ಸಚಿವ ಮಹದೇವಪ್ಪರಿಂದ ಟಿಪ್ಪು ವೈಭವೀಕರಣ ಆರೋಪ: ಬಿ.ಬಿ.ರಾಜಶೇಖರ್ ನೇತೃತ್ವದಲ್ಲಿ ಕನ್ನಡಾಂಬೆ ರಕ್ಷಣಾ ವೇದಿಕೆಯಿಂದ ಪ್ರತಿಭಟನೆ


 ವರದಿ: ಎಸ್.ನಿಷ್ಕಲ, ಮೇಗಲಕೊಪ್ಪಲು

ಮೈಸೂರು : ಲಕ್ಷಾಂತರ ರೈತರ ಜೀವನಾಡಿ ಕನ್ನಂಬಾಡಿ ಕಟ್ಟೆಗೆ ಮೊದಲು ಅಡಿಪಾಯ ಹಾಕಿದ್ದು ಟಿಪ್ಪು ಸುಲ್ತಾನ್ ಎನ್ನುವ ಮೂಲಕ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಹೆಚ್.ಸಿ.ಮಹದೇವಪ್ಪ ಅವರು ಟಿಪ್ಪು ಸುಲ್ತಾನರನ್ನು ವೈಭವೀಕರಿಸುವ ಭರದಲ್ಲಿ ಇತಿಹಾಸವನ್ನು ತಿರುಚಿದ್ದಾರೆ ಎಂದು ಆರೋಪಿಸಿ ಸಚಿವರ ಹೇಳಿಕೆಯನ್ನು ಖಂಡಿಸಿ ಕನ್ನಡಾಂಬೆ ರಕ್ಷಣಾ ವೇದಿಕೆಯಿಂದ ಪ್ರತಿಭಟನೆ ನಡೆಯಿತು.

ವೇದಿಕೆ ರಾಜ್ಯಾಧ್ಯಕ್ಷ ಬಿ.ಬಿ.ರಾಜಶೇಖರ್ ನೇತೃತ್ವದಲ್ಲಿ ನಗರದ ಗಾಂಧಿ ವೃತ್ತದಲ್ಲಿ ಜಮಾಯಿಸಿದ ಕನ್ನಡಾಂಬೆ ರಕ್ಷಣಾ ವೇದಿಕೆ ಕಾರ್ಯಕರ್ತರು ಸಚಿವ ಹೆಚ್.ಸಿ.ಮಹದೇವಪ್ಪ ವಿರುದ್ಧ ಘೊಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಪ್ರತಿಭಟನೆಯು ನೇತೃತ್ವ ವಹಿಸಿದ್ದ ಬಿ.ಬಿ.ರಾಜಶೇಖರ್ ಮಾತನಾಡಿ, ಟಿಪ್ಪುಗೂ ಮೊದಲು ಮೈಸೂರು ಅರಸಲು ಜಲಾಶಯ ನಿರ್ಮಿಸಲುವ ಯೋಜನೆ ರೂಪಿಸಿದ್ದರು.

ಕ್ರಿ.ಶ.1595ರಲ್ಲಿ ದಳವಾಯಿ ಕುಮಾರರಾಮ, 1659-1673ರ ನಡುವೆ ಕಂಠೀರವ ನರಸರಾಜ ಒಡೆಯರ್ ಅವರು, ಶ್ರೀರಂಗಪಟ್ಟಣದ ಉತ್ತರದಲ್ಲಿ ಅಣೆಕಟ್ಟನ್ನು ನಿರ್ಮಿಸಿದ್ದರು. 1638-1659 ಚಿಕ್ಕದೇವರಾಜ ಒಡೆಯರ್ ಕಾಲದಲ್ಲಿ ಕಾವೇರಿಗೆ ಒಂದು ಅಣೆಕಟ್ಟು ಕಟ್ಟಲು ಪ್ರಯತ್ನಿಸಿದ್ದರು. ತದ ನಂತರ ಟಿಪ್ಪು ಸುಲ್ತಾನ್ ಕೂಡ ಅಣೆಕಟ್ಟೆ ಕಟ್ಟಲು ಶಂಕುಸ್ಥಾಪನೆ ನೆರವೇರಿಸಿದ್ದರು. ಈ ಬಗ್ಗೆ ಪರ್ಶಿಯನ್ ಭಾಷೆಯಲ್ಲಿ ಅವರು ಬರೆಸಿದ್ದ ಶಾಸನ 1911ರಲ್ಲಿ ಪತ್ತೆಯಾಗಿತ್ತು. ನಂತರ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಕೆಆರ್‍ಎಸ್ ಜಲಾಶಯ ನಿರ್ಮಿಸುವಾಗ ಅಲ್ಲಿ ಸಿಕ್ಕಿದ ಟಿಪ್ಪು ಶಾಸನವನ್ನು ಕನ್ನಡದಲ್ಲಿ ಬರೆಸಿ ಜಲಾಶಯದ ದ್ವಾರದ ಬಳಿ ಇರಿಸಿದ್ದು ಸಹ ನಾಲ್ವಡಿ ಅವರ ಹೆಗ್ಗಳಿಗೆ. ಇಂತಹ ಇತಿಹಾಸ ತಿಳಿಯದ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಹೆಚ್.ಸಿ.ಮಹದೇವಪ್ಪ ಅವರು, ಕೇವಲ ಟಿಪ್ಪು ಸುಲ್ತಾನ್ ಅವರನ್ನು ಮಾತ್ರ ನೆನಪಿಸಿಕೊಳ್ಳುವುದು ಸರಿಯಲ್ಲ, ಅದಕ್ಕೂ ಮೊದಲು ಜಲಾಶಯ ಕಟ್ಟಲು ನಿರ್ಧರಿಸಿದ್ದ ಮೈಸೂರು ಅರಸರನ್ನೂ ನೆನಪಿಸಿಕೊಳ್ಳಬೇಕಿತ್ತು ಎಂದು ಆಗ್ರಹಿಸಿದರಲ್ಲದೇ, ಇತಿಹಾಸ ತಿರುಚುವ ಪ್ರಯತ್ನದ ವಿರುದ್ಧ ನಮ್ಮ ಪ್ರತಿಭಟನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೆಆರ್‍ಎಸ್ ಜಲಾಶಯದ ಇತಿಹಾಸವನ್ನು ಇತಿಹಾಸ ತಜ್ಞರು ಸಂಶೋಧನೆಯನ್ನು ನಡೆಸಿ ದಳವಾಯಿ ಕುಮಾರ ರಾಮ, ಚಿಕ್ಕದೇವರಾಜ ಒಡೆಯರು, ಕಂಠೀರವ ನರಸರಾಜ ಒಡೆಯರ್ ಇವರುಗಳು ಸಹ ಅಣೆಕಟ್ಟನ್ನು ನಿರ್ಮಿಸಲು ಪ್ರಯತ್ನಿಸಿದರು ಎಂಬುದಾಗಿ ಇತಿಹಾಸದಲ್ಲಿ ದಾಖಲಿಸಿದ್ದಾರೆ. ಇವರ ಹೆಸರುಗಳನ್ನು ಬಿಟ್ಟು ಬರಿ ಟಿಪ್ಪು ಸುಲ್ತಾನ್ ಅಡಿಪಾಯ ಹಾಕಿದರು ಎನ್ನುವ ಹೇಳೀಕೆಯನ್ನು ಒಂದು ಸಮುದಾಯ ಅಥವಾ ಒಂದು ವರ್ಗವನ್ನು ಓಲೈಕೆ ಮಾಡುವುದು ಸರಿಯಲ್ಲ ಇದನ್ನು ಕನ್ನಾಡಂಬೆ ರಕ್ಷಣಾ ವೇದಿಕೆ ತೀವ್ರವಾಗಿ ಖಂಡಿಸುತ್ತದೆ ಎಂದರು.

ಪ್ರತಿಭಟನೆಯಲ್ಲಿ ಕನ್ನಾಂಡಂಬೆ ರಕ್ಷಣಾ ವೇದಿಕೆಯ ನಂಜುಂಡ, ಸಂತೋಷ್, ಮಂಜುಳ, ಅನುರಾಜ್, ಡಿ.ಪಿ.ಕೆ ಪರಮೇಶ್, ಸಿಂಧುವಳ್ಳಿ ಶಿವಕುಮಾರ್, ಕೃಷ್ಣೇಗೌಡ, ಲೋಕೇಶ್, ಲಕ್ಷ್ಮಿ, ನೇಹ, ಮಹದೇವಸ್ವಾಮಿ, ಆರ್.ಸಿದ್ದೇಗೌಡ, ಹೊನ್ನೇಗೌಡ, ಪ್ರತಾಪ್, ಹೇಮಲತಾ ಪ್ರಕಾಶ್, ಗೌತಮ್, ಅಶೋಕ್ ಮತ್ತು ಪದಾಧಿಕಾರಿಗಳು ಭಾಗವಹಿಸಿದ್ದರು.








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು