ಸದರನ್ ಸ್ಟಾರ್ ಹೋಟೆಲ್‌ನಲ್ಲಿ ಯಶಸ್ವಿಯಾಗಿ ನಡೆದ ಇಂಡಿಯನ್ ಲೈಫ್‌ಸ್ಟೈಲ್ ಎಕ್ಸಿಬಿಷನ್
ಮೇ 20, 2024
ಮೈಸೂರು : ನಗರದ ಸದರನ್ ಸ್ಟಾರ್ ಪಂಚತಾರಾ ಹೋಟೆಲ್‌ನಲ್ಲಿ ಶುಕ್ರವಾರ ಆರಂಭಗೊಂಡ ಎರಡು ದಿನಗಳ ಇಂಡಿಯನ್ ಲೈಫ್ ಸ್ಟೈಲ್ ಬಟ್ಟೆಗಳು, ಆಭರಣಗಳು ಮತ್ತು ಗೃಹೋಪಯೋಗಿ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮೇಳ ಯಶಸ್ವಿಯಾಗಿ ಆರಂಭಗೊಂಡಿತು.
ಮೈಸೂರಿನಲ್ಲಿ ೨೬ನೇ ಬಾರಿ ಇಂತಹ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಆಯೋಜಿಸಿರುವ ರವಿ ಆರೋರ ಈ ಸಂದರ್ಭದಲ್ಲಿ ಮಾತನಾಡಿ, ಪ್ರಸಕ್ತ ಮೇಳದಲ್ಲಿ ಅತ್ಯಂತ ನವ ನವೀನ ಮಾದರಿಯ, ಹೊಸ ಡಿಸೈನ್ ಬಟ್ಟೆಗಳು ಮತ್ತು ಆಭರಣಗಳು ಲಭ್ಯವಿದೆ. ಮುಂಬೈ, ದೆಹಲಿ, ಕಲ್ಕತ್ತ, ಪಂಜಾಬ್ ಮತ್ತಿತರ ರಾಜ್ಯಗಳಿಂದ ಪ್ರದರ್ಶನಕಾರರು ತಮ್ಮ ತಮ್ಮ ವಸ್ತುಗಳನ್ನು ಪ್ರದರ್ಶನ ಮಾಡಲು ಬಂದಿದ್ದಾರೆ.
ಶುಕ್ರವಾರ ಮತ್ತು ಶನಿವಾರ ಮಾತ್ರ ಪ್ರದರ್ಶನ ನಡೆಯಲಿದೆ. ಭಾರತದ ಪ್ರಖ್ಯಾತ ಅವಂತ್ರಾ, ಐಕ್ಯತಾ, ಆರಾಧ್ಯ ಸಿಲ್ಕ್, ಹೋಂ ಕಲೆಕ್ಷನ್ ಸಂಸ್ಥೆಗಳು ಈ ಪ್ರದರ್ಶನ ಮತ್ತು ಮಾರಾಟ ಮೇಳದಲ್ಲಿ ಭಾಗವಹಿಸಲಿದ್ದಾರೆ. ೨೬ ಸ್ಟಾಲ್‌ಗಳು ಲಭ್ಯವಿದ್ದು, ನಮ್ಮಲ್ಲಿ ಎಲ್ಲ ರೀತಿಯ ಮದುವೆಗಳು, ಪಾರ್ಟಿವೇರ್, ಆಫೀಸ್ ವೇರ್ ಉಡುಪುಗಳು ಮತ್ತು ಆಭರಣಗಳು ಮಾರಾಟಕ್ಕೆ ಲಭ್ಯವಿದೆ. ಬೆಲೆಯೂ ಸಹ ಅತ್ಯಂತ ಸ್ಪರ್ಧಾತ್ಮಕ ರೀತಿಯಲ್ಲಿವೆ ಎಂದರು.
0 ಕಾಮೆಂಟ್‌ಗಳು