ಬೀದಿ ಬದಿ ವ್ಯಾಪಾರಿಗಳ ತಳ್ಳುವ ಗಾಡಿಗಳನ್ನು ಜೆಸಿಬಿ ಯಂತ್ರಗಳು ಧ್ವಂಸ ಮಾಡುತ್ತಿರುವ ದೃಶ್ಯಗಳು ಮಾದ್ಯಮಗಳಲ್ಲಿ ಬಿತ್ತರವಾಗುತ್ತಿದ್ದಂತೆ ಪಾಲಿಕೆ ಅಧಿಕಾರಿಗಳು ಬೀದಿ ಬದಿ ವ್ಯಾಪಾರಿಗಳನ್ನು ತೆರವುಗೊಳಿಸಿಲ್ಲ ಎಂದು ಸ್ಪಷ್ಟೀಕರಣ ನೀಡಿದೆ.
ಹಾಗಾದರೆ, ಜೆಸಿಬಿ ಯಂತ್ರಗಳು ಧ್ವಂಸ ಮಾಡುತ್ತಿರುವ ದೃಶ್ಯಗಳು ಸುಳ್ಳೆ ಎಂದು ಪ್ರಶ್ನಿಸಿರುವ ಅವರು, ಗಣ್ಯರು ನಗರಕ್ಕೆ ಆಗಮಿಸುವಾಗ ಭದ್ರತೆ ಕಾಪಾಡುವುದು ಅಗತ್ಯವಿದೆ. ಇದರ ನಡುವೆ ಅಧಿಕಾರಿಗಳು ಮಾನವೀಯತೆಯನ್ನು ಸಹ ತೋರಬೇಕಿದೆ. ಸ್ಥಳದಲ್ಲಿ ಯಾವುದೇ ಶಾಶ್ವತ ರಚನೆಗಳು, ಕಟ್ಟಡಗಳು ಇರಲಿಲ್ಲ, ಮೊಬೈಲ್ ಕ್ಯಾಂಟಿನ್ ಅಥವಾ ತಳ್ಳುವ ಗಾಡಿಗಳ ಟೈರ್‌ಗಳನ್ನು ತೆಗೆದು ಹಾಕಿದ್ದ ಕಾರಣ ಅವುಗಳನ್ನ ಸ್ಥಳಾಂತರ ಮಾಡುವುದು ಕಷ್ಟವಾಗಿತ್ತು, ಬಡ ವ್ಯಾಪಾರಿಗಳ ಮೇಲೆ ಪಾಲಿಕೆ ಅಧಿಕಾರಿಗಳು ರೋಷಾವೇಶ ತೋರಿ ಅವುಗಳನ್ನು ಧ್ವಂಸ ಮಾಡಿ ತಮ್ಮ ವಾಹನಗಳಲ್ಲಿ ಸಾಗಿಸಿ ಬಡ ವ್ಯಾಪಾರಿಗಳಿಗೆ ನಷ್ಟ ಮಾಡುವ ಬದಲು ಪಾಲಿಕೆ ಅಧಿಕಾರಿಗಳೇ ಒಂದೆರಡು ದಿನದ ಮಟ್ಟಿಗೆ ಅವುಗಳನ್ನು ಸ್ಥಳಾಂತರ ಮಾಡಬಹುದಿತ್ತು, ಇದು ಮಾನವೀಯತೆಯ ದೃಷ್ಟಿಯಿಂದ ಸರಿಯಾಗಿತ್ತು, ಆದರೇ, ದಿಢೀರನೇ ದಾಳಿ ನಡೆಸಿದ್ದು ಸರಿಯಲ್ಲ ಎಂದು ರಸೂಲ್ ಬೇಸರ ವ್ಯಕ್ತಪಡಿಸಿದರು.
ಬಡ ವ್ಯಾಪಾರಿಗಳು ತಮ್ಮ ಇಡೀ ಬದುಕನ್ನು ಸಾಲದಲ್ಲೇ ಕಳೆಯುತ್ತಾರೆ. ಒಂದು ದಿನ ಅವರ ವ್ಯಾಪಾರ ನಿಂತರೆ ಒಂದು ವಾರ ಸುಧಾರಿಸಿಕೊಳ್ಳಬೇಕು. ಸಣ್ಣ ವ್ಯಾಪಾರಗಳಲ್ಲೂ ಇಂದು ಭಾರಿ ಪೈಪೋಟಿ ಇರುವ ಕಾರಣ ತಳ್ಳುವ ಗಾಡಿಗಳ ವ್ಯಾಪಾರಸ್ಥರ ಬದುಕು ಭಾರಿ ಸಂಕಷ್ಟದಲ್ಲಿದೆ. ಇನ್ನು ಮುಂದಾದರೂ ಪಾಲಿಕೆ ಅಧಿಕಾರಿಗಳು ಸ್ವಾಭಿಮಾನದಿಂದ ಬದುಕುವ ಸಣ್ಣ ಸಣ್ಣ ವ್ಯಾಪಾರಿಗಳ ರಕ್ಷಣೆಗೆ ಮುಂದಾಗಬೇಕೆಂದು ಅವರು ಒತ್ತಾಯಿಸಿದ್ದಾರೆ.
0 ಕಾಮೆಂಟ್‌ಗಳು