ವರದಿ: ನಿಷ್ಕಲ ಎಸ್.ಗೌಡ, ಮೈಸೂರು
ಮೈಸೂರು : ನಗರದ ದೇವರಾಜ ಮೊಹಲ್ಲಾದ ಹೆಗ್ಡೆ ಸ್ಕೇರ್‍ನಲ್ಲಿ ನೂತನವಾಗಿ ಪ್ರಾರಂಭಿಸಲಾದ ‘ಝೀಕೋಡ್’ ಶೋರೂಂ ಅನ್ನು ಹೆಗ್ಡೆ ಸ್ಕೇರ್ ಮಾಲೀಕರು ಮತ್ತು ಹಿರಿಯ ವಕೀಲರಾದ ಹರೀಶ್ ಹೆಗ್ಡೆ ಅವರು ದೀಪ ಬೆಳಗುವ ಮೂಲಕ ಚಾಲನೆ ನೀಡಿದರು.
ಸಿಯಾರಾಂ ಕಂಪನಿಗೆ ಸೇರಿದ್ದ ಝೀಕೋಡ್, ಪ್ಯಾನ್ ಇಂಡಿಯಾದಲ್ಲಿದೆ. ಮೈಸೂರಿಗೆ ಪ್ರಥಮಬಾರಿಗೆ ಪಾದಾರ್ಪಣೆ ಮಾಡಿದೆ. ಈ ಶೋರೂಂನಲ್ಲಿ ಉತ್ಕøಷ್ಟ ಗುಣಮಟ್ಟದ ವಸ್ತ್ರಗಳು ಲಭ್ಯವಿದ್ದು, ಕಡಿಮೆ ಬೆಲೆಯಲ್ಲಿ ಗ್ರಾಹಕರಿಗೆ ದೊರೆಯುತ್ತವೆ. ಮೈಸೂರು ಮತ್ತು ಸುತ್ತಮುತ್ತಲಿನ ಗ್ರಾಹಕರಿಗೆ ಇದರಿಂದ ಹೆಚ್ಚು ಅನುಕೂಲವಾಗುತ್ತದೆ ಎಂದು ಹೇಳಿದರು.
ಸಂಸ್ಥೆಯ ಸಿಇಓ ಜಯಕಾರ್ ಶೆಟ್ಟಿಗಾರ್ ಮಾತನಾಡಿ, ಝೀಕೋಡ್ ಜನಪ್ರಿಯ ಸಿಯಾರಾಂ ಬ್ರಾಂಡ್ ಆಗಿದ್ದು, ಪ್ರಥಮ ಬಾರಿಗೆ ಮೈಸೂರಿಗೆ ಬಂದಿದೆ. ಮಹಿಳೆಯರು, ಮಕ್ಕಳು, ಪುರುಷರು ಮತ್ತು ಯುವಕರಿಗೆ ನವ ನವೀನ ಉಡುಗೆಗಳು ಲಭ್ಯವಿದೆ. ಎಲ್ಲ ಬಟ್ಟೆಗಳು 149 ನಿಂದ 999 ಬೆಲೆಯ ಒಳಗಿದೆ. ಮೈಸೂರಿನ ಬಹುತೇಕ ಗ್ರಾಹಕರು ಬಟ್ಟೆ ಖರೀದಿಗೆ ಬೆಂಗಳೂರಿಗೆ ಬರುತ್ತಿದ್ದರು. ಈ ಕಾರಣದಿಂದ ಮೈಸೂರಿನಲ್ಲಿ ಶೋರೂಂ ತೆರೆಯಲಾಗಿದೆ. ಮೊದಲ ದಿನ ಶೇ.10 ಡಿಸ್ಕೌಂಟ್ ನೀಡಲಾಗಿತ್ತು.
ಈ ಸಂದರ್ಭದಲ್ಲಿ ಝೀಕೋಡ್ ಸಂಸ್ಥೆಯ ಪಂಕಜ್‍ಸಿಂಗ್ ಅಭಿಜಿತ್ ಇದ್ದರು.
0 ಕಾಮೆಂಟ್‌ಗಳು