ವಿಶೇಷ ಪೂಜೆಯಲ್ಲಿ ಕಾಂಗ್ರೆಸ್ ಪಕ್ಷದ ಬೀದಿಬದಿ ವ್ಯಾಪಾರಿಗಳ ಘಟಕದ ಜಿಲ್ಲಾ ಅಧ್ಯಕ್ಷ ಎಂ.ರಸೂಲ್ ಭಾಗಿ
ಮೈಸೂರು : ನಗರದ ಕುರಿಮಂಡಿ ಬಡಾವಣೆಯಲ್ಲಿ ಶ್ರೀ ಕರುಮಾರಿಯಮ್ಮ ದೇವಾಲಯದಲ್ಲಿ 40ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ವಿಶೇಷ ಪೂಜೆ ನಡೆದು, ಕರಗ ಮೆರವಣಿಗೆಗೆ ಚಾಲನೆ ನೀಡಲಾಯಿತು.
ಶುಕ್ರವಾರ ಬೆಳಗ್ಗೆ 7 ಗಂಟೆಗೆ ದೇವಾಲಯದಲ್ಲಿ ವಿಶೇಷ ಪೂಜೆ ಪುನಸ್ಕಾರಗಳು ಪ್ರಾರಂಭಗೊಂಡವು. ಶ್ರೀ ಕರುಮಾರಿಯಮ್ಮ ಅವರಿಗೆ ವಿಶೇಷ ಅಲಂಕಾಲ ಮಾಡಲಾಗಿತ್ತು. ಮದ್ಯಾಹ್ನ ಸುಮಾರು 12.30ಕ್ಕೆ ಮಹಾಮಂಗಳಾರತಿ ನಡೆದು ಕರಗ ಮೆರವಣಿಗೆಗೆ ಚಾಲನೆ ನೀಡಲಾಯಿತು. ನೂರಾರು ಭಕ್ತರು ಪೂಜಾ ಕೈಂಕರ್ಯದಲ್ಲಿ ಭಾಗವಹಿಸಿ ಧನ್ಯರಾದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಬೀದಿಬದಿ ವ್ಯಾಪಾರಿಗಳ ಘಟಕದ ಜಿಲ್ಲಾ ಅಧ್ಯಕ್ಷರಾದ ಎಂ.ರಸೂಲ್ ಅವರು ಮಾತನಾಡಿ, ಈ ಹಿಂದೆ 1984ರಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ದಕ್ಷಿಣಾಮೂರ್ತಿ ಅವರು ಮೇಯರ್ ಆಗಿದ್ದ ಸಂದರ್ಭದಲ್ಲಿ ಈ ದೇವಾಲಯ ಪ್ರತಿಷ್ಠಾಪನೆ ಮಾಡಲಾಯಿತು. ಈ ದೇವಾಲಯದಲ್ಲಿ ತಮಿಳುನಾಡು ಸಂಸ್ಕøತಿಯ ದೈವಾಚರಣೆಗಳು ವಿಶೇಷವಾಗಿ ಅತ್ಯಂತ ಶ್ರದ್ಧಾ ಭಕ್ತಿಯಿಂದ ನಡೆಯುತ್ತವೆ. ಯಾವುದೇ ಧರ್ಮ, ಜಾತಿ ಬೇಧವಿಲ್ಲದೆ ಈ ಭಾಗದ ಜನರು ಕರಗ ಮಹೋತ್ಸವದಲ್ಲಿ ಮತ್ತು ದೇವಾಲಯದ ಪೂಜಾ ಕೈಂಕರ್ಯಗಳಲ್ಲಿ ಭಾಗವಹಿಸುವುದು ವಿಶೇಷವಾಗಿದೆ ಎಂದರು.
ದಿವಂಗತ ಎಂ.ಆರ್ಮುಗಂ,ವಿ.ಪಿ.ಜಾರ್ಜ್ ಅವರು ಈ ದೇವಾಲಯದ ನಿರ್ಮಾತೃಗಳು ಅವರನ್ನು ಇಂದು ನೆನಪಿಸಿಕೊಳ್ಳಬೇಕು. ಅವರ ಮಕ್ಕಳು ಮತ್ತು ಬಡಾವಣೆಯ ಮುಖಂಡ ನೇತೃತ್ವದಲ್ಲಿ ಈ ಎಲ್ಲ ಪೂಜಾ ಕಾರ್ಯಗಳು ನಡೆಯುತ್ತಿವೆ ಎಂದು ಹೇಳಿದರು.
ಮಹಾಮಂಗಳಾರತಿ ಬಳಿಕ ಕರಗ ಮೆರವಣಿಗೆಗೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಮೈಸೂರು ಮಹಾನಗರ ಪಾಲಿಕೆಯ ಮಾಜಿ ಸದಸ್ಯರು ಮತ್ತು ಬಡಾವಣೆಯ ಮುಖಂಡರೂ ಆದ ಪ್ರದೀಪ್ ಚಂದ್ರ, ದೇವಾಲಯದ ಮುಖ್ಯಸ್ಥರು ಮತ್ತು ಬಡಾವಣೆಯ ಯಜಮಾನರುಗಳಾದ ಪುಷ್ಪರಾಜ್, ವೇಲು, ದೊರೆ, ಕಾಳೇಗೌಡ, ಪುಷ್ಪರಾಜ್, ಆರ್ಮುಗಂ, ಹರೀಶ್, ಜಯಶೀಲ, ವಿನು ಮತ್ತಿತರರು ಇದ್ದರು.
0 ಕಾಮೆಂಟ್‌ಗಳು