ಮೈಸೂರು : ನಗರದ ಲಷ್ಕರ್ ಮೊಹಲ್ಲಾ ಫೈವ್ ಲೈಟ್ ಸರ್ಕಲ್ ಬಳಿ ನೂತನವಾಗಿ ಪ್ರಾರಂಭಿಸಲಾಗಿರುವ 'ಸುಲ್ತಾನ್ ಡೈಮಂಡ್ ಅಂಡ್ ಗೋಲ್ಡ್’ ಚಿನ್ನಾಭರಣ ಮಳಿಗೆಯನ್ನು ಖ್ಯಾತ ಹಿಂದಿ ಚಲನಚಿತ್ರ ನಟಿ ರವಿನಾ ಟಂಡನ್ ಭಾನುವಾರ ಉದ್ಘಾಟಿಸಿದರು.
ಬಳಿಕ ಅವರು ಮಾತನಾಡಿ, ನಾನು ಹಲವು ಕನ್ನಡ ಚಿತ್ರಗಳಲ್ಲಿ ನಟಿಸಿದ್ದೇನೆ. ಕರ್ನಾಟಕವೂ ನನ್ನ ಮನೆಯಾಗಿದೆ. ಕನ್ನಡಿಗರು ನನ್ನ ಮೇಲಿಟ್ಟಿರುವ ಪ್ರೀತಿಗೆ ನಾನು ಅಭಾರಿಯಾಗಿದ್ದೇನೆ. ಸುಲ್ತಾನ್ ಡೈಮಂಡ್ ಅಂಡ್ ಗೋಲ್ಡ್ ಚಿನ್ನಾಭರಣ ಮಳಿಗೆಯಲ್ಲಿ ನವ ನವೀನ ಮಾದರಿಯ ಚಿನ್ನಾಭರಣಗಳು ಮತ್ತು ವಜ್ರದ ಆಭರಣಗಳು ಲಭ್ಯವಿದೆ. ಗ್ರಾಹಕರ ಬಜೆಟ್‌ಗೆ ಅನುಕೂಲವಾಗಿ ಆಭರಣಗಳು ದೊರಯಲಿವೆ ಎಂದರು.ಇದೇ ಸಂದರ್ಭದಲ್ಲಿ ಲಕ್ಕಿಡಿಪ್‌ನಲ್ಲಿ ವಿಜೇತರಾದವರಿಗೆ ಅವರು ವಿವಿಧ ಬಹುಮಾನಗಳನ್ನು ವಿತರಣೆ ಮಾಡಿದರು.
0 ಕಾಮೆಂಟ್‌ಗಳು