಂಪಶೆಟ್ಟಿ, ಖಜಾಂಚಿ ಹಾಗೂ ವಕೀಲರಾದ ರವಿಚಂದ್ರ, ನಿರ್ದೇಶಕರಾದ ಹೆಚ್.ಡಿ. ಕೋಟೆ ರಮೇಶ್, ಹೆಚ್.ಡಿ. ಕೋಟೆ ತಾಲ್ಲೂಕು ಮಾಜಿ ಅಧ್ಯಕ್ಷರಾದ ಬೀಚನಹಳ್ಳಿ ನಾಗಶೆಟ್ಟಿ, ಎಚ್. ಡಿ. ಕೋಟೆ ಯುವ ಮುಖಂಡರಾದ ರಂಗಸ್ವಾಮಿ, ನರಸೀಪುರ ತಾಲ್ಲೂಕು ಕೆ. ಮಹದೇವಶೆಟ್ಟಿ, ಪ್ರಭುಲಿಂಗಶೆಟ್ಟಿ, ನಿಂಗರಾಜು ಆದಿಬೆಟ್ಟಹಳ್ಳಿ, ರಂಜಿತ್, ಕಿರಣ್, ಶಿವಕುಮಾರ್ ಗರ್ಗೆಶ್ವರಿ, ರಂಗಸ್ವಾಮಿ ಚಿದಾರವಳ್ಳಿ, ನಿಂಗರಾಜಶೆಟ್ಟಿ ಹಿರಿಯೂರು, ಮಹಿಳಾ ಘಟಕದ ಅಧ್ಯಕ್ಷರಾದ ಸುಶೀಲ, ಶಿಲ್ಪಾ ಬೆನಕನಹಳ್ಳಿ, ಸುಶೀಲಮ್ಮ, ಚಲುವಯ್ಯ, ಮಹದೇವ, ಮಾಯಿಗಯ್ಯ, ಬಸವರಾಜು, ಮಹದೇವಸ್ವಾಮಿ, ನಂಜುಂಡಸ್ವಾಮಿ, ರಂಜಿತಾ, ರಾಜು, ಭರತ್ ಮುಂತಾದವರು ಭಾಗವಹಿಸಿದರು.
ತಿ.ನರಸೀಪುರ ತಾಲ್ಲೂಕು ವೀರ ಮಡಿವಾಳ ಸಮಾಜದವರು ನನ್ನನ್ನು ಸಂಘದ ಅಧ್ಯಕ್ಷನನ್ನಾಗಿ ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ. ಜನರು ನನ್ನ ಮೇಲೆ ಇಟ್ಟಿರುವ ವಿಶ್ವಾಸವನನ್ನು ದುರುಪಯೋಗ ಮಾಡಿಕೊಳ್ಳದೆ, ಸಮುದಾಯದ ಅಭಿವೃದ್ಧಿಗೆ ಶ್ರಮಿಸುತ್ತೇನೆ.
ಜಿ.ಎಸ್.ರವಿ, ಬೀಡನಹಳ್ಳಿ, ನೂತನ ಅಧ್ಯಕ್ಷ



