ಮೈಸೂರಿನಲ್ಲಿ ಬಾಡಿ ಕ್ರಾಫ್ಟ್ ಕ್ಲಿನಿಕ್-ಸಲೂನ್ ಉದ್ಘಾಟಿಸಿದ ಚಾಮರಾಜನಗರ ಲೋಕಸಭಾ ಕ್ಷೇತ್ರದ ಸಂಸದರಾದ ಸುನೀಲ್ ಬೋಸ್ ಮತ್ತು ಮೈಸೂರು ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್


 ವರದಿ: ನಿಷ್ಕಲ ಎಸ್.ಗೌಡ

ಮೈಸೂರು : ಚರ್ಮರೋಗ ಶಾಸ್ತ್ರ-ಆಧಾರಿತ ಸೌಂದರ್ಯವರ್ಧಕ ಚಿಕಿತ್ಸೆಗಳು ಮತ್ತು ಸಲೂನ್ ಪರಿಣತಿಯಲ್ಲಿ ಭಾರತದ ಅಗ್ರಗಣ್ಯ ಹಾಗೂ ವಿಶ್ವಾಸಾರ್ಹ ಸಂಸ್ಥೆಯಾದ ಬಾಡಿ ಕ್ರಾಫ್ಟ್ ಕ್ಲಿನಿಕ್ ಮತ್ತು ಸಲೂನ್, ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ತನ್ನ ಮೊತ್ತಮೊದಲ ಬೃಹತ್ ಮಳಿಗೆಯನ್ನು ಅನಾವರಣಗೊಳಿಸಿದೆ. 

೩,೯೫೦ ಚದರ ಅಡಿಗಳ ವಿಸ್ತಾರವಾದ ಈ ಕೇಂದ್ರವನ್ನು ಚಾಮರಾಜನಗರ ಲೋಕಾಸಭಾ ಕ್ಷೇತ್ರದ ಸಂಸದರಾದ ಸುನೀಲ್‌ಬೋಸ್ ಮತ್ತು ಮೈಸೂರು ನಗರ ಪೊಲೀಸ್ ಕಮೀಷನರ್ ಸೀಮಾ ಲಾಟ್ಕರ್ ಅವರು ಉದ್ಘಾಟಿಸಿದರು. ಸಂಸ್ಥೆಯ ವಿಶಿಷ್ಟವಾದ ’ಸಿಗ್ನೇಚರ್ ಹೈಬ್ರಿಡ್ ಎಕ್ಸ್‌ಪೀರಿಯನ್ಸ್’ (ಚರ್ಮರೋಗ ಚಿಕಿತ್ಸೆ, ಕಾಸ್ಮೆಟಾಲಜಿ ಮತ್ತು ಸಲೂನ್ ಸೇವೆಗಳ ಸಮಗ್ರ ಸಂಗಮ) ಅನ್ನು ಮೈಸೂರು ನಗರಕ್ಕೆ ಪ್ರಥಮ ಬಾರಿಗೆ ಪರಿಚಯಿಸುತ್ತಿದೆ. 

೧೯೯೭ರಲ್ಲಿ ಮಂಜುಳಾ ಗುಪ್ತಾ ಅವರಿಂದ ಸ್ಥಾಪಿಸಲ್ಪಟ್ಟ ಬಾಡಿ ಕ್ರಾಫ್ಟ್, ೨೮ ವರ್ಷಗಳ ತನ್ನ ಸಮೃದ್ಧ ಪರಂಪರೆಯಲ್ಲಿ, ತಜ್ಞರ ನೇತೃತ್ವದ ಸೌಂದರ್ಯ ಮತ್ತು ಸ್ವಾಸ್ಥ್ಯ ಸೇವೆಗಳನ್ನು ನೀಡುತ್ತಾ ಬಂದಿದೆ. ಈ ಮಳಿಗೆಯ ಸ್ಥಾಪನೆಯೊಂದಿಗೆ, ಸಂಸ್ಥೆಯು ತನ್ನ ೩೧ನೇ ಕ್ಲಿನಿಕ್ ಹಾಗೂ ೩೨ನೇ ಸಲೂನ್‌ಗೆ ಚಾಲನೆ ನೀಡಿದ್ದು, ಮಹಾನಗರಗಳನ್ನು ಮೀರಿ ತನ್ನ ಕಾರ್ಯಕ್ಷೇತ್ರವನ್ನು ವಿಸ್ತರಿಸಿದೆ.

ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಬಾಡಿ ಕ್ರಾಫ್ಟ್ ಸಂಸ್ಥಾಪಕಿ ಮಂಜುಳಾ ಗುಪ್ತಾ, "ಬಾಡಿ ಕ್ರಾಫ್ಟ್ ಅನ್ನು ಮೈಸೂರಿಗೆ ತರುತ್ತಿರುವುದು ನನಗೆ ಅಪಾರ ಹರ್ಷವನ್ನುಂಟುಮಾಡಿದೆ. ಸುಮಾರು ಮೂರು ದಶಕಗಳಿಂದ, ನಮ್ಮ ಗ್ರಾಹಕರಿಗೆ ವಿಶ್ವದರ್ಜೆಯ, ಚರ್ಮರೋಗ ತಜ್ಞರ ಬೆಂಬಲಿತ ಸೇವೆಗಳನ್ನು ವೈಯಕ್ತಿಕ ಕಾಳಜಿಯೊಂದಿಗೆ ನೀಡುವುದೇ ನಮ್ಮ ಧ್ಯೇಯ. ಈ ಮಳಿಗೆಯು ನಮ್ಮ ಈ ಸುದೀರ್ಘ ಪಯಣದ ದ್ಯೋತಕ. ಮೈಸೂರಿನ ಜನರು ಬಾಡಿ ಕ್ರಾಫ್ಟ್‌ನ ಸಮಗ್ರ ಸೌಂದರ್ಯ ಮತ್ತು ಸ್ವಾಸ್ಥ್ಯದ ಅನುಭವವನ್ನು ಪಡೆಯಲಿದ್ದಾರೆ ಎಂಬುದು ನನಗೆ ಸಂತಸ ತಂದಿದೆ," ಎಂದು ಹರ್ಷ ವ್ಯಕ್ತಪಡಿಸಿದರು.

ಜಾಗತಿಕ ಗುಣಮಟ್ಟದ ಸೇವೆಗಳನ್ನು ಸ್ಥಳೀಯವಾಗಿ ಬಯಸುವ ವಿವೇಚನಾಶೀಲ ಗ್ರಾಹಕರಿಂದಾಗಿ, ಮೈಸೂರು ಪ್ರೀಮಿಯಂ ಸೌಂದರ್ಯ ಮತ್ತು ಸ್ವಾಸ್ಥ್ಯ ಸೇವೆಗಳ ಪ್ರಮುಖ ಬೆಳವಣಿಗೆಯ ಮಾರುಕಟ್ಟೆಯಾಗಿ ಹೊರಹೊಮ್ಮುತ್ತಿದೆ. ಈ ಹಿನ್ನೆಲೆಯಲ್ಲಿ, ಬಾಡಿ ಕ್ರಾಫ್ಟ್ ಸಂಸ್ಥೆಯು ಮೈಸೂರಿನಲ್ಲಿ ತನ್ನ ಮಳಿಗೆಯನ್ನು ಸ್ಥಾಪಿಸಲು ಬಹಳ ಹಿಂದಿನಿಂದಲೇ ಯೋಜನೆ ರೂಪಿಸಿತ್ತು.  ಈ ಕುರಿತು ಮಾತನಾಡಿದ ಬಾಡಿ ಕ್ರಾಫ್ಟ್ ಕ್ಲಿನಿಕ್ಸ್‌ನ ಸಂಸ್ಥಾಪಕರು ಮತ್ತು ವೈದ್ಯಕೀಯ ನಿರ್ದೇಶಕರಾದ, ಪ್ರಮಾಣೀಕೃತ ಚರ್ಮರೋಗ ತಜ್ಞೆ ಡಾ. ಮಿಕ್ಕಿ ಸಿಂಗ್, "ಮೈಸೂರು ನಮಗೆ ಯಾವಾಗಲೂ ಎರಡನೇ ಮನೆಯಂತೆ ಭಾಸವಾಗಿದೆ. ಬೆಂಗಳೂರಿನ ನಮ್ಮ ಮಳಿಗೆಗಳಲ್ಲಿ ಮೈಸೂರಿನ ಅನೇಕ ಗ್ರಾಹಕರಿಗೆ ನಾವು ಸೇವೆ ನೀಡಿದ್ದೇವೆ. ಇಲ್ಲಿ ಮಳಿಗೆ ತೆರೆಯುವುದು ನಮ್ಮ ಪಾಲಿಗೆ ಒಂದು ಸಹಜ ಆಲೋಚನೆ. ಈ ಮೂಲಕ ಇಂಜೆಕ್ಟಬಲ್ಸ್, ತೂಕ ನಿರ್ವಹಣೆ, ಮತ್ತು ಇತರ ಸುಧಾರಿತ ಚರ್ಮರೋಗ ಚಿಕಿತ್ಸೆಗಳನ್ನು ನಾವು ಜಾಗತಿಕ ಗುಣಮಟ್ಟವನ್ನು ಬಯಸುವ ಮೈಸೂರಿನ ವಿವೇಚನಾಶೀಲ ಗ್ರಾಹಕರಿಗೆ ತಲುಪಿಸಲು ಉತ್ಸುಕರಾಗಿದ್ದೇವೆ," ಎಂದರು.

ಗ್ರಾಹಕರು ಬಾಡಿ ಕ್ರಾಫ್ಟ್ ಕ್ಲಿನಿಕ್‌ನ ಅತ್ಯುನ್ನತ ಕಾಸ್ಮೆಟಾಲಜಿ ಮತ್ತು ಚರ್ಮರೋಗ ಚಿಕಿತ್ಸಾ ಸೇವೆಗಳನ್ನು ನಿರೀಕ್ಷಿಸಬಹುದು. ಇದರಲ್ಲಿ, ಮೊಡವೆ, ವಯಸ್ಸಾಗುವಿಕೆ ತಡೆ, ಚರ್ಮದ ಪುನಶ್ಚೇತನ, ತೂಕ ಇಳಿಕೆ ಮತ್ತು ಸುಧಾರಿತ ಕೂದಲು ಬೆಳವಣಿಗೆಯಂತಹ ವಿಶೇಷ ಪರಿಹಾರಗಳು ಸೇರಿವೆ.

ಸಲೂನ್ ವಿಭಾಗದಲ್ಲಿ, ಮೈಸೂರಿನ ಗ್ರಾಹಕರು ಪರಿಣಿತ ಕೇಶ ವಿನ್ಯಾಸ, ಹೇರ್ ಕಲರಿಂಗ್, ಕರ್ಲ್ ಕೇರ್, ಸ್ಪಾ ಮತ್ತು ಸ್ವಾಸ್ಥ್ಯ ಚಿಕಿತ್ಸೆಗಳು ಹಾಗೂ ಸಮಗ್ರ ಅಂದಗೊಳಿಸುವ ಸೇವೆಗಳಲ್ಲಿ ಬಾಡಿ ಕ್ರಾಫ್ಟ್‌ನ ಪರಿಣತಿಯನ್ನು ಅನುಭವಿಸಬಹುದು. ಈ ಎಲ್ಲಾ ಸೇವೆಗಳನ್ನು ತರಬೇತಿ ಪಡೆದ ಸ್ಟೈಲಿಸ್ಟ್‌ಗಳು ಮತ್ತು ತಜ್ಞರು ಒದಗಿಸಲಿದ್ದಾರೆ ಎಂದರು.

ಬಾಡಿ ಕ್ರಾಫ್ಟ್ ಕ್ಲಿನಿಕ್ಸ್ ಮತ್ತು ಸಲೂನ್ಸ್‌ನ ಸಿಇಒ ಸಾಹಿಲ್ ಗುಪ್ತಾ ಈ ಕುರಿತು ಮಾತನಾಡಿ, "ಬಾಡಿ ಕ್ರಾಫ್ಟ್‌ನಲ್ಲಿ, ನಾವು ಕೇವಲ ವಿಸ್ತರಣೆಗಾಗಿ ಬೆಳೆಯುವುದಿಲ್ಲ, ಒಂದು ಉದ್ದೇಶದೊಂದಿಗೆ ಬೆಳೆಯುತ್ತೇವೆ. ಮೈಸೂರಿಗೆ ನಮ್ಮ ಪ್ರವೇಶವು, ಪ್ರತಿ ಹೊಸ ಮಾರುಕಟ್ಟೆಯಲ್ಲೂ ಗುಣಮಟ್ಟ, ಸ್ಥಿರತೆ ಮತ್ತು ಗ್ರಾಹಕರ ನಂಬಿಕೆಗೆ ಆದ್ಯತೆ ನೀಡುವ ನಮ್ಮ ಚಿಂತನಶೀಲ ವಿಸ್ತರಣಾ ಯೋಜನೆಯ ಭಾಗವಾಗಿದೆ," ಎಂದು ಹೇಳಿದರು.

ಈ ಶುಭಾರಂಭದ ಅಂಗವಾಗಿ, ಬಾಡಿ ಕ್ರಾಫ್ಟ್ ಸಂಸ್ಥೆಯು ಆಕರ್ಷಕ ಆರಂಭಿಕ ಕೊಡುಗೆಗಳನ್ನು ಘೋಷಿಸಿದೆ. ಮೊದಲ ಬಾರಿಗೆ ಸಲೂನ್‌ಗೆ ಭೇಟಿ ನೀಡುವ ಗ್ರಾಹಕರಿಗೆ ೫೦% ರಿಯಾಯಿತಿ ಹಾಗೂ ಉಚಿತ ಸೇವೆಗಳನ್ನು ನೀಡಲಾಗುತ್ತಿದೆ. ಹಾಗೆಯೇ, ಕ್ಲಿನಿಕ್ ಗ್ರಾಹಕರಿಗಾಗಿ, ಆಯ್ದ ಕ್ಲಿನಿಕ್ ಚಿಕಿತ್ಸೆಗಳ ಮೇಲೆ ೪೦% ವರೆಗೆ ರಿಯಾಯಿತಿ ಮತ್ತು ಉಚಿತ ವೈದ್ಯಕೀಯ ಸಮಾಲೋಚನೆಯನ್ನು ನೀಡಲಾಗುತ್ತಿದೆ.

ಬಾಡಿ ಕ್ರಾಫ್ಟ್ ಸಲೂನ್‌ನ ನಿರ್ದೇಶಕಿ ಮತ್ತು ಸೃಜನಾತ್ಮಕ ವಿಭಾಗದ ಮುಖ್ಯಸ್ಥೆ ಕು. ಸ್ವಾತಿ ಗುಪ್ತಾ ಇತರರು ಇದ್ದರು.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು