ಮೈಸೂರು: ಶಾಲೆಯ ಕಾಪೌಂಡ್ ನಿರ್ಮಾಣಕ್ಕೆ ಶೀಘ್ರವೇ ಇಂಜಿನಿಯರ್ ಕರೆಸಿ ಪ್ಲಾನ್ ರೂಪಿಸಿ ಮಾಡಿಕೊಡುವುದಾಗಿ ಹಂಚ್ಯಾ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎಚ್.ಸಿ.ಕುಮಾರಸ್ವಾಮಿ ಭರವಸೆ ನೀಡಿದರು.
ರಮ್ಮನಹಳ್ಳಿ ಪಟ್ಟಣ ಪಂಚಾಯಿತಿಯ ಹಂಚ್ಯಾ ಗ್ರಾಮದ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆವತಿಯಿಂದ ಆಯೋಜಿಸಿದ್ದ 79ನೇ ಸ್ವಾತಂತ್ರೋತ್ಸವ ಮಹೋತ್ಸವದಲ್ಲಿ ಅತಿಥಿಗಳಾಗಿ ಧ್ವಜಾರೋಹಣ ನೇರವೇರಿಸಿ ಮುಖ್ಯಶಿಕ್ಷಕರ ಮನವಿಗೆ ಮೇಲಿನಂತೆ ಪ್ರತಿಕ್ರಯಿಸಿದರು. ಶಾಲೆ ಪಕ್ಕದಲ್ಲೇ ನಾಲೆ ಇರುವುದರಿಂದ ಕೌಪೌಂಡ್ ಹೆಚ್ಚಿಸುವಂತೆ ಮಾಡಿರುವ ಮನವಿಗೆ ಶೀಘ್ರವೇ ಸ್ಪಂದಿಸುತ್ತೇನೆ. ಶಾಲಾ ಮಕ್ಕಳು ಹೆಚ್ಚೆಚ್ಚು ಅಂಕಗಳಿಸಿ ಶಾಲೆಗೆ ಕೀರ್ತಿ ತರಬೇಕು. ಶಾಲೆ ಅಭಿವೃದ್ಧಿ ವಿಚಾರದಲ್ಲಿ ಎನೇ ಇದ್ದರೂ ಗಮನಕ್ಕೆ ತಂದರು ಅದನ್ನು ಪ್ರಾಮಾಣಿಕವಾಗಿ ಬಗೆಹರಿಸಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.
ವೇದಿಕೆ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳು ದೇಶಭಕ್ತಿ ಗೀತೆಗಳಿಗೆ ಸಮೂಹ ನೃತ್ಯ, ಸಮೂಹ ಗಾಯನ ಮಾಡಿ ನೆರೆದಿದ್ದವರ ಮನಸ್ಸು ಗೆದ್ದರು.
ಇದೇ ವೇಳೆ ಕಳೆದ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಚಿಕ್ಕದೇವಿ, ಅನು ಎಂಬ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಪ್ರೌಢಶಾಲಾ ಮುಖ್ಯ ಶಿಕ್ಷಕ ಕುಮಾರ್ ಮಾತನಾಡಿ ಕಳೆದ ಸಾಲಿನಲ್ಲಿ ನಮ್ಮಲ್ಲಿ ಶೇ.96 ರಷ್ಟು ಫಲಿತಾಂಶ ಬಂದಿದ್ದು, ಅತಿಹೆಚ್ಚು ಮಂದಿ ಮೊದಲ ಶ್ರೇಣಿಯಲ್ಲಿ ತೇರ್ಗಡೆ ಹೊಂದಿ ಶಾಲೆಗೆ ಕೀರ್ತಿ ತಂದಿದ್ದಾರೆ. ಶಾಲೆ ಆಟದ ಮೈದಾನ, ಕೊಠಡಿ ಹಾಗೂ ಸಿಸಿಟಿವಿಗಳ ಅವಶ್ಯಕತೆಯಿದೆ ಎಂದು ಕೋರಿದರು. ಗ್ರಾಪಂ ಮಾಜಿ ಸದಸ್ಯರಾದ ಬಸವರಾಜು, ಎಚ್.ಡಿ.ಚೆನ್ನಯ್ಯ, ನಿವೃತ್ತ ಶಿಕ್ಷಕರಾದ ಎಂ.ಎಸ್.ರಾಮಣ್ಣ, ಪ್ರೌಡಶಾಲೆ ಎಸ್ ಡಿಎಂಸಿ ಅಧ್ಯಕ್ಷ ಮಂಜು, ಸದಸ್ಯರಾದ ನಾಗೇಶ್, ಪ್ರೌಢಶಾಲಾ ಶಿಕ್ಷಕರಾದ ನಾಗರಾಜು, ಕುಮಾರಸ್ವಾಮಿ, ಕ್ರೀಡಾ ಶಿಕ್ಷಕ ಪರಶಿವಮೂರ್ತಿ, ಶೈಲಾ,ರತಿ, ಗೋಪಾಲಕೃಷ್ಣ, ಸವಿತಾ, ಯಶವಂತ ಕುಮಾರ್, ಪ್ರಾಥಮಿಕ ಮುಖ್ಯಶಿಕ್ಷರಾದ
ರಾಮುಶೆಟ್ಟಿ, ಶಿಕ್ಷಕರಾದ ಶಿವಲಿಂಗಯ್ಯ, ಜಮ್ರುದ್ ಬೇಗಂ, ಅಮಿನಾ ಫಿರ್ದೋಸ್, ಸಂದೀಪ್ ಕುಮಾರ್, ಉಷಾ ಕಿರಣ್, ಸಾಯಿನ್ ತಾಜ್, ಮಾನಸ, ನಾಗರತ್ನ, ನಾಗರಾಜು ಇನ್ನಿತರರು ಉಪಸ್ಥಿತರಿದ್ದರು.
0 ಕಾಮೆಂಟ್‌ಗಳು