ಹೊಸದಿಲ್ಲಿ: ಕೆಪಿಸಿಸಿ ಲೀಗಲ್ ಅಂಡ್ ಹ್ಯೂಮನ್ ರೈಟ್ಸ್ ಅಂಡ್ ಆರ್‍ಟಿಐ ವಿಭಾಗದ ಮುಖಂಡರು ಶುಕ್ರವಾರ ದೆಹಲಿಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು.
ದೆಹಲಿಯ ಜಂತರ್‍ಮಂತರ್‍ನಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ಕರ್ನಾಟಕಕ್ಕೆ ಕೇಂದ್ರ ಸರ್ಕಾರದಿಂದ ಬರಬೇಕಿರುವ ಜಿಎಸ್‍ಟಿ ಬಾಕಿ ಮೊತ್ತವನ್ನು ಕೂಡಲೇ ಬಿಡುಗಡೆ ಮಾಡುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಹಿರಿಯ ವಕೀಲರಾದ ಜೆ.ಎನ್.ಲಕ್ಷ್ಮಣ್ ಅವರು ಮಾತನಾಡಿ, ಕರ್ನಾಟಕ ರಾಜ್ಯವು ಕೇಂದ್ರ ಸರ್ಕಾರಕ್ಕೆ ಅತಿ ಹೆಚ್ಚು ಮೊತ್ತದ ಜಿಎಸ್‍ಟಿ ಪಾವತಿ ಮಾಡುತ್ತಿದೆ. ಆದರೇ, ಕರ್ನಾಟಕಕ್ಕೆ ಕೇವಲ ಶೇ.11 ಮಾತ್ರ ವಾಪಸ್ ಕೊಡಲಾಗುತ್ತಿದೆ. ಇದು ಅನ್ಯಾಯ, ಬೇರೆ ರಾಜ್ಯಗಳು ಕಡಿಮೆ ಜಿಎಸ್‍ಟಿ ಪಾವತಿ ಮಾಡುತ್ತಿದ್ದರೂ ಅವರಿಗೆ ಹೆಚ್ಚಿನ ಮೊತ್ತದ ಹಣವನ್ನು ವಾಪಸ್ ಮಾಡುವ ಮೂಲಕ ತಾರತಮ್ಯ ಮಾಡಲಾಗುತ್ತಿದೆ ಎಂದು ಕಿಡಿ ಕಾರಿದರು.
ನಮಗೆ ನಮ್ಮ ಜಿಎಸ್‍ಟಿ ಹಣ ವಾಪಸ್ ಕೊಡದೆ ಇರದ ಕಾರಣ ರಾಜ್ಯದಲ್ಲಿ ಅಭಿವೃದ್ಧಿ ಕೊರತೆಯಾಗಿದೆ. ಮುಂದಿನ ದಿನಗಳಲ್ಲಿ ಶೇ.16 ರಷ್ಟು ಜಿಎಸ್‍ಟಿ ಹಣ ವಾಪಸ್ ಮಾಡಬೇಕು ಎಂದು ಲಕ್ಷ್ಮಣ್ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿದರು.
ಪ್ರಜಾಪ್ರಭುತ್ವ ದೇಶದಲ್ಲಿ ಪ್ರಧಾನಿಗಳು ಎಲ್ಲ ರಾಜ್ಯಗಳನ್ನೂ ಸಮಾನವಾಗಿ ಕಾಣಬೇಕು. ಯಾವುದೇ ರೀತಿಯ ತಾರತಮ್ಯ ಮಾಡಬಾರದು. 16ನೇ ಹಣಕಾಸು ಸಮಿತಿಯಲ್ಲಿ ನಮಗೆ ಬರಬೇಕಿರುವ ಎಲ್ಲ ಬಾಕಿ ಹಣವನ್ನು 15 ದಿನಗಳಲ್ಲಿ ವಾಪಸ್ ಮಾಡಬೇಕು ಎಂದು ಒತ್ತಾಯಿಸಿದರು.
0 ಕಾಮೆಂಟ್‌ಗಳು