ಮೈಸೂರು : ಕಾಂಗ್ರೆಸ್ ಪಕ್ಷದ ಮೈಸೂರು ನಗರ ಬೀದಿ ಬದಿ ವ್ಯಾಪಾರಿಗಳ ವಿಭಾಗಕ್ಕೆ ಆಯ್ಕೆಯಾಗಿರುವ ವಿವಿಧ ಪದಾಧಿಕಾರಿಗಳಿಗೆ ಜಿಲ್ಲಾ ಅಧ್ಯಕ್ಷ ಎಂ.ರಸೂಲ್ ಪಕ್ಷದ ಬಾವುಟ ನೀಡುವ ಮೂಲಕ ಅಧಿಕಾರ ಹಸ್ತಾಂತರಿಸಿದರು.
ಶುಕ್ರವಾರ ಸಂಜೆ ಎನ್‌ಆರ್ ಮೊಹಲ್ಲಾದಲ್ಲಿರುವ ಬೀದಿ ಬದಿ ವ್ಯಾಪಾರಿಗಳ ವಿಭಾಗದ ಜಿಲ್ಲಾ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಎಂ.ರಸೂಲ್ ಅವರು ನಗರದ ಸಯ್ಯಾಜಿರಾವ್ ರಸ್ತೆಯಲ್ಲಿ ವ್ಯಾಪಾರ ಮಾಡುವ ಪದಾಧಿಕಾರಿಗಳನ್ನು ಗೌರವಿಸಿ ಪಕ್ಷದ ಬಾವುಟ ನೀಡಿ ಅಧಿಕಾರವನ್ನು ಹಸ್ತಾಂತರಿಸಿದರು.
ಬಳಿಕ ಅವರು ಮಾತನಾಡಿ, ಕಾಂಗ್ರೆಸ್ ಪಕ್ಷವು ಸದಾ ಕಾಲ ಬೀದಿ ಬದಿ ವ್ಯಾಪಾರಿಗಳ ಜತೆಗಿದೆ. ಇದೀಗ ಅಧಿಕಾರ ಪಡೆದಿರುವ ಮುಖಂಡರು ನಗರದಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ಯಾವುದೇ ರೀತಿಯ ಸಮಸ್ಯೆ ಬಂದರೂ ಅದನ್ನು ಪರಿಹರಿಸಬೇಕು. ನಗರದಲ್ಲಿ ವ್ಯಾಪಾರ ಮಾಡುವಾಗ ಕಾನೂನು ಕಟ್ಟಳೆಗಳನ್ನು ಪಾಲಿಸಬೇಕು, ಪಾದಚಾರಿಗಳಿಗೆ ಯಾವುದೇ ರೀತಿಯಲ್ಲೂ ತೊಂದರೆ ಉಂಟಾಗದಂತೆ ಕ್ರಮ ವಹಿಸಬೇಕು. ವ್ಯಾಪಾರಿಗಳಿಗೆ ಮೈಸೂರು ನಗರಪಾಲಿಕೆಯಿಂದ ಲೈಸೆನ್ಸ್ ಸಿಗದಿದಲ್ಲಿ ಕೂಡಲೇ ನಮ್ಮ ಕಚೇರಿಯನ್ನು ಸಂಪರ್ಕಿಸಿ ಸೂಕ್ತ ದಾಖಲೆ ನೀಡುವ ಮೂಲಕ ಲೈಸೆನ್ಸ್ ಪಡೆದುಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಜುನೇದ್ ಅಹಮದ್, ಅಲೀಂ ಅಹಮದ್, ದರಾರ್, ಸೈಯದ್ ಶಾರೀಖ್, ಅನಿಲ್ ಕುಮಾರ್, ಅಫ್ರೋಜ್ ಖಾನ್ ಮತ್ತಿತರರು ಇದ್ದರು.
0 ಕಾಮೆಂಟ್‌ಗಳು