ವರದಿ: ನಿಷ್ಕಲ ಎಸ್.ಗೌಡ
ಶುಕ್ರವಾರ ಎಸ್‌ಎಸ್ ನಗರದಲ್ಲಿರುವ ‘ಅಪ್ನಾಘರ್’ ಆವರಣದಲ್ಲಿ ನೂತನ ಮಸೀದಿ ನಿರ್ಮಾಣ ಕಾಮಗಾರಿಯ ಶಂಕುಸ್ಥಾಪನೆ ಸಮಾರಂಭದಲ್ಲಿ ಶಾಸಕ ತನ್ವೀರ್ ಸೇಠ್ ಅವರೊಂದಿಗೆ ಭಾಗವಹಿಸಿ ಬಳಿಕ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಶೇ. 90 ರಷ್ಟು ಮುಸ್ಲಿಂ ಸಮುದಾಯ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದೆ, ತನ್ವೀರ್ ಸೇಠ್ ಅವರು ಸತತವಾಗಿ 6 ಬಾರಿ ವಿಧಾನಸಭೆಗೆ ಚುನಾಯಿತರಾಗುವ ಮೂಲಕ ಸೋಲಿಲ್ಲದ ಸರದಾರ ಎನಿಸಿದ್ದಾರೆ. ಈ ಹಿಂದೆ ಶಿಕ್ಷಣ, ಹಜ್, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಖಾತೆಗಳನ್ನು ಸಮರ್ಪಕವಾಗಿ ನಿಭಾಯಿಸಿದವರು, ಶಿಕ್ಷಣ ಸಚಿವರಾಗಿ ಅವರು ಶೈಕ್ಷಣಿಕ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆ ಮಾಡಿದರು. ಅನುಭವಿ ರಾಜಕಾರಣಿ, ಇವರ ಅನುಭವ ದಕ್ಷತೆ, ಜನಪರ ಆಲೋಚನೆಗಳು, ನಾಯಕತ್ವವನ್ನು ಗಮನಿಸಿ ಅವರಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷರ ಸ್ಥಾನವನ್ನೂ ಸಹ ನೀಡಲಾಗಿದೆ. ಇದರಿಂದ ಒಂದು ವೇಳೆ ಸಚಿವ ಸಂಪುಟ ಪುರ್‌ರಚನೆ ಸಾಧ್ಯತೆಗಳು ಇದ್ದರೆ, ಸಾಮಾಜಿಕ ನ್ಯಾಯದಡಿ ಮುಖ್ಯಮಂತ್ರಿಗಳು ತನ್ವೀರ್ ಸೇಠ್ ಅವರಿಗೆ ಗೃಹಮಂತ್ರಿ ಸ್ಥಾನ ನೀಡಬೇಕು. ಇದು ರಾಜ್ಯದ ಸಮಸ್ತ ಮುಸ್ಲಿಂ ಸಮುದಾಯದ ಒತ್ತಾಯವಾಗಿದೆ ಎಂದರು.
ಪ್ರವಾದಿ ಮೊಹಮ್ಮದ್ ಪೈಗಂಬರ್ (ಸ) ಅವರ ಹುಟ್ಟುಹಬ್ಬವಾದ ಈದ್‌ಮಿಲಾದ್ ಹಬ್ಬವನ್ನು ಮೈಸೂರಿನಲ್ಲಿ ಅದ್ದೂರಿಯಾಗಿ ಆಚರಣೆ ಮಾಡುವ ಆಲೋಚನೆ ಇತ್ತು. ಈ ಬಗ್ಗೆ ಶಾಸಕರ ಅಭಿಪ್ರಾಯ ಕೇಳಿದಾಗ ಅವರು ‘ಪೈಗಂಬರ್ ಅವರೂ ಸಹ ಒಬ್ಬ ಅನಾಥರಾಗಿದ್ದವರು. ನಾವು ಅನಾಥ ಮಕ್ಕಳಿಗೆ ಉಪಕಾರವಾಗುವಂತಹ ಉತ್ತಮ ಕಾರ್ಯ ಮಾಡುವ ಮೂಲಕ ಪೈಗಂಬರ್ ಅವರ ಜನ್ಮದಿನ ಆಚರಿಸೋಣ ಎಂದು ಸಲಹೆ ನೀಡಿದ ಮೇರೆಗೆ ‘ಅಪ್ನಾಘರ್’ ಆವರಣದಲ್ಲಿ ನೂತನ ಮಸೀದಿ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ ಎಂದು ಹೇಳಿದರು. ಇದೇ ವೇಳೆ ಅವರು ಸಮಸ್ತ ನಾಗರಿಕರಿಗೆ ಈದ್ ಮಿಲಾದ್ ಹಬ್ಬದ ಶುಭಾಶಯಗಳನ್ನು ಕೋರಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಅಫ್ರೋಜ್ ಖಾನ್ ಇತರರು ಇದ್ದರು.
0 ಕಾಮೆಂಟ್‌ಗಳು