ಮೈಸೂರು: ಹೆಸರಾಂತ ಕುಶಲಕರ್ಮಿ, ಸಮಾಜ ಸೇವಕರು ಮತ್ತು ಸಂಘಟಕರೂ ಆದ ಎಂ.ಮೊಗಣ್ಣಾಚಾರ್ ಅವರಿಗೆ 2025ನೇ ಸಾಲಿನ ಮೈಸೂರು ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.
ಶನಿವಾರ ಬೆಳಗ್ಗೆ ನಗರದ ಓವಲ್ ಮೈದಾನದಲ್ಲಿ ನಡೆದ ಸಮಾರಂಭದಲ್ಲಿ ಸಮಾಜ ಕಲ್ಯಾಣ ಸಚಿವರು ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಡಾ.ಹೆಚ್.ಸಿ.ಮಹದೇವಪ್ಪ ಅವರು ಮೊಗಣ್ಣಾಚಾರ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.

ಮೊಗಣ್ಣಾಚಾರ್ ಅವರು ಮೈಸೂರು ಜಿಲ್ಲಾ ವಿಶ್ವಕರ್ಮ ಬಡಗಿ ಕೆಲಸಗಾರರ ಸಂಘದ ಅಧ್ಯಕ್ಷರಾಗಿ, ಶ್ರೀ ವಿಶ್ವಕರ್ಮ ಪತ್ತಿನ ಸಹಕಾರ ಸಂಘದ ನಿರ್ದೇಶಕರಾಗಿ ಹಾಗು ಕನ್ನಡಪರ ಹೋರಾಟಗಾರರೂ ಆಗಿ ಅವಿರತವಾಗಿ ಸಮಾಜಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ವೃತ್ತಿಯಲ್ಲಿ ಕರಕುಶಲ ಕರ್ಮಿಗಳು ಆದ ಮೊಗಣ್ಣಾಚಾರ್ ಹೆಸರಾಂತ ಉದ್ಯಮಿಗಳೂ ಆಗಿದ್ದು, ಮೈಸೂರಿನ ವಿವೇಕಾನಂದ ನಗರದಲ್ಲಿ ಓಂ ಶ್ರೀ ಆಂಜನೇಯ ವುಡ್ ಇಂಡಸ್ಟ್ರೀಸ್ ನಡೆಸುತ್ತಿದ್ದಾರೆ.
ಇವರ ಅಪಾರ ಸಮಾಜ ಸೇವೆಯನ್ನು ಗುರುತಿಸಿ ಜಿಲ್ಲಾಡಳಿತ ಇವರಿಗೆ 2025ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಿದೆ.


