ಜಾಗೃತಿಯಿಂದ ಕ್ಯಾನ್ಸರ್ ನಿಯಂತ್ರಣ ಸಾಧ್ಯ : ಡಾ.ಮಾಧವಿ
ವರದಿ : ನಜೀರ್ ಅಹಮದ್(9740738219)
ಮೈಸೂರು : ಶೇ.70 ರಷ್ಟು ಕ್ಯಾನ್ಸರ್ ರೋಗಕ್ಕೆ ತಂಬಾಕು ಸೇವನೆ ಕಾರಣವಾಗಿದ್ದು, ತಂಬಾಕು ಸೇವನೆ ವಿರುದ್ಧ ಸಾರ್ವಜನಿಕರಲ್ಲಿ ಅರಿವು ಮತ್ತು ಜಾಗೃತಿ ಮೂಡಿಸುವುದರಿಂದ ಕ್ಯಾನ್ಸರ್ ರೋಗವನ್ನು ನಿಯಂತ್ರಿಸಬಹುದು ಎಂದು ಭಾರತ್ ಕ್ಯಾನ್ಸರ್ ಆಸ್ಪತ್ರೆಯ ಕನ್ಸಲ್ಟೆಂಟ್ ರೇಡಿಯೇಷನ್ ಅಂಕಾಲಜಿಸ್ಟ್ ಅಂಡ್ ಮೆಡಿಕಲ್ ಸೂಪರಿಟೆಂಡೆಂಟ್ ಡಾ.ವೈ.ಎಸ್.ಮಾಧವಿ ಹೇಳಿದರು.
ಸಕಾಲಿಕ ಮತ್ತು ಪರಿಣಾಮಕಾರಿ ಉಪಕ್ರಮದಲ್ಲಿ ಭಾರತ್ ಹಾಸ್ಪಿಟಲ್ ಅಂಡ್ ಇನ್ಸಿಟ್ಯೂಟ್ ಅಫ್ ಆಂಕಾಲಜಿ ಆಸ್ಪತ್ರೆಯಲ್ಲಿ ಮರ್ಕ್ ಸ್ಪೆಷಾಲಿಟೀಸ್ ಪ್ರೈವೇಟ್ ಲಿಮಿಟೆಡ್ ಸಹಯೋಗದಲ್ಲಿ ವಿಶ್ವ ತಂಬಾಕು ರಹಿತ ದಿನದ ಅಂಗವಾಗಿ `ಬಾಯಿ ಕ್ಯಾನ್ಸರ್ ರಕ್ಷಣೆಗೆ ಎರಡು ನಿಮಿಷಗಳ ಕ್ರಮ'ವನ್ನು ಆಕ್ಟ್ ಎಗೇನ್ಸ್ ಓರಲ್ ಕ್ಯಾನ್ಸರ್ ಅಭಿಯಾನಕ್ಕೆ
ಚಾಲನೆ ನೀಡಿ ಅವರು ಮಾತನಾಡಿದರು.
ಶೇ.65ರಷ್ಟು ಬಾಯಿ ಕ್ಯಾನ್ಸರ್ ಪ್ರಕರಣಗಳು ಅರಿವಿನ ಕೊರತೆಯಿಂದ ತಡವಾಗಿ ಪತ್ತೆಯಾಗುತ್ತವೆ. ತ್ವರಿತ ಮಾಸಿಕ
ಎರಡು ನಿಮಿಷಗಳ ಸ್ವಯಂ-ಪರೀಕ್ಷೆಯು ಕ್ಯಾನ್ಸರ್ ಮುಂಚೆಯೇ ಪತ್ತೆಯಾಗಲು ನೆರವಾಗುತ್ತದೆ.
ಈ ದೇಶವ್ಯಾಪಿ ಅಭಿಯಾನವು ವ್ಯಕ್ತಿಗಳಿಗೆ ಸದಾ ಲಭ್ಯವಿರುವ ಕನ್ನಡಿ ಬಳಸಿ ತ್ವರಿತ ಸ್ವಯಂ-ಪರೀಕ್ಷೆ ಮಾಡಿಕೊಳ್ಳಲು ಉತ್ತೇಜಿಸುತ್ತದೆ. ಜನರಿಗೆ ಬಿಳಿ ಅಥವಾ ಕೆಂಪು ಕಲೆಗಳು, ಗುಣವಾಗದ ಅಲ್ಸರ್‍ಗಳು, ಸತತ ಊತ ಧ್ವನಿ ಬದಲಾವಣೆಗಳು ಅಥವಾ ವಿವರಿಸಲಾಗದ ರಕ್ತಸ್ರಾವದ ಮುನ್ನೆಚ್ಚರಿಕೆ ಸೂಚನೆಗಳನ್ನು ಗಮನಿಸಲು
ಉತ್ತೇಜಿಸಲಾಗುತ್ತದೆ. ಇದರ ಪ್ರಮುಖ ಸಂದೇಶವೆಂದರೆ: ಭಾವಿಸಿ, ನೋಡಿರಿ ಮತ್ತು ಕ್ರಮ ತೆಗೆದುಕೊಳ್ಳಿರಿ.
ಕನ್ನಡಿಯ ಮುಂದೆ ಕೇವಲ ಎರಡು ನಿಮಿಷಗಳು ಜೀವ ಉಳಿಸಬಲ್ಲದು. ಆಸ್ಪತ್ರೆಗಳ ಕಾಯುವ ಸ್ಥಳಗಳಲ್ಲಿ ಕನ್ನಡಿಗಳನ್ನು ಇರಿಸುವುದು ಕೂಡಾ ಅರಿವು ಹೆಚ್ಚಿಸಬಲ್ಲದು ಮತ್ತು ರೋಗಿಗಳು ಹಾಗೂ ಸಂದರ್ಶಕರಲ್ಲಿ ಸ್ವಯಂ-ಪರೀಕ್ಷೆ ಉತ್ತೇಜಿಸಬಲ್ಲದು.
ಜಪಾನ್ ದೇಶದಲ್ಲಿ ಕೇವಲ ಅರಿವು ಮತ್ತು ಜಾಗೃತಿಯಿಂದ ಶೇ.50 ರಷ್ಟು ಕ್ಯಾನ್ಸರ್ ರೋಗವನ್ನು ನಿಯಂತ್ರಿಸಲಾಗಿದೆ ಎಂದರು.
ಸೀನಿಯರ್ ಕನ್ಸಲ್ವೆಂಟ್ ಮೆಡಿಕಲ್ ಅಂಕಾಲಜಿಸ್ಟ್ ಡಾ.ಶ್ರೀನಿವಾಸ್ ಕೆ.ಜಿ., ಅವರು ಮಾತನಾಡಿ, ಕ್ಯಾನ್ಸರ್ ನಿಯಂತ್ರಣಕ್ಕೆ ತಂಬಾಕು ಉತ್ಪನವನ್ನು ಬೆಳೆವುದನ್ನು ನಿಲ್ಲಿಸಬೇಕು. ಪರ್ಯಾಯ ಬೆಳೆಗೆ ಉತ್ತೇಜನ ನೀಡಬೇಕು. ಶಾಲಾ ಕಾಲೇಜು ಹಂತಗಳಲ್ಲಿ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಬೇಕು ಎಂದರು.
ಅಭಿಯಾನದಲ್ಲಿ ಸೀನಿಯರ್ ಕನ್ಸಲ್ವೆಂಟ್ ರೇಡಿಯೇಷನ್ ಆಂಕಾಲಜಿಸ್ಟ್ ಡಾ.ವಿನಯ್ ಕುಮಾರ್ ಮುತ್ತಗಿ, ಸರ್ಜಿಕಲ್ ಅಂಕಾಲಜಿಸ್ಟ್ ಅಂಡ್ ರೊಬೊಟಿಕ್ ಸರ್ಜನ್ ಡಾ.ರಕ್ಷಿತ್ ಶೃಂಗೇರಿ, ಕನ್ಸಂಟ್ ಮೆಡಿಕಲ್ ಅಂಕಾಲಜಿಸ್ಟ್ ಡಾ. ಅಭಿಲಾಷ್ ಜಿ.ಎಚ್., ಚೀಫ್ ಆಪರೇಟಿಂಗ್ ಆಫೀಸರ್ ಗೌತಮ್ ಧಮೇರಿಯಾ ಉಪಸ್ಥಿತರಿದ್ದರು.
ಕ್ಯಾನ್ಸರ್ ರೋಗವು ತ್ವರಿತವಾಗಿ ಪತ್ತೆಯಾದರೆ ಅದಕ್ಕೆ ಸೂಕ್ತ ನೋವು ರಹಿತ ಚಿಕಿತ್ಸೆ ನೀಡಲು ಸಾಧ್ಯವಿದೆ. ಸ್ಟೇಜ್-4 ಸಂದರ್ಭದಲ್ಲಿ ಪತ್ತೆಯಾದರೆ, ರೋಗಿಗಳಿಗೆ ವಿವಿಧ ಪರೀಕ್ಷೆಗಳನ್ನು ನಡೆಸಬೇಕಾಗುತ್ತದೆ. ಖರ್ಚು ಸಹ ಹೆಚ್ಚಾಗುತ್ತದೆ.
• ಡಾ.ಶ್ರೀನಿವಾಸ್ ಕೆ.ಜಿ., ಸೀನಿಯರ್ ಅಂಕಾಲಜಿಸ್ಟ್
0 ಕಾಮೆಂಟ್‌ಗಳು