ಮೈಸೂರು : ಕರ್ನಾಟಕ ರಾಜ್ಯ ಭೋವಿ ಅಭಿವೃದ್ಧಿ ನಿಗಮದಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆದಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡಲೇ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಮತ್ತು ಜಸ್ಮಾದೇವಿ ವಿಶ್ವ ಭೋವಿ(ವಡ್ಡರು) ಪಂಚಪೀಠದ ಪೀಠಾಧಿಪತಿ ಶ್ರೀ ಸಿದ್ದರಾಮೇಶ್ವರ ಸ್ವಾಮೀಜಿ ಆರೋಪಿಸಿದರು.
ಜಿಲ್ಲಾ ಪತ್ರಕರ್ತರ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಕರ್ನಾಟಕದಲ್ಲಿ ತೀವ್ರ ಸಂಷ್ಟದಲ್ಲಿ ಬದುಕು ನಡೆಸುತ್ತಿರುವ ಭೋವಿ ಸಮುದಾಯದವರ ಅಭಿವೃದ್ಧಿಗಾಗಿ 2017ರಲ್ಲಿ ಕರ್ನಾಟಕ ಭೋವಿ ಅಭಿವೃದ್ಧಿ ನಿಗಮ ಸ್ಥಾಪನೆಯಾಯಿತು. ಆದರೇ, ಇದರಿಂದ ತಳ ಮಟ್ಟದ ಫಲಾನುಭವಿಗಳಿಗೆ ಯಾವುದೇ ತೀತಿಯ ಅನುಕೂಲ ಆಗಿಲ್ಲ. ಸಮುದಾಯದ ಬಲಾಢ್ಯರು, ಪ್ರಭಾವಿಗಳು ಇದರ ಉಪಯೋಗ ಪಡೆಯುತ್ತಿದ್ದಾರೆ. ಕೆಲವೇ ಕೆಲವು ಜನರು ನಿಗಮದ ಹಣವನ್ನು ಲೂಟಿ ಮಾಡುತ್ತಿದ್ದಾರೆ. ಸಮುದಾಯ ಸ್ವಾಮೀಜಿ ಎನಿಸಿಕೊಂಡಿರುವ ಇಮ್ಮಡಿ ಸಿದ್ದರಾಮ ಸ್ವಾಮಿಗಳು ಮತ್ತು ಬಿಜೆಪಿ ಎಂಎಲ್‍ಸಿ ಸುನೀಲ್ ವಲ್ಯಾಪುರೆ ಹಾಗೂ ಅವರ ಮಗ ಸೇರಿ ನಿಗಮದಲ್ಲಿ ಸುಮಾರು 36 ಕೋಟಿ ರೂ. ಭ್ರಷ್ಟಾಚಾರ ನಡೆಸಿದ್ದಾರೆ. ಇದಕ್ಕೆ ಸಂಬಂಧಪಟ್ಟಂತೆ ಸುನೀಲ್ ವಲ್ಯಾಪುರೆ ಮನೆ ಮೇಲೆ ಸಿಐಡಿ ದಾಳಿಯೂ ನಡೆದಿತ್ತು. ಇದರೊಂದಿಗೆ ಹಣದ ಅವ್ಯವಹಾರದಲ್ಲಿ
ಪದ್ಮ, ರಾಮಕೃಷ್ಣ, ಲೀಲಾವತಿ ಎಂಬವರೂ ಸೇರಿದ್ದಾರೆ ಆದರೇ, ಸರ್ಕಾರ ಇವರ ವಿರುದ್ಧ ಯಾವುದೇ ಕಠಿಣ ಕ್ರಮ ಕೈಗೊಂಡಿಲ್ಲ ಎಂದು ಟೀಕಿಸಿದರು.
ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಅವ್ಯವಹಾರದಲ್ಲಿ ಇಮ್ಮಡಿ ಸಿದ್ದರಾಮ ಸ್ವಾಮೀಜಿಗಳೇ ಪ್ರಮುಖ ಕಾರಣರಾಗಿದ್ದು,ಕೂಡಲೇ ಅವರನ್ನು ಬಂಧಿಸಿ, ಹಾಲಿ ನ್ಯಾಯಾಧೀಶರಿಂದ ತನಿಖೆ ನಡೆಸಬೇಕು ಆಗ್ರಹಿಸಿದರು.
ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ 4 ಸಾವಿರ ಭೋವಿ ಜನಾಂಗದವರು ಕನ್ನಂಬಾಡಿ ಕಟ್ಟೆ ಕಟ್ಟಲು ವಲಸೆ ಬಂದಿದ್ದರು. ಕೇವಲ ತುತ್ತು ಅನ್ನಕ್ಕಾಗಿ ಕನ್ನಂಬಾಡಿ ಕಟ್ಟೆಯನ್ನು ಕಟ್ಟಿ ಇಂದು ಲಕ್ಷಾಂತರ ಜನರಿಗೆ ಅನ್ನದಾತಾಗಿರುವ ಭೋವಿ ಜನಾಂಗದವರು ಇಂದು ಮತ್ತೆ ತುತ್ತು ಅನ್ನಕ್ಕಾಗಿ ಪರದಾಡುವ ಸ್ಥಿತಿ ತಲುಪಿದೆ. ಆಧುನೀಕರಣವಾದಂತೆ ಜೆಸಿಬಿಗಳು, ಕಂಪ್ರೆಷರ್‍ಗಳು, ಭೋವಿ ಜನಾಂಗದ ಅನ್ನ ಕಿತ್ತುಕೊಂಡಿದ್ದಾರೆ. ಯಾರಿಗೂ ಸ್ವಂತ ಕ್ವಾರಿ ಇಲ್ಲ. ಬಲಾಢ್ಯ ಸಮುದಾಯದವರ ಬಳಿ ಕೂಲಿಗಾಗಿ ಕಲ್ಲು ಹೊಡೆದು ಬದುಕುವ ಸ್ಥಿತಿ ಬಂದಿದೆ. ಕೂಡಲೇ ಸರ್ಕಾರ ಭೋವಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಭ್ರಷ್ಟಾಚಾರದ ವಿರುದ್ಧ ಸಮರೋಪಾದಿಯಲ್ಲಿ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆಕೊಡುವುದರ ಜತೆಗೆ ಭೋವಿ ನಿಗಮಕ್ಕೆ 100 ಕೋಟಿ ಹಣ ನೀಡಬೇಕೆಂದು ಒತ್ತಾಯಿಸಿದರು.
ಸಿದ್ದರಾಮೇಶ್ವರ ಸ್ವಾಮೀಜಿಗಳನ್ನು 6360179432 ಸಂಖ್ಯೆಗೆ ಕರೆ ಮಾಡಿ ಸಂಪರ್ಕಿಸಬಹುದು
0 ಕಾಮೆಂಟ್‌ಗಳು