ಕರ್ನಾಟಕ ರಾಜ್ಯ ಭೀಮ್‌ಸೇನೆ ಮೈಸೂರು ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರಾಗಿ ಅತ್ಯುತ್ತಮ ಸಂಘಟಕ, ಜನಾನುರಾಗಿ ನಯಾಜ್ ಪಾಷ ನೇಮಕ


 ಮೈಸೂರು : ಕರ್ನಾಟಕ ರಾಜ್ಯ ಭೀಮ್‌ಸೇನೆ ಸಂಘಟನೆಯ ಮೈಸೂರು ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರನ್ನಾಗಿ ನಯಾಜ್ ಪಾಷ ಅವರನ್ನು ನೇಮಕ ಮಾಡಲಾಗಿದೆ.

ಈ ಕುರಿತು ಸಂಘಟನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಸರ್ವೇಶ ಎಸ್., ಅವರು ಪ್ರಕಟಣೆ ಹೊರಡಿಸಿದ್ದಾರೆ. ಸೋಮವಾರ ನಡೆದ ಸಂಘಟನೆಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಅಲ್ಪಸಂಖ್ಯಾತ ಘಟಕಗಳನನ್ನು ರಚನೆ ಮಾಡಲಾಗಿದ್ದು, ಮೈಸೂರು ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರನ್ನಾಗಿ ನಯಾಜ್ ಪಾಷ ಅವರನ್ನು ನೇಮಿಸಲಾಗಿದೆ. ಅಲ್ಲದೇ, ಮೈಸೂರು ನಗರ ಸೇರಿದಂತೆ, ಮೈಸೂರು ಜಿಲ್ಲೆ ಮತ್ತು ಎಲ್ಲ ತಾಲ್ಲೂಕುಗಳಲ್ಲಿ ಹೊಸದಾಗಿ ಅಲ್ಪಸಂಖ್ಯಾತರ ಘಟಕಗಳನ್ನು ರಚಿಸಿ, ಅವುಗಳಿಗೆ ಪದಾಧಿಕಾರಿಗಳನ್ನು ನೇಮಕ ಮಾಡುವ ಸಂಪೂರ್ಣ ಜವಾಬ್ದಾರಿಯನ್ನು ನಯಾಜ್ ಪಾಷ ಅವರಿಗೆ ವಹಿಸಲಾಗಿದೆ ಎಂದು ಸವೇಶ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೈಸೂರು ನಗರದ ಶಾಂತಿನಗರ ಬಡಾವಣೆಯ ನಿವಾಸಿ ನಯಾಜ್ ಪಾಷ ಅವರು, ಉತ್ತಮ ಸಂಘಟಕರಾಗಿದ್ದಾರೆ, ರಾಜಕೀಯದಲ್ಲಿ ಸಾಕಷ್ಟು ಅನುಭವ ಹೊಂದಿದ್ದು, ಜನಾನುರಾಗಿ ನಾಯಕರಾಗಿದ್ದಾರೆ ಈ ಕಾರಣದಿಂದ ಅವರನ್ನು ನೇಮಕ ಮಾಡಲಾಗಿದೆ ಇವರ ಜತೆ ಇವರ ಸಾವಿರಾರು ಗೆಳೆಯರೂ ಸಹ ಭೀಮ್‌ಸೇನೆ ಸೇರುವ  ನಿರೀಕ್ಷೆ ಇದೆ ಎಂದು ಅವರು ತಿಳಿಸಿದ್ದಾರೆ.