ಮೈಸೂರಿನಲ್ಲಿ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಅಠವಳೆ) ಕಾರ್ಯಕರ್ತರ ಸಮಾವೇಶ, ಜಿಲ್ಲಾ ಪದಾಧಿಕಾರಿಗಳ ಆಯ್ಕೆ

 

ಮೈಸೂರು: ಸಿದ್ದರಾಮಯ್ಯ ಅವರ ಬಳಿಕ ಅಹಿಂದವನ್ನು ತಾತ್ವಿಕವಾಗಿ ಮುನ್ನಡೆಸಲು ಬೇರೆ ಯಾರಿಗೂ ಸಾಧ್ಯವಿಲ್ಲ ಎಂಬ ಸಂದೇಶವನ್ನು ಯತೀಂದ್ರ ಪರೋಕ್ಷವಾಗಿ ಹೇಳುತ್ತಿದ್ದಾರೆ. ಹಿಂದುಳಿದ ಸಮುದಾಯ ಇಂತಹ ಸೂಕ್ಷ್ಮತೆಯನ್ನು ಅರ್ಥ ಮಾಡಿಕೊಳ್ಳಬೇಕಿದೆ ಎಂದು ಮಾಜಿ ಸಚಿವ ಎನ್.ಮಹೇಶ್ ತಿಳಿಸಿದರು.

ಮೈಸೂರಿನ ಜಗನ್ಮೋಹನ ಅರಮನೆಯಲ್ಲಿ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಅಠವಳೆ) ಮೈಸೂರು ಜಿಲ್ಲಾ ಪದಾಧಿಕಾರಿಗಳ ಆಯ್ಕೆ ಹಾಗೂ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಅಹಿಂದ ಚಳವಳಿಯನ್ನು ಸಿದ್ದರಾಮಯ್ಯ ಅವರ ನಂತರ ಮುಂದುವರೆಸಲು ಸತೀಶ ಜಾರಕಿಹೊಳಿಗೆ ಸಾಧ್ಯ ಎನ್ನುವ ಮೂಲಕ ಅಹಿಂದ ಚಳವಳಿಯನ್ನು ಮಲ್ಲಿಕಾರ್ಜುನ ಖರ್ಗೆ ಮುಂದುವರೆಸಲು ಸಾಧ್ಯವಿಲ್ಲ. ಪರಮೇಶ್ವರ್ ಮುಂದುವರೆಸಲು ಸಾಧ್ಯವಿಲ್ಲ. ಕೆ.ಎಚ್

.ಮುನಿಯಪ್ಪ ಮುಂದುವರೆಸಲು ತಾಕತ್ ಇಲ್ಲ. ಅಷ್ಟೇ ಯಾಕೆ 24 ತಾಸು ಸಿದ್ದರಾಮಯ್ಯ ಜಪ ಮಾಡುವ ಎಚ್.ಡಿ.ಮಹದೇವಪ್ಪ ಅವರಿಂದಲೂ ಸಾಧ್ಯವಿಲ್ಲ. ಪ್ರಿಯಾಂಕಖರ್ಗೆಯಿಂದಲೂ ಸಾಧ್ಯವಿಲ್ಲ ಎಂದು ಪರೋಕ್ಷವಾಗಿ ಹೇಳುತ್ತಿದ್ದಾರೆಂದರು.

ಎನಿದರ ಸೂಕ್ಷ್ಮತೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ನಮ್ಮನ್ನು ಕುರಿ ಮಾಡಿ ಬಿಡುತ್ತಾರೆ. ಹುಷಾರಾಗಿ ಸಂಘಟನೆ ಹೆಜ್ಜೆಯನ್ನು ಮೈಸೂರಿನಲ್ಲಿ ನೀವು ಇಡಿ, ನಿಮ್ಮ ಹೆಜ್ಜೆಗೆ ನನ್ನ ಹೆಜ್ಜೆ ಸೇರಿಸುತ್ತೇನೆಂದರು.

ಸಂವಿಧಾನ ರಚನೆ ಸಭೆಯಲ್ಲಿ ಅಂತಿಮ ದಿನದಲ್ಲಿ 1950 ಜ.26ರಿಂದ ಭಾರತೀಯರಾದ ನಾವು ಹೊಸ ಜೀವನವನ್ನು ಪ್ರಾರಂಭಿಸುತ್ತಿದ್ದೇವೆ. ಬ್ರಿಟಿಷರ ಆಳ್ವಿಕೆಯಿಂದ ಬಿಡುಗಡೆಗೊಂಡು ಹೊಸ ವೈರುದ್ಯಗಳನ್ನು ರಾಜಕೀಯವಾಗಿ ನಾವು ಸಮಾನತೆ ಒಬ್ಬ ವ್ಯಕ್ತಿಗೆ ಒಂದು ಮತದ ಸಮಾನತೆ ಪಡೆದಿದ್ದೇವೆ. ಆದರೆ ಸಾಮಾಜಿಕ, ಆರ್ಥಿಕ ಅಸಮಾನತೆ ಇನ್ನೂ ಇದೆ. ಇಲ್ಲವಾದರೆ, ಇದಕ್ಕೆ ಒಳಗಾದ ಜನ ಈ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಧ್ವಂಸ ಮಾಡುತ್ತಾರೆ ಎಂದು ಹೇಳಿದ್ದರು. ಇದನ್ನು ಹೇಳಿ 75 ವರ್ಷ ಕಳೆದರೂ ಸಾಮಾಜಿಕ, ಆರ್ಥಿಕ ಅಸಮಾನತೆ ಹೋಗಿಲ್ಲವಾಗಿದೆ ಇಂತಹ ಕಾಲಘಟ್ಟದಲ್ಲಿ ರಿಪಬ್ಲಿಕನ್ ಪಾರ್ಟಿಗೆ ಜೀವ ತುಂಬುವ ಕೆಲಸ ನೀವು ಮಾಡುತ್ತಿದ್ದೀರಿ ಎಂದರು.

ಸಾಮಾಜಿಕ, ಆರ್ಥಿಕ ಅಸಮಾನತೆ ಹೊಗಲಾಡಿಸುವ ಕನಸು ಸಕಾರಗೊಳಿಸಲು ನೆಹರು ಅವರ ಬಳಿ ಮೂರು ಬಾರಿ ಯೋಜನೆ ಮತ್ತು ಹಣಕಾಸು ಸಚಿವಾಲಯ ಕೊಡಿ. ಕಾನೂನು ಸಚಿವನಾಗಿ ಕಾನೂನು ರಚಿಸಲಾಗಿದೆ. ಅದನ್ನು ಹೇಗೆ ಜಾರಿ ಮಾಡಬೇಕೆಂಬುದಕ್ಕೆ ನನಗೆ ಸಾಮಥ್ರ್ಯವಿದೆ ಕೊಡಿ ಎಂದರು. ನೆಹರು ಕೊಡದಿದ್ದ ಕಾರಣಕ್ಕೆ ಮಂತ್ರಿ ಸ್ಥಾನದಿಂದ ಹೊರ ಬಂದರು. ಬಳಿಕ ನೆಹರು ನೇತೃತ್ವದ ಕಾಂಗ್ರೆಸ್ ಅಂಬೇಡ್ಕರ್‍ರನ್ನು ಪಿತೂರಿ ಮಾಡಿ ಸೋಲಿಸಿದರು ಎಂದರು.

ನವಭಾರತವನ್ನು ಹೇಗೆ ಕೊಂಡೊಯ್ಯಬೇಕೆಂಬ ಸಮರ್ಥ ನಾಯಕರಿಲ್ಲದ ಪರಿಣಾಮ ನಾಲ್ಕು ಪಂಚವಾರ್ಷಿಕ ಯೋಜನೆಗಳಲ್ಲಿ ಎಸ್ಸಿ ಎಸ್ಟಿಗಳ ಅಭಿವೃದ್ಧಿಗೆ ನೆಹರು ಸರ್ಕಾರ ಒಂದು ರೂಪಾಯಿ ಕೊಡಲಿಲ್ಲ. 1984ರಲ್ಲಿ ಎಸ್ಸಿ ಎಸ್ಟಿಗೆ ಪ್ರತ್ಯೇಕ ಮೀಸಲು ಯೋಜನೆ ಶಾಸನ ಜಾರಿಗೆ ತಂದಿದ್ದು ನಾರಾಯಣ್ ಅವರಾಗಿದ್ದಾರೆ. 1952ರಿಂದ 1984ರವರೆಗಿನ 30 ವರ್ಷಗಳ ಸಮುದಾಯಕ್ಕೆ ಅನುದಾನ ಯೋಜನೆ ತರಲು ಬರಬೇಕಾಯಿತೆಂಬ ಸೂಕ್ಷ್ಮತೆ ನಿಮಗೆ ತಿಳಿದಿರಲಿ ಎಂದರು.  

ರಾಜ್ಯದಲ್ಲಿ ಎಸ್‍ಇಪಿ ಟಿಎಸ್‍ಪಿ ಯೋಜನೆ ಜಾರಿಯಲ್ಲಿದೆ, ಶೇ.24.1 ರಷ್ಟು ಹಣ ತೆಗೆದಿಡುತ್ತಿದ್ದಾರೆ. ಆದರೆ, ಸಿಎಂ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರದಲ್ಲಿ 39ಸಾವಿರ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸುತ್ತಿದ್ದಾರೆ. ಯೋಜನೆ ಆಯೋಗದ ನಿರ್ದೇಶನವನ್ನು ಉಲ್ಲಂಘಿಸಿ ದುರಾಡಳಿತ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಸಂಘಟನೆ ಮಾಡಿ ಎಂದು ತಿಳಿಸಿದರು.

ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ(ಅಠವಳೆ) ರಾಷ್ಟ್ರೀಯಾ ಕಾರ್ಯಾಧ್ಯಕ್ಷ ಡಾ.ಎಂ.ವೆಂಕಟಸ್ವಾಮಿ ಮಾತನಾಡಿ, ನ.21ಕ್ಕೆ ಕಾಂಗ್ರೆಸ್ ಸರ್ಕಾರಕ್ಕೆ ಎರಡೂವರೆ ವರ್ಷ ಪೂರ್ಣ ಆಗಲಿದೆ. ನಮ್ಮ ಪಕ್ಷವನ್ನು ತುಳಿದ ಶಾಪ ಕಾಂಗ್ರೆಸ್ ಪಕ್ಷವನ್ನು ಕಾಡುತ್ತಾ ಇಡೀ ದೇಶದಲ್ಲಿ ತನ್ನ ಅಸ್ಥಿತ್ವ ಇಲ್ಲದಂತಾಗಿದೆ. ಇದರ ವಿಮೋಚನೆಗೆ ಸಿದ್ದರಾಮಯ್ಯನವರನ್ನು ಬದಲಾಯಿಸುವ ವೇಳೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್, ಮಹದೇವಪ್ಪ, ಸತೀಶ್ ಜಾರಕಿಹೊಳಿ ಯಾರನ್ನಾದರೂ ಮಾಡಿ ದಲಿತರನ್ನೇ ಮಾಡಿ ಎಂದು ಒತ್ತಾಯಿಸಿದರು. ಮುಂದಿನ ಡಿಸೆಂಬರ್ ವೇಳೆಗೆ 10ಸಾವಿರನ್ನು ಒಳಗೊಂಡ ಕಾರ್ಯಕರ್ತರ ಬೃಹತ್ ಸಮಾವೇಶ ಮಾಡುತ್ತೇವೆಂದರು.

ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಅಠವಳೆ) ರಾಜ್ಯಾಧ್ಯಕ್ಷ ಆರ್ ಪಿಐ ಸತೀಶ್, ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಸಿ.ವೆಂಕಟರಮಣಪ್ಪ, ರಾಜ್ಯ ಖಜಾಂಚಿ ಡಾ.ಆರ್.ಚಂದ್ರಶೇಖರ್, ಮಹಿಳಾ ಘಟಕದ ರಾಜ್ಯ ಉಪಾಧ್ಯಕ್ಷೆ ದಿಲ್‍ಶಾದ್ ಸಿಕಂದರ್, ರಾಜ್ಯ ಪ್ರಧಾನ ಕಾರ್ಯದರ್ಶಿ ಚಳುವಳಿ ನಾಗೇಶ್, ದಕ್ಷಿಣ ಭಾರತ ಸಮಿತಿಯ ಉಪಾಧ್ಯಕ್ಷ ಸುಕುಮಾರ್, ಮಹೇಂದ್ರಕುಮಾರ್ ವರ್ಮಾ, ಸಂಘಟನಾ ಪ್ರಧಾನ ಕಾರ್ಯದರ್ಶಿ ಪುಲಿ ಪ್ರಸಾದ್, ಯುವ ಘಟಕದ ಅಧ್ಯಕ್ಷ ಪ್ರಶಾಂತ್, ಕಾರ್ಯಾಧ್ಯಕ್ಷ ಆಯಿರೇನಿ ಶ್ರವಣ್, ನಿಲಕಂಠಪ್ಪ, ಸುರೇಶ್ ಮದ್ದೂರು, ಜಿಲ್ಲಾ ಗೌರವಾಧ್ಯಕ್ಷ ಎನ್.ವೆಂಕಟೇಶ್, ಮೈಸೂರು ನಗರಾಧ್ಯಕ್ಷ ಎಂ.ಪಿ.ಅಭಿಷೇಕ್, ಜಿಲ್ಲಾ ಮುಖಂಡರಾದ ಕೆ.ಎಸ್.ಕಿರಣ್, ಎನ್.ಸರ್ಪಭೂಷಣ್, ಎನ್.ಶಶಾಂಕ್, ಮಣಿ, ರವಿ, ದೇವರಾಜು, ಉದಯ್ ಲಕ್ಷ್ಮಣ್ ರಾವ್, ಎಂ.ಎಸ್.ಕಿರಣ ಇನ್ನಿಯರರು ಉಪಸ್ಥಿತರಿದ್ದರು.


ಹೋರಾಟಕ್ಕೆ ದಲಿತರ ಬಳಕೆ: ಸತೀಶ್ ಕಿಡಿ

ಮೈಸೂರು: ಸ್ವಾರ್ಥ ರಾಜಕಾರಣ, ಅಧಿಕಾರಕ್ಕಾಗಿ ಪ್ರಿಯಾಂಕ ಖರ್ಗೆ ಅವರು ದಲಿತ ಸಂಘಟನೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಆರ್ ಎಸ್ ಎಸ್ ಸಂಘಟನೆಗಿಂತಲೂ ಸಮತಾ ಸೈನಿಕ ಸಮಿತಿಯ ಮೂಲಕ ದೊಡ್ಡದಾಗಿ ಬೆಳೆಸಿದ್ದಾರೆ. ಮೊದಲು ನೀವು ಇದರ ಸದಸ್ಯರಾಗಿ ಅನಂತರ ನೀಲಿ ಶಾಲು ಧರಿಸಿ. ಅದನ್ನು ಬಿಟ್ಟು ಆರ್‍ಎಸ್ ಎಸ್ ವಿರುದ್ಧದ ಹೋರಾಟಕ್ಕೆ ದಲಿತರನ್ನು ಬಳಸಿಕೊಳ್ಳುವುದು ಸರಿಯಲ್ಲ. ಸಾರ್ವಕರ್‍ರಿಂದ ಅಂಬೇಡ್ಕರ್ ಸೋತಿದ್ದು ಎಂದು ಸಿಎಂ ಸಿದ್ದರಾಮಯ್ಯ ಮೂರ್ಖರ ರೀತಿ ಹೇಳಿಕೆ ನೀಡಿದ್ದಾರೆ. ಅಲ್ಲಿ ಗೆದ್ದಿದ್ದು ಕಾಂಗ್ರೆಸ್ ಎಂಬುದನ್ನು ಮರೆಯುವಂತಿಲ್ಲ ಎಂದು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ರಾಜ್ಯಾಧ್ಯಕ್ಷ ಸತೀಶ್ ಕಿಡಿಕಾರಿದರು.