ಮೈಸೂರು ಜಿಲ್ಲಾ ವಕ್ಫ್ ಸಲಹಾ ಸಮಿತಿಯಿಂದ 79ನೇ ಸ್ವಾತಂತ್ರö್ಯ ದಿನಾಚರಣೆ; ಎಸ್‌ಎಸ್‌ಎಲ್‌ಸಿ, ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಮೈಸೂರು ಜಿಲ್ಲಾ ವಕ್ಫ್ ಸಲಹಾ ಸಮಿತಿಯಿಂದ 
79ನೇ ಸ್ವಾತಂತ್ರö್ಯ ದಿನಾಚರಣೆ; ಎಸ್‌ಎಸ್‌ಎಲ್‌ಸಿ, ಪಿಯುಸಿ ವಿದ್ಯರ‍್ಥಿಗಳಿಗೆ ಪ್ರತಿಭಾ ಪುರಸ್ಕಾರ

 ವರದಿ: ನಿಷ್ಕಲ ಎಸ್.ಗೌಡ, ಮೈಸೂರು

ಮೈಸೂರು: ಮೈಸೂರು ಜಿಲ್ಲಾ ವಕ್ಫ್ ಸಲಹಾ ಸಮಿತಿ ಇತಿಹಾಸದಲ್ಲೇ ಮೊದಲ ಬಾರಿಗೆ ಸಮಿತಿ ಅಧ್ಯಕ್ಷರಾದ ಅಝೀಜುಲ್ಲಾ @ ಅಜ್ಜು ಅಧ್ಯಕ್ಷತೆಯಲ್ಲಿ ಮುಸ್ಲಿಂ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ತಲಾ ಐದು ಸಾವಿರ ನಗದು ಪುರಸ್ಕಾರದೊಂದಿಗೆ ನೆನಪಿನ ಕಾಣಿಕೆ, ಪ್ರಶಸ್ತಿ ಪತ್ರದೊಂದಿಗೆ ಸನ್ಮಾನಿಸಿ, ಪೋಷಕರನ್ನೂ ಗೌರವಿಸಿದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಕ್ಕೆ ಮುಸ್ಲಿಂ ಸಮುದಾಯದ ನೂರಾರು ಜನರು ಸಾಕ್ಷಿಯಾದರು.

ಹೌದು..79ನೇ ಸ್ವಾತಂತ್ರö್ಯ ದಿನಾಚರಣೆ ಪ್ರಯುಕ್ತ ಮೈಸೂರು ಜಿಲ್ಲಾ ವಕ್ಫ್ ಸಲಹಾ ಸಮಿತಿ ಆವರಣದಲ್ಲಿ 79ನೇ ಸ್ವಾತಂತ್ರö್ಯ ಸಂಭ್ರಮ ಮನೆ ಮಾಡಿತ್ತು.

ಮೈಸೂರು ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷರಾದ ಅಝೀಜುಲ್ಲಾ @ ಅಜ್ಜು ಅವರು ಧ್ವಜಾರೋಹಣ ನೆರವೇರಿಸಿದರು.

ಬಳಿಕ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಮೈಸೂರು ನಗರದಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕಗಳಿಸಿದ ಸುಮಾರು 50ಕ್ಕೂ ಹೆಚ್ಚು ಮುಸ್ಲಿಂ ಸಮುದಾಯದ ವಿದ್ಯಾರ್ಥಿಗಳಿಗೆ ವಕ್ಫ್ ಸಲಹಾ ಸಮಿತಿ ಅಧ್ಯಕ್ಷರಾದ ಅಝೀಜುಲ್ಲಾ @ ಅಜ್ಜು ಅವರು ತಲಾ 5 ಸಾವಿರ ರೂ. ನಗದು ಪುರಸ್ಕಾರ ನೀಡಿ ಗೌರವಿಸಿದರು.

ಬಳಿಕ ಅವರು ಮಾತನಾಡಿ, ಮುಸ್ಲಿಂ ಸಮುದಯದ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಮುಂದೆ ಬರಬೇಕು, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಕ್ಪ್ ಸಲಹಾ ಸಮಿತಿಯಿಂದ ಅಗತ್ಯ ಸಹಾಯ ಮಾಡಲಾಗುವುದು. ಸದ್ಯ ಮೈಸೂರು ನಗರಕ್ಕೆ ಪ್ರತಿಭಾ ಪುರಸ್ಕಾರ ಸೀಮಿತವಾಗಿದ್ದು, ಮುಂದಿನ ದಿನಗಳಲ್ಲಿ ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲೂ ಅಲ್ಲಿನ ಮಕ್ಕಳಿಗೆ ಪ್ರೋತ್ಸಾಹ ನೀಡಲಾಗುವುದು ಎಂದು ಭರವಸೆ ನೀಡಿದರು.

ಮೈಸೂರು ಜಿಲ್ಲಾ ವಕ್ಫ್ ಸಲಹಾ ಸಮಿತಿಗೆ ಉತ್ತಮ ನಿರ್ದೇಶಕರು ನೇಮಕವಾಗಿದ್ದಾರೆ. ಕಚೇರಿ ಅಧಿಕಾರಿಗಳೂ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ವಕ್ಫ್ ಬೋರ್ಡ್ನಿಂದ ಅಗತ್ಯವಾಗಿ ಮಾಡಲೇಬೇಕಾದ ಕೆಲಸಗಳನ್ನು ಪ್ರಾಮಾಣಿಕವಾಗಿ ಮಾಡುತ್ತೇವೆ. ನಮ್ಮ ಎಲ್ಲ ಜನಪರ ಕಾರ್ಯಕ್ರಮಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅಲ್ಪಕಲ್ಯಾಣ ಇಲಾಖೆ ಸಚಿವರಾದ ಬಿ.ಝೆಡ್.ಝಮೀರ್ ಅಹಮದ್ ಖಾನ್ ಅವರು ಬೆನ್ನುಲುಬಾಗಿ ನಿಂತಿದ್ದಾರೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಅವರು ತಿ.ನರಸೀಪುರ ತಾಲ್ಲೂಕು ತಲಕಾಡು ಹೋಬಳಿ ಬಿ.ಶೆಟ್ಟಹಳ್ಳಿ ಗ್ರಾಮದ ಮಸೀದಿಗೆ 1000 ಲೀಟರ್ ಸಾಮರ್ಥ್ಯದ ನೀರಿನ ಟ್ಯಾಂಕ್ ಅನ್ನು ತಮ್ಮ ವೈಯುಕ್ತಿಕ ಹಣದಲ್ಲಿ ಕೊಡುಗೆಯಾಗಿ ನೀಡಿದರು.

ಈ ಸಂದರ್ಭದಲ್ಲಿ ಮೈಸೂರು ಮಹಾನಗರಪಾಲಿಕೆ ಮಾಜಿ ಸದಸ್ಯರಾದ ಸಮಿ, ನಸೀರುದ್ದೀನ್ ಬಾಬು, ಸುಹೇಲ್ ಬೇಗ್, ತಾಜುದ್ದೀನ್ ಸಾಬ್, ಹಾಫೀಜ್ ಸಲ್ಮಾನ್ ಖಾನ್, ಇಬ್ರಾಹೀಂ ಸಾಬ್, ಬಿ.ಶೆಟ್ಟಹಳ್ಳಿ ಗ್ರಾಮದ ಜಾಮೀಯಾ ಮಸೀದಿ ಮುಖ್ಯಸ್ಥರಾದ ವಸೀಂಪಾಷ, ಝಿಯಾವುಲ್ಲಾ, ನಝೀರ್‌ಅಹಮದ್, ಇಮ್ರಾನ್ ಪಾಷ, ಶಿದಾ ಹುಸೇನ್, ಮೊಹಮ್ಮದ್ ಇಫ್ತಿಖಾರ್ ಆಲಂ ಮತ್ತಿತರರು ಇದ್ದರು.  




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು