ಮೈಸೂರು : ಕರ್ನಾಟಕ ರಾಜ್ಯ ರೈತಸಂಘಗಳ ಮಹಾ ಒಕ್ಕೂಟದ ಆಶ್ರಯದಲ್ಲಿ ಹಾಗೂ ಕರ್ನಾಟಕ ರಾಜ್ಯ ರೈತಸಂಘ (ರೈತಬಣ)ದ ನೇತೃತ್ವದಲ್ಲಿ ನಡೆದ ವಿಶ್ವ ರೈತದಿನಾಚರಣೆಗೆ ವಿಶ್ವ ವಿಖ್ಯಾತ ಮೈಸೂರು ಅರಮನೆಯ ಕೋಟೆ ಆಂಜನೇಯ ಸ್ವಾಮಿ ದೇವಾಯಲದ ಎದುರು ಸೋಮವಾರ ಅದ್ದೂರಿಯಾಗಿ ಚಾಲನೆ ನೀಡಲಾಯಿತು.
ಮೈಸೂರು ಸಂಸ್ಥಾನದ ರಾಜವಂಶಸ್ಥರು ಹಾಗೂ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದರೂ ಆದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಎತ್ತಿನ ಗಾಡಿ ಏರಿ ಹಸಿರು ನಿಶಾನೆ ತೋರುವ ಮೂಲಕ ವಿಶ್ವ ರೈತದಿನಾಚರಣೆಗೆ ಶುಭಕೋರಿ ಅದ್ದೂರಿಯಾಗಿ ಚಾಲನೆ ನೀಡಿದ್ದು, ಕರ್ನಾಟಕ ರಾಜ್ಯ ರೈತಸಂಘ (ರೈತಬಣ)ದ ರಾಜ್ಯಾಧ್ಯಕ್ಷ ಇಂಗಲಗುಪ್ಪೆ ಕೃಷ್ಣೇಗೌಡ ಹಾಗೂ ಕರ್ನಾಟಕ ರಾಜ್ಯ ರೈತಸಂಘಗಳ ಮಹಾ ಒಕ್ಕೂಟದ ಅಧ್ಯಕ್ಷರಾದ ಹಿರಿಯ ರೈತ ಹೋರಾಟಗಾರ ಬೀರಪ್ಪ ದೇಶನೂರು ಯದುವೀರ್ ಅವರಿಗೆ ಸಾಥ್ ನೀಡಿದರು.
ಎತ್ತಿನಗಾಡಿ ಮೆರವಣಿಗೆ:
ವಿಶ್ವ ರೈತದಿನಾಚರಣೆಯಲ್ಲಿ ಸಾವಿರಾರು ರೈತರು ಭಾಗವಹಿಸಿದ್ದರು. ಮೆರವಣೀಗೆಯು ಅರಮನೆ ಕೋಟೆ ಆಚಿಜನೇಯಸ್ವಾಮಿ ದೇವಾಲಯದಿಂದ ಹೊರಟು ಹಾಡಿಂಜ್ ವೃತ್ತದ ಮೂಲಕ ಮಹಾತ್ಮಾ ಗಾಂಧಿ ವೃತ್ತ ತಲುಪಿ ಅಲ್ಲಿಂದ ಪುರಭನವದ ಆವರಣ ತಲುಪಿತು.
ಈ ನಡುವೆ ಮೈಸೂರು ಮಹಾರಾಜರು, ರಾಷ್ಟ್ರಪಿತ ಮಹಾತ್ಮಾ ಗಾಂಧಿ ಮತ್ತು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ರೈತ ಮುಖಂರಾದ ಇಂಗಲಗುಪ್ಪೆ ಕೃಷ್ಣೇಗೌಡ, ಬೀರಪ್ಪ ದೇಶನೂರು ಹಾಗೂ ಮತ್ತಿತರ ನಾಯಕರು ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ನಂತರ ವೇದಿಕೆ ಕಾರ್ಯಕ್ರಮ ಆರಂಭವಾಯಿತು.
ಇದಕ್ಕೂ ಮುನ್ನ ವೇದಿಕೆಯಲ್ಲಿ ಮೈಸೂರು ಮಹಾಲಿಂಗು ತಂಡದವರಿಂದ ಗೀತಗಾಯನ ಕಾರ್ಯಕ್ರಮ ನಡೆಯಿತು.
0 ಕಾಮೆಂಟ್‌ಗಳು