ಆರ್‌ಎಸ್‌ಎಸ್ ಸಂಘಟನೆಗೆ ಮತ್ತು ಮೈಸೂರಿನ ಕಾಮಾಕ್ಷಿ ಆಸ್ಪತ್ರೆಯ ಸಹಯೋಗದೊಂದಿಗೆ ಆ.24 ರಂದು ಬೆಳಗ್ಗೆ ಆರೋಗ್ಯಕರ ಮೈಸೂರಿಗಾಗಿ ಮ್ಯಾರಥಾನ್ ಓಟ


 ವರದಿ: ನಿಷ್ಕಲ ಎಸ್.ಗೌಡ, ಮೈಸೂರು

ಮೈಸೂರು: ರಾಷ್ಟಿçÃಯ ಸ್ವಯಂ ಸೇವಾ ಸಂಘವು ಮೈಸೂರಿನ ಪ್ರತಿಷ್ಠಿತ ಕಾಮಾಕ್ಷಿ ಆಸ್ಪತ್ರೆಯ ಸಹಯೋಗದೊಂದಿಗೆ ನಗರದ ಅರಮನೆಯ ಕೋಟೆ ಆಂಜನೇಯ ದೇವಸ್ಥಾನದ ಮುಂಭಾಗದ ಭಾನುವಾರ ಬೆಳಗ್ಗೆ ಆರೋಗ್ಯಕರ ಮೈಸೂರಿಗಾಗಿ ಮ್ಯಾರಥಾನ್ ಕಾರ್ಯಕ್ರಮ ಏರ್ಪಡಿಸಿದೆ ಎಂದು ಕಾಮಾಕ್ಷಿ ಆಸ್ಪತ್ರೆಯ ಮುಖ್ಯಸ್ಥರಾದ ಮಹೇಶ್ ಶೆಣೈ ಹೇಳಿದರು.

ಕಾಮಾಕ್ಷಿ ಆಸ್ಪತ್ರೆಯಲ್ಲಿ ಶನಿವಾರ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮೈಸೂರು ನಗರದಲ್ಲಿ  ಮಾದಕ ವಸ್ತುಗಳ ಬಳಕೆ ಹೆಚ್ಚಾಗುತ್ತಿದೆ. ಯುವ ಸಮೂಹ ವ್ಯಸನಗಳಿಗೆ ಬಲಿಯಾಗುತ್ತಿದ್ದಾರೆ. ಇದು ಅತ್ಯಂತ ಕಳವಳಕಾರಿಯಾಗಿದ್ದು, ಈ ವ್ಯಸನವು ಕೇವಲ ವ್ಯಕ್ತಿಯ ಆರೋಗ್ಯವನ್ನು ಹಾಳು

ಮಾಡುವುದಲ್ಲದೇ ಇಡೀ ಕುಟುಂಬಗಳನ್ನು ಬೀದಿಗೆ ತಳ್ಳುವ ಸ್ಥಿತಿಗೆ ತರುತ್ತಿದೆ. ಜತೆಗೆ ಆರೋಗ್ಯಕರ ಸಮಾಜವನ್ನು ದುರ್ಬಲಗೊಳಿಸಿ, ಮುಂದಿನ ಯುವ ಜನಾಂಗದ ಭವಿಷ್ಯವನ್ನು ಅಪಾಯಕ್ಕೆ ಒಳಪಡಿಸುತ್ತದೆ. ಸಮಾಜದ ಹಿತಕ್ಕಾಗಿ, ನಿರಂತರ ಬದ್ದತೆಯ ಭಾಗವಾಗಿ, ಗಣೇಶೋತ್ಸವದ ಸಂದರ್ಭದಲ್ಲಿ-ಹೊಸ

ಆರAಭಗಳ ಮತ್ತು ಅಡೆತಡೆಗಳನ್ನು ನಿವಾರಿಸುವ ಸಂಕೇತವಾದ ಈ ಹಬ್ಬದ ಅಂಗವಾಗಿ ಕಾಮಾಕ್ಷಿ ಆಸ್ಪತ್ರೆ ಮತ್ತು ರಾಷ್ಟಿçÃಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್) ಮೈಸೂರು ಸಹಯೋಗದೊಂದಿಗೆ

ಈ ಮ್ಯಾರಥಾನ್ ಅನ್ನು ಆಯೋಜಿಸುತ್ತಿದ್ದೇವೆ ಎಂದರು.

ಕಾರ್ಯಕ್ರಮವು ಅರಮನೆ ಮುಂಭಾಗದ ಕೋಟೆ ಆಂಜನೇಯ ದೇವಸ್ಥಾನದ ಮುಂಭಾಗ ಆ.24 ರಂದು ಬೆಳಗ್ಗೆ 6.45ಕ್ಕೆ ಆರಂಭಗೊAಡು ನಂತರ ಅದೇ ಸ್ಥಳದಲ್ಲಿ ಮುಕ್ತಾಯವಾಗಲಿದೆ ಎಂದು ವಿವರಣೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಮೆಡಿಕಲ್ ಸೂಪರಿಡೆಂಡೆAಟ್ ಡಾ.ಉಮೇಶ್ ಕಾಮತ್, ಟ್ರಸ್ಟಿ ಎಂ.ಗಜಾನನ ಶೆಣೈ, ಜನರಲ್ ಮ್ಯಾನೇಜರ್ ಹೆಚ್.ಪಿ.ಪ್ರಸನ್ನ ಕುಮಾರ್ ಮತ್ತಿತರರು ಇದ್ದರು.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು