ವರದಿ: ನಿಷ್ಕಲ ಎಸ್.ಗೌಡ, ಮೈಸೂರು
ಮೈಸೂರು: ವಿಧಾನ ಪರಿಷತ್ ಮಾಜಿ ಸದಸ್ಯರು, ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕರು ಮತ್ತು ಉದ್ಯಮಿಗಳೂ ಆದ ಸಂದೇಶ್ ನಾಗರಾಜ್ ಆ.೩೧ ರಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಚಿತ್ರರಂಗದ ಗಣ್ಯರು ಶನಿವಾರ ಆತ್ಮೀಯವಾಗಿ ಅಭಿನಂದಿಸಿದರು.
ಸಂದೇಶ್ ಹೋಟೆಲ್‌ನಲ್ಲಿ ಏರ್ಪಡಿಸದ್ದ ಸಮಾರಂಭದಲ್ಲಿ ಚಿತ್ರ ನಿರ್ಮಾಪಕರಾದ ಚಿನ್ನೇಗೌಡರು, ಸಾರಾ ಗೋವಿಂದ್, ಫಿಲ್ಮ್ ಚೇಂಬರ್ ಅಧ್ಯಕ್ಷರಾದ ನರಸಿಂಹಲು, ನಿರ್ಮಾಪಕ ಉಮೇಶ್ ಬಣಾಕಾರ್, ಕೆ.ವಿ.ಚಂದ್ರಶೇಖರ್, ಮಹದೇವಪ್ಪ, ಎ.ಗಣೇಶ್, ವೆಂಕಟೇಶ್, ಪ್ರಿಯ ಹಾಸನ್, ಗುರುಪ್ರಸಾದ್ ಮತ್ತಿತರ ನೂರಾರು ಗಣ್ಯರು ಸಂದೇಶ್ ನಾಗರಾಜ್ ಅವರ ಗುಣಗಾನ ಮಾಡಿ ಆತ್ಮೀಯವಾಗಿ ಚಿತ್ರರಂಗದ ಪರವಾಗಿ ಆತ್ಮೀಯವಾಗಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಸಾರಾ ಗೋವಿಂದ್ ಮಾತನಾಡಿ, ಸಂದೇಶ್ ನಾಗರಾಜ್ ಅವರು, ಸ್ನೇಹ ಜೀವಿ, ಉತ್ತಮ ರಾಜಕಾರಣಿ, ಕನ್ನಡ ಚಿತ್ರರಂಗಕ್ಕೆ ಒಬ್ಬ ಮಾದರಿ ನಿರ್ಮಾಕರು. ೮೦ ವರ್ಷಗಳ ತುಂಬು ಜೀವನ ನಡೆಸಿದ್ದಾರೆ. ಅವರು ನೂರು ವರ್ಷ ಸುಖ ಮತ್ತು ಸಂತೋಷವಾಗಿ ಬಾಳಲಿ ಎಂದು ಶುಭ ಹಾರೈಸಿದರು.
0 ಕಾಮೆಂಟ್‌ಗಳು