ಮೈಸೂರು: ಕರ್ನಾಟಕ ರಾಜ್ಯ ರೈತಸಂಘ(ರೈತಬಣ)ದ ಅಧ್ಯಕ್ಷರಾದ ಇಂಗಲಗುಪ್ಪೆ ಕೃಷ್ಣೇಗೌಡ ಅವರ ಹುಟ್ಟುಹಬ್ಬವನ್ನು ರೈತಮುಖಂಡರು ಮತ್ತು ಅಭಿಮಾನಿಗಳು ಅದ್ದೂರಿಯಾಗಿ ಆಚರಿಸಿದರು.
ಶುಕ್ರವಾರ ಸಂಜೆ ಮೈಸೂರಿನ ಸಂಸ್ಕೃತ ಪಾಠಶಾಲಾ ಹಿಂಭಾಗದಲ್ಲಿರುವ ರೈತಸಂಘದ ಕಚೇರಿ ಆವರಣದಲ್ಲಿ ಏರ್ಪಡಿಸಿದ್ದ ವರ್ಣರಂಜಿತ ವೇದಿಕೆಯಲ್ಲಿ ಇಂಗಲಗುಪ್ಪೆ ಕೃಷ್ಣೇಗೌಡರ ಅಭಿಮಾನಿಗಳು ಮತ್ತು ರೈತಸಂಘದ ಕಾರ್ಯಕರ್ತರ ಸಮ್ಮುಖದಲ್ಲಿ ಕೃಷ್ಣೇಗೌಡ ಅವರು ಕೇಕ್ ಕತ್ತರಿಸಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.
ಈ ಸಂದರ್ಭದಲ್ಲಿ ನೂರಾರು ರೈತಮುಖಂಡರು ಮತ್ತು ಕಾರ್ಯಕರ್ತರು ಕೃಷ್ಣೇಗೌಡ ಅವರಿಗೆ ಹೂಗುಚ್ಛ ನೀಡಿ, ಬೃಹತ್ ಮೋಸಂಬಿ ಹಾರ, ಗುಲಾಬಿ ಹಾರ ಹಾಕಿ, ಮೈಸೂರು ಪೇಟ ಮತ್ತು ಶಾಲು ಹಾಕಿ ಗೌರವಿಸಿದರು.
ಈ ಸಂದರ್ಭದಲ್ಲಿ ಇಂಗಲಗುಪ್ಪೆ ಕೃಷ್ಣೇಗೌಡ ಅವರು ಮಾತನಾಡಿ, ನಾವು ರೈತಕುಲದವರು, ನಮಗೆ ಹಾರ, ತುರಾಯಿ, ಹುಟ್ಟು ಹಬ್ಬದ ಸಂಭ್ರಮ ಯಾವುದೂ ಇಷ್ಟವಿಲ್ಲ, ಆದರೇ, ನಮ್ಮ ಕಾರ್ಯರ್ಕರು ಮತ್ತು ಅಭಿಮಾನಿಗಳು ಒತ್ತಾಯಪೂರ್ವಕವಾಗಿ ಆಚರಣೆ ಮಾಡಿದ್ದಾರೆ. ಅವರಿಗೆ ಬೇಸರ ಮಾಡಿಕೊಳ್ಳಬಾರದೆಂದು ನಾನು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೇನೆ ಎಂದರು.
ಇಂಗಲಗುಪ್ಪೆ ಕೃಷ್ಣೇಗೌಡರ ಹುಟ್ಟುಹಬ್ಬದ ಪ್ರಯುಕ್ತ ರೈತಸಂಘದ ಕಾರ್ಯಕರ್ತರು ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆಗಳನ್ನು ಏರ್ಪಡಿಸಿದ್ದರು, ಅನ್ನ ದಾಸೋಹ ನಡೆಯಿತು.
0 ಕಾಮೆಂಟ್‌ಗಳು