ಮೈಸೂರು : 75 ವರ್ಷ ತುಂಬಿದ ನಾಯಕರು ಅಧಿಕಾರದಿಂದ ಕೆಳಗಿಳಿದು ಸಲಹಾ ಮಂಡಳಿ ಸೇರಬೇಕೆಂಬ ಭಾರತೀಯ ಜನತಾ ಪಕ್ಷದ ಅಲಿಖಿತ ಆಂತರಿಕ ಸಂವಿಧಾನದ ಪ್ರಕಾರ ಇದೇ ಸೆಪ್ಟಂಬರ್ 17 ರಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ 75 ವರ್ಷ ತುಂಬಲಿದ್ದು, ಅವರೂ ಸಹ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡುವರೇ ಎಂದು ಡಿಸಿಸಿ ಪ್ರಧಾನ ಕಾರ್ಯದರ್ಶಿ ರೇಹಾನ್ ಬೇಗ್ ಪ್ರಶ್ನಿಸಿದ್ದಾರೆ.
ಇನ್ಸ್‍ಟ್ರಾಗ್ರಾಂ ಮೂಲಕ ಅವರು ನೀಡಿರುವ ಹೇಳಿಕೆ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗಿದೆ.
ಆದರೇ ಆರ್‍ಎಸ್‍ಎಸ್ ಸರಸಂಘ ಚಾಲಕರಾದ ಮೋಹನ್ ಭಾಗವತ್ ಅವರು ಪ್ರಧಾನಿ ಮೋದಿ ಅವರಿಗಿಂತ 6 ದಿನ ಮುಂಚೆಯೇ 75 ದಾಟಲಿರುವ ಕಾರಣ, ಈ ವಿಚಾರವನ್ನು ಅಲ್ಲಗಳೆದು ಈ ಬಗ್ಗೆ ಬಿಜೆಪಿ ಸಂವಿಧಾನದಲ್ಲಿ ಲಿಖಿತವಾಗಿಲ್ಲ ಎಂದು ಸ್ಪಷ್ಟನೇ ನೀಡುವ ಮೂಲಕ ತಮ್ಮ ಸ್ಥಾನವನ್ನೂ ಸಹ ಭದ್ರ ಮಾಡಿಕೊಂಡಿದ್ದಾರೆ.
ಈ ಕುರಿತು ಇನ್ಸ್‍ಟ್ರಾಗ್ರಾಂನಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರುವ ರೇಹಾನ್ ಬೇಗ್, ಕಳೆದ 12 ವರ್ಷಗಳ ಮೋದಿ ಆಡಳಿತವನ್ನು ವ್ಯಂಗ್ಯವಾಗಿ ಟೀಕಿಸಿದ್ದು, ಮೋದಿ ಅವರ ನೋಟ್ ಬಂಧಿ ಫೇಲ್ಯೂರ್, 2ಕೋಟಿ ಉದ್ಯೋಗ ನೀಡುವ ಯೋಜನೆ ಫೆಲ್ಯೂರ್, ದೇಶದ ಜನರಿಗೆ ಪಕ್ಕಾ ಮನೆ ನೀಡಿಲ್ಲ, ಜತೆಗೆ ಕೋಮುವಾದಿ ರಾಜಕಾರಣದಿಂದ ಇಂದಿಗೂ ಒಂದು ಸಮುದಾಯದ ಜನರು ಭಯದಿಂದ ಬದುಕುವಂತಾಗಿದೆ ಎಂದು ದೂರಿದ್ದಾರೆ.
ನಿತಿನ್ ಗಡ್ಕರಿ ಪುತ್ರರಿಗೆ ಲಾಭ
ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಎಥೆನಾಲ್ ಮಿಶ್ರಣ ನೀತಿಯಿಂದ ಅವರ ಪುತ್ರರ ಕಂಪನಿಗಳಿಗೆ ಆರ್ಥಿಕವಾಗಿ ಭಾರಿ ಲಾಭವಾಗುತ್ತಿದೆ. ಈ ಬಗ್ಗೆ ಲೋಕಪಾಲ ತನಿಖೆ ನಡೆಸುವಂತೆ ಪ್ರಧಾನಿ ನರೇಂದ್ರ ಮೋದಿಯವರನ್ನು ಆಗ್ರಹಿಸಿದ ರೇಹಾನ್ ಬೇಗ್, ಗಡ್ಕರಿ ಅವರ ಪುತ್ರರ ಒಡೆತನದ ಕಂಪನಿಗಳಿಂದ ಎಥೆನಾಲ್ ಪೂರೈಕೆ, ಆದಾಯ ಮತ್ತು ಷೇರು ಮೌಲ್ಯದಲ್ಲಿ ಭಾರೀ ಏರಿಕೆ ಕುರಿತು ಗಂಭೀರ ಆರೋಪ ಮಾಡಿದ್ದಾರೆ.
‘ಎಥೆನಾಲ್ ಉತ್ಪಾದನೆ ಹೆಚ್ಚಿಸಲು ಸಚಿವ ನಿತಿನ್ ಗಡ್ಕರಿ ಅವರು 2014 ರಿಂದಲೂ ಲಾಬಿ ನಡೆಸುತ್ತಿದ್ದಾರೆ. 2018 ರಲ್ಲಿ ಎಥೆನಾಲ್ ಉತ್ಪಾದಿಸುವ ಐದು ಘಟಕ ಸ್ಥಾಪಿಸುವುದಾಗಿ ಪ್ರಕಟಿಸಿದ್ದರು. ದೇಶದಲ್ಲಿ ಎಥೆನಾಲ್ ಮಿಶ್ರಿತ ಪೆಟ್ರೋಲ್ ರೂ. 55, ಡೀಸೆಲ್ 50 ರೂ.ಗೆ ಮಾರಾಟ ಮಾಡುವುದಾಗಿ ಘೋಷಣೆ ಮಾಡಿದ್ದರು,' ಎಂದು ಹೇಳಿರುವ ರೇಹಾನ್ ಬೇಗ್,
‘ಪ್ರಸ್ತುತ ದೇಶದಲ್ಲಿ ಒಟ್ಟು ಉತ್ಪಾದಿತ 672 ಕೋಟಿ ಲೀಟರ್ ಎಥೆನಾಲ್‍ನಲ್ಲಿ ಶೇ. 56.75 ರಷ್ಟು ಕಬ್ಬು, ಶೇ. 38.08 ರಷ್ಟು ಆಹಾರ ಧಾನ್ಯಗಳಿಂದ ಉತ್ಪಾದಿಸಲಾಗುತ್ತಿದೆ. ತ್ಯಾಜ್ಯದಿಂದ ಒಂದೇ ಒಂದು ಲೀಟರ್ ಎಥೆನಾಲ್ ಉತ್ಪಾದಿಸಲು ಸಾಧ್ಯವಾಗಿಲ್ಲ,'' ಎಂದು ದೂರಿದರು.
‘ಸಚಿವ ನಿತಿನ್ ಗಡ್ಕರಿ ಮತ್ತವರ ಆಪ್ತರು ಮಹಾರಾಷ್ಟ್ರದ ಸಕ್ಕರೆ ಕಾರ್ಖಾನೆಗಳಲ್ಲಿ ವ್ಯವಹಾರಗಳ ಹಿತಾಸಕ್ತಿ ಹೊಂದಿದ್ದಾರೆ. ಹೀಗಾಗಿ ಕಬ್ಬಿನಿಂದ ಉತ್ಪಾದಿಸುವ ಎಥೆನಾಲ್‍ಗೆ ಪ್ರಚಾರ ನೀಡಲಾಗುತ್ತಿದೆ,''
‘ಸಚಿವ ನಿತಿನ್ ಗಡ್ಕರಿ ಅವರ ಪುತ್ರ ನಿಖಿಲ್ ಗಡ್ಕರಿ ಒಡೆತನದ ಸಿಯಾನ್ ಆಗ್ರೋ ಇಂಡಸ್ಟ್ರೀಸ್ ಆಂಡ್ ಇನ್‍ಫ್ರಾಸ್ಟ್ರಕ್ಚರ್, ಸಾರಂಗ್ ಗಡ್ಕರಿ ನಿರ್ದೇಶಕರಾಗಿರುವ ಮಾನಸ್ ಅಗ್ರೋ ಇಂಡಸ್ಟ್ರೀಸ್ ಕಂಪನಿಗಳು ಎಥೆನಾಲ್ ಪೂರೈಕೆ ಮಾಡುತ್ತಿವೆ. ಸಿಯಾನ್ ಆಗ್ರೋ ಆದಾಯ 18 ಕೋಟಿ ರೂ.ಗಳಿಂದ ಏಕಾಏಕಿ 523 ಕೋಟಿ ರೂ.ಗಳಿಗೆ ಏರಿಕೆಯಾಗಿದೆ. ಷೇರು ಮೌಲ್ಯ 31.55 ರೂ.ಗಳಿಂದ 895 ರೂ.ಗಳಿಗೆ ಹೆಚ್ಚಿದೆ. ಇ20 ಪೆಟ್ರೋಲ್ (ಎಥೆನಾಲ್ ಮಿಶ್ರಿತ) ಬಳಕೆ ಉತ್ತೇಜನದ ಹಿಂದೆ ಗಡ್ಕರಿ ಮತ್ತವರ ಪುತ್ರರ ಕಂಪನಿಗಳಿಗೆ ಲಾಭ ಮಾಡಿಕೊಡುವ ಉದ್ದೇಶ ಅಡಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಸಚಿವ ನಿತಿನ್ ಗಡ್ಕರಿ ಮೇಲಿನ ಆರೋಪಕ್ಕೆ ಲೋಕಪಾಲ ತನಿಖೆಗೆ ಆದೇಶ ನೀಡಬೇಕು,'' ಎಂದು ರೇಹಾನ್ ಬೇಗ್ ಒತ್ತಾಯಿಸಿದ್ದಾರೆ.
0 ಕಾಮೆಂಟ್‌ಗಳು