ಮೈಸೂರು: ಭಾರತೀಯ ಮಕ್ಕಳ ವೈದ್ಯಕೀಯ ಸಂಸ್ಥೆ ಮತ್ತು ಸಿಗ್ಮಾ ಆಸ್ಪತ್ರೆ ಸಹಯೋಗದಲ್ಲಿ ಬುಧವಾರ ಆಸ್ಪತ್ರೆ ಆವರಣದಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹ-2025 ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಮೈಸೂರು ನಗರ ಮತ್ತು ಜಿಲ್ಲೆಯ ಸಾಕಷ್ಟು ತಾಯಂದಿರು ಮತ್ತು ಕುಟುಂಬದವರು ಭಾಗವಹಿಸಿ ಸ್ತನ್ಯಪಾನಕ್ಕೆ ಆದ್ಯತೆ ನೀಡಿ, ಸುಸ್ತಿರ ಬೆಂಬಲ ವ್ಯವಸ್ಥೆಯನ್ನು ರಚಿಸಿ ಎಂಬ ಧ್ಯೇಯ ವಾಕ್ಯದೊಂದಿಗೆ ಪಾಲ್ಗೊಂಡಿದ್ದರು.
ಹಿರಿಯ ಮಕ್ಕಳ ತಜ್ಞರಾದ ಡಾ.ಬಿ.ಹೆಚ್. ಶ್ರೀನಿವಾಸ್, ಅಧ್ಯಕ್ಷರು ಐ.ಎ.ಪಿ. ಮೈಸೂರು ಮತ್ತು ಸಿಗ್ಮಾ ಆಸ್ಪತ್ರೆಯ ಹಿರಿಯ ಮಕ್ಕಳ ತಜ್ಞರಾದ ಡಾ. ರಾಜೇಶ್ವರಿ ಅವರ ತಂಡದವರು ಸ್ತನ್ಯಪಾನದ ಮಹತ್ವವನ್ನು ವಿವರಿಸಿದರಲ್ಲದೇ, ಮಕ್ಕಳಿಗೆ ತಾಯಿ ಎದೆಹಾಲು ಕುಡಿಸುವುದರಿಂದ ಇರುವ ಉಪಯುಕ್ತ ಆರೋಗ್ಯದ ಬಗ್ಗೆ ಅರಿವು ಮೂಡಿಸಿದರು.
ಈ ಸಂದರ್ಭದಲ್ಲಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರಾದ ಎಸ್.ಜ್ಞಾನಶಂಕರ್, ಹಿರಿಯ ಮಹಿಳಾ ಪ್ರಸೂತಿ ವೈದ್ಯೆ ಡಾ.ಲೀಲಾವತಿ, ಮಕ್ಕಳ ತಜ್ಞೆ ಡಾ.ಕನ್ಯಾ, ಡಾ.ಹರೀಶ್ ಗೌತಮ್, ಇನ್ನಿತರರು ಉಪಸ್ಥಿತರಿದ್ದರು.
0 ಕಾಮೆಂಟ್‌ಗಳು