ಮೈಸೂರು : ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ನಡೆಸದ ಕಾಂಗ್ರೆಸ್ ಸರ್ಕಾರ ಪ್ರಜಾ ಪ್ರಭುತ್ವ ವಿರೋಧಿ ನಡೆ ಅನುಸರಿಸುತ್ತಿದೆ ಎಂದು ಎಸ್‌ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಮಜೀದ್ ತುಂಬೆ ಆರೋಪಿಸಿದರು.
ನಗರದ ನಳಪಾಡ್ ಹೋಟೆಲ್‌ನಲ್ಲಿ ಭಾನುವಾರ ಬೆಳಗ್ಗೆ ನಡೆದ ಎಸ್‌ಡಿಪಿಐ ಜಿಲ್ಲಾ ಪ್ರತಿನಿಧಿಗಳ ಸಭೆಯಲ್ಲಿ ಅವರು ಮಾತನಾಡಿ, ರಾಜ್ಯ ಸರ್ಕಾರದ ಭ್ರಷ್ಟಾಚಾರದಿಂದ ಬೇಸತ್ತು ಮತದಾರರು ಚುನಾವಣೆಯಲ್ಲಿ ತಮ್ಮ ಪಕ್ಷವನ್ನು ಬೆಂಬಲಿಸುವದಿಲ್ಲ ಎಂದು ಮನಗಂಡು ಚುನಾವಣೆಯನ್ನು ಮುಂದೂಡಿದ್ದಾರೆ. ಅಲ್ಲದೇ ಸ್ಥಳೀಯ ಸಂಸ್ಥೆಗಳಲ್ಲಿ ಚುನಾಯಿತ ಪ್ರತಿನಿಧಿಗಳು ಬಂದರೆ ತಮ್ಮ ಅಧಿಕಾರ ಮೊಟಕಾಗುವುದು ಎಂಬ ಭಯದಿಂದ ಶಾಸಕರೂ ಕೂಡ ಚುನಾವಣೆಗಳನ್ನು ನಡೆಸಲು ಸರ್ಕಾರದ ಮೇಲೆ ಒತ್ತಡ ಹಾಕುತ್ತಿಲ್ಲ ಎಂದು ದೂರಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧ್ಯಕ್ಷ ರಫತ್ ಖಾನ್ ಮಾತನಾಡಿ,
ದೇಶದಲ್ಲಿ ರೈತರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ. ನಿರುದ್ಯೋಗದಿಂದ ಯುವ ಸಮುದಾಯ ತತ್ತರಿಸಿ ಅಪರಾಧ ಪ್ರಕರಣದಲ್ಲಿ ತೊಡಗಿಸಿಕೊಂಡಿದೆ. ಮಣಿಪುರದ ಗಲಭೆ ನಿಯಂತ್ರಣದ ಬಗ್ಗೆ ಕೇಂದ್ರ ಯಾವುದೇ ಕ್ರಮ ಜರುಗಿಸಿಲ್ಲ. ಬಡವರು ಬಡವರಾಗಿಯೇ ಉಳಿಯುತ್ತಿದ್ದಾರೆ. ಒಟ್ಟಾರೆ ಭಾರತದಲ್ಲಿ ಹಸಿವು ಮತ್ತು ಭಯದ ವಾತಾವಣ ಉಂಟಾಗಿದೆ. ಭಯಮುಕ್ತ ಮತ್ತು ಹಸಿವು ಮುಕ್ತ ರಾಷ್ಟ್ರ ನಿರ್ಮಾಣಕ್ಕೆ ಪರ್ಯಾಯ ರಾಜಕೀಯ ಶಕ್ತಿಯನ್ನು ಆಯ್ಕೆ ಮಾಡುವುದು ಇಂದು ದೇಶದ ಮತದಾರರ ಮುಂದಿದ್ದು, ಎಸ್‌ಡಿಪಿಐ ದೇಶದ ಹಿತಕ್ಕಾಗಿ ಕೆಲಸ ಮಾಡುವ ಪಕ್ಷವಾಗಿದ್ದು,
ನಾವು ಜನರ ಸಮಸ್ಯೆಗಳನ್ನು ಮುಂದಿಟ್ಟು ಬೀದಿಗಿಳಿದು ಹೋರಾಡುತ್ತೇವೆ ಇಂತಹ ರಾಜಕೀಯ ಪಕ್ಷದ ಅವಶ್ಯಕತೆ ಇದೆ ಎಂದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಫಿಯುಲ್ಲ, ಕಾರ್ಯದರ್ಶಿ ಫರ್ದೀನ್, ಕೋಶಾಧಿಕಾರಿ ಫಿರ್ದೋಸ್ ಅವರು ಮೈಸೂರು ಜಿಲ್ಲಾ ವಾರ್ಷಿಕ ವರದಿಯನ್ನು ಮಂಡಿಸಿದರು. ಮಹಿಳಾ ವಿಭಾಗ ವಿಮ್‌ನ ವರದಿಯನ್ನು ಆಯೇಷಾ ಝಬಿ ಮಂಡಿಸಿದರು.
ಜಿಲ್ಲಾಧ್ಯಕ್ಷರಾಗಿ ರಫತ್ ಖಾನ್ ಆಯ್ಕೆ:
ಇದೇ ಸಂದರ್ಭದಲ್ಲಿ ಸೋಷಿಯಲ್ ಡೆಮಾಕ್ರಟಿಕ್ ಪಕ್ಷದ ಮೈಸೂರು ಜಿಲ್ಲಾ ಅಧ್ಯಕ್ಷರಾಗಿ ರಫತ್ ಖಾನ್ ಎರಡನೇ ಬಾರಿಗೆ ಆಯ್ಕೆಯಾದರು.
ಉಪಾಧ್ಯಕ್ಷರಾಗಿ ಎಸ್.ಸ್ವಾಮಿ, ಮೊಹಮ್ಮದ್ ಶಫಿಯುಲ್ಲಾ, ಪ್ರಧಾನ ಕಾರ್ಯದರ್ಶಿಗಳಾಗಿ ಎಂ.ಎನ್. ಫಿರ್ದೋಸ್, ಸಯ್ಯದ್ ಅಝೀಮ್, ಕಾರ್ಯದರ್ಶಿಗಳಾಗಿ ಆಯೇಷಾ ಝಬಿ, ಫರ್ದಿನ್, ಅಕ್ಬರ್ ಹುಣಸೂರು, ಕೋಶಾಧಿಕಾರಿಯಾಗಿ ಮನ್ಸೂರ್ ಖಾನ್, ಸಮಿತಿ ಸದಸ್ಯರಾಗಿ ಜೆ. ಮಹದೇವ, ಮೌಲನಾ ನೂರುದ್ದಿನ್ ಫಾರೂಕಿ, ಮನ್ಸೂರ್ ಅಹಮದ್ ಮೆಡಿಕಲ್, ತಬರೇಜ್ ಸೇಠ್, ಸುಹೇಲ್ ಅತಿಫ್, ಜಬೀನಾ ಬಾನು, ಮೊಹಮ್ಮದ್ ವಸೀಮ್, ಅಮ್ಜದ್ ಹುಸೇನ್ ಅವರು ಆಯ್ಕೆಯಾದರು.
ಪ್ರತಿನಿಧಿ ಸಭೆಯ ನಿರ್ದೇಶಕರಾಗಿ ಝಹಿರ್ ಕರ್ತವ್ಯ ನಿರ್ವಹಿಸಿದರು, ನೂತನ ಪ್ರಧಾನ ಕಾರ್ಯದರ್ಶಿ ಫಿರ್ದೋಸ್ ಸರ್ವರನ್ನು ವಂದಿಸಿದರು.
ಜಿಲ್ಲಾ ಪ್ರತಿನಿಧಿಗಳ ಸಭೆ ಪ್ರಾರಂಭಕ್ಕೂ ಮುನ್ನ ಎಸ್‌ಡಿಪಿಐ ದ್ವಜಾರೋಹಣ ನೆರವೇರಿಸಲಾಯಿತು. ಮುಖಂಡರು ದ್ವಜಕ್ಕೆ ಗೌರವ ವಂದನೆ ಸಲ್ಲಿಸಿದರು.
ವೇದಿಕೆ ಕಾರ್ಯಕ್ರಮದಲ್ಲಿ ಪಕ್ಷದ ರಾಜ್ಯ ಉಪಾಧ್ಯಕ್ಷರಾದ ದೇವನೂರು ಪುಟ್ಟನಂಜಯ್ಯ, ರಾಜ್ಯ ಪ್ರಧಾನ ಕಾರ್ಯದರ್ಶಿ ಮುಜಾಹಿದ್ ಪಾಷಾ, ರಾಜ್ಯ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಮಜಿದ್ ತುಂಬೆ, ರಾಜ್ಯ ಕಾರ್ಯದರ್ಶಿ ಮೌಲಾನಾ ಅಕ್ರಮ್, ರಾಜ್ಯ ಖಜಾಂಚಿ ಅಮ್ಜದ್ ಖಾನ್, ಜಿಲ್ಲಾ ಉಪಾಧ್ಯಕ್ಷರಾದ ಸ್ವಾಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಶಫಿವುಲ್ಲಾ, ಜಿಲ್ಲಾ ಕಾರ್ಯದರ್ಶಿ ಫರ್ದಿನ್ ಅಹಮದ್, ವಿಮೆನ್ ಇಂಡಿಯಾ ಮೂವ್ಮೆಂಟ್ ಜಿಲ್ಲಾಧ್ಯಕ್ಷೆ ಆಯಿಷಾ ಜಬಿ, ಜಿಲ್ಲಾ ಖಜಾಂಚಿ ಎಂ. ಎನ್. ಫಿರ್ದೋಸ್, ಪಕ್ಷದ ಮುಖಂಡರಾದ ಸಯ್ಯದ್ ಅಕ್ಬರ್ ಹುಣಸೂರು ಹಾಗೂ ಇತರರು ಹಾಜರಿದ್ದರು.
0 ಕಾಮೆಂಟ್‌ಗಳು