ಇನ್ಫೋಸೀಸ್ ಆವರಣದಲ್ಲಿ ಯಶಸ್ವಿಯಾಗಿ ಜರುಗಿದ 2023-24ನೇ ಸಾಲಿನ ಸೋಲಾರ್ ಡೆಕಾಥ್ಲಾನ್ ಇಂಡಿಯಾ
ಮೇ 19, 2024
ಮೈಸೂರು : ಭಾರತದ ಕಟ್ಟಡ ನಿರ್ಮಾಣ ಕ್ಷೇತ್ರಕ್ಕೆ ನವೀನ, ನಿವ್ವಳ ಶೂನ್ಯ ಇಂಧನ-ನೀರು ಬಳಕೆ ಮತ್ತು ಹವಾಮಾನ ಸ್ಥಿತಿಸ್ಥಾಪಕ ಪರಿಹಾರಗಳನ್ನು ಅಭಿವೃದ್ಧಿಪಡಿಸಲು ಭಾರತೀಯ ಶೈಕ್ಷಣಿಕ ಸಂಸ್ಥೆಗಳ ಪದವಿಪೂರ್ವ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ನಡೆಸುವ ವಾರ್ಷಿಕ ಸ್ಪರ್ಧೆಯಾದ ಸೋಲಾರ್ ಡೆಕಾಥ್ಲಾನ್ ಇಂಡಿಯಾ ನಗರದ ಇನ್ಫೋಸೀಸ್ ಆವರಣದಲ್ಲಿ ನಾಲ್ಕು ದಿನಗಳ ಕಾಲ ಯಶಸ್ವಿಯಾಗಿ ನಡೆದು ಕೆಳಕಂಡ ಶಿಕ್ಷಣ ಸಂಸ್ಥೆಗಳ ತಂಡಗಳು ವಿಜೇತರಾಗಿ ಹೊರಹೊಮ್ಮಿದವು.
2023-24 ಚಾಲೆಂಜ್‍ನ ವಿಭಾಗವಾರು ವಿಜೇತರ ಸಂಪೂರ್ಣ ಪಟ್ಟಿ: ಬಹು-ಕುಟುಂಬ ವಸತಿ ವಿಜೇತರು: ಎನ್‍ಎಂಐಎಂಎಸ್‍ನ ಬಲ್ವಂತ್ ಶೇಥ್ ಸ್ಕೂಲ್ ಆಫ್ ಆರ್ಕಿಟೆಕ್ಚರ್ ಮತ್ತು ಎನ್‍ಎಂಐಎಂಎಸ್‍ನ ಮುಖೇಶ್ ಪಟೇಲ್ ಸ್ಕೂಲ್ ಆಫ್ ಟೆಕ್ನಾಲಜಿ ಮ್ಯಾನೇಜ್‍ಮೆಂಟ್ ಮತ್ತು ಇಂಜಿನಿಯರಿಂಗ್‍ನಿಂದ ಜೆನೆಸಿಸ್ ರನ್ನರ್ ಅಪ್: ಪುಣೆಯ ಡಿ.ವೈ. ಪಾಟೀಲ್ ಯೂನಿವರ್ಸಿಟಿ ಸ್ಕೂಲ್ ಆಫ್ ಆರ್ಕಿಟೆಕ್ಚರ್ ಅಂಬಿ ಮತ್ತು ಡಿ.ವೈ. ಪಾಟೀಲ್ ಯೂನಿವರ್ಸಿಟಿ ಸ್ಕೂಲ್ ಆಫ್ ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿ ಅಂಬಿ, ಪುಣೆಯ ಟೀಮ್ ಗ್ರೀನ್ ವಾರಿಯರ್ಸ್ ಶೈಕ್ಷಣಿಕ ಕಟ್ಟಡ ವಿಜೇತ: ಜಾಮಿಯಾ ಮಿಲಿಯಾ ಇಸ್ಲಾಮಿಯಾದಿಂದ ನೋವಾ 2.0 ತಂಡ ರನ್ನರ್ ಅಪ್: ಆರ್‍ವಿ ಕಾಲೇಜ್ ಆಫ್ ಆರ್ಕಿಟೆಕ್ಚರ್ ಮತ್ತು ಆರ್‍ವಿ ಕಾಲೇಜ್ ಆಫ್ ಇಂಜಿನಿಯರಿಂಗ್‍ನ ತಂಡ ಸೋಲಾಸ್ಟ್ರಾ ಕಚೇರಿ ಕಟ್ಟಡ ವಿಜೇತರು: ಬಿಎಂಎಸ್ ಕಾಲೇಜ್ ಆಫ್ ಆರ್ಕಿಟೆಕ್ಚರ್‍ನ ಆಕಾಂಕ್ಷಾ ತಂಡ ಮತ್ತು ಬಿಎಂಎಸ್ ಇಂಜಿನಿಯರಿಂಗ್ ಕಾಲೇಜು ರನ್ನರ್ ಅಪ್: ಐಇಎಸ್ ಕಾಲೇಜ್ ಆಫ್ ಆರ್ಕಿಟೆಕ್ಚರ್‍ನಿಂದ ತಂಡ ಯೂನಿಕ್ಸ್ ಸೆಪ್ಟ್ ವಿಶ್ವವಿದ್ಯಾಲಯ, ಮತ್ತು ಫಾದರ್ ಸಿ.ರೋಡ್ರಿಗಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಮುದಾಯ ಸ್ಥಿತಿಸ್ಥಾಪಕತ್ವ ಆಶ್ರಯ ವಿಜೇತರು: ಎಸ್‍ಎಂಇಎಫ್‍ನ ಬ್ರಿಕ್ ಸ್ಕೂಲ್ ಆಫ್ ಆರ್ಕಿಟೆಕ್ಚರ್ ಮತ್ತು ಬ್ರಾಕ್ಟ್ ನ ತಂಡ ಏಕತ್ವಮ್, ವಿಶ್ವಕರ್ಮ ಇನ್ಸ್ಟಿಟ್ಯೂಟ್ ಆಫ್ ಇನ್ಫರ್ಮೇಷನ್ ಟೆಕ್ನಾಲಜಿ ರನ್ನರ್ ಅಪ್: ಎಂಬಿಎಸ್ ಸ್ಕೂಲ್ ಆಫ್ ಪ್ಲಾನಿಂಗ್ ಅಂಡ್ ಆರ್ಕಿಟೆಕ್ಚರ್, ಸೆಪ್ಟ್ ಯುನಿವರ್ಸಿಟಿ, ಮತ್ತು ದೆಹಲಿ ತಾಂತ್ರಿಕ ವಿಶ್ವವಿದ್ಯಾಲಯದಿಂದ ಅದ್ವಾಯ ತಂಡ ನಿರ್ಮಾಣ ಕಾರ್ಮಿಕರ ವಸತಿ ವಿಜೇತರು: ಎಸ್‍ಎಂಇಎಫ್ ನ ಬ್ರಿಕ್ ಸ್ಕೂಲ್ ಆಫ್ ಆರ್ಕಿಟೆಕ್ಚರ್ ಮತ್ತು ಬ್ರಾಕ್ಟ್‍ನ ತಂಡ ಸಮರ್ಥನ್, ವಿಶ್ವಕರ್ಮ ಇನ್ಸ್ಟಿಟ್ಯೂಟ್ ಆಫ್ ಇನ್ಫರ್ಮೇಷನ್ ಟೆಕ್ನಾಲಜಿ ರನ್ನರ್ ಅಪ್: ಮಣಿಪಾಲ್ ಸ್ಕೂಲ್ ಆಫ್ ಆರ್ಕಿಟೆಕ್ಚರ್ ಮತ್ತು ಪ್ಲಾನಿಂಗ್ ಮತ್ತು ಮಣಿಪಾಲ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಐಕ್ಯಂ ತಂಡ ರೆಸಿಡೆನ್ಷಿಯಲ್ ಕೂಲಿಂಗ್ ರೆಟ್ರೋಫಿಟ್ ವಿಜೇತರು: ಐಇಎಸ್ ಕಾಲೇಜ್ ಆಫ್ ಆರ್ಕಿಟೆಕ್ಚರ್, ದ್ವಾರಕಾದಾಸ್ ಜೆ. ಸಾಂಘ್ವಿ ಕಾಲೇಜ್ ಆಫ್ ಇಂಜಿನಿಯರಿಂಗ್, ಮರಾಠಾ ವಿದ್ಯಾ ಪ್ರಸಾರಕ ಸಮಾಜದ ಶರದ್ಚಂದ್ರಜಿ ಪವಾರ್ ಕಾಲೇಜ್ ಆಫ್ ಆರ್ಕಿಟೆಕ್ಚರ್ ಮತ್ತು ಯುನೈಟೆಡ್ ವಲ್ರ್ಡ್ ಇನ್‍ಸ್ಟಿಟ್ಯೂಟ್ ಆಫ್ ಡಿಸೈನ್‍ನಿಂದ ತಂಡದ ರೆಸಲ್ಯೂಶನ್ ರನ್ನರ್ ಅಪ್: ನಾಗ್ಪುರದ ವಿಶ್ವೇಶ್ವರಯ್ಯ ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ನವ್ಯ ತಂಡ ಭಾರತದಲ್ಲಿ ಹವಾಮಾನ ಬದಲಾವಣೆಯನ್ನು ಎದುರಿಸಲು ಮುಂದಿನ ಪೀಳಿಗೆಯ ನಾಯಕರನ್ನು ನಿರ್ಮಿಸುವ ಗುರಿಯನ್ನು ಹೊಂದಿರುವ ಸೋಲಾರ್ ಡೆಕಾಥ್ಲಾನ್ ಇಂಡಿಯಾ ಸಂಸ್ಥೆಯ ಸಹಯೋಗದೊಂದಿಗೆ ಆಯೋಜಿಸಿದ್ದ ಈ ಸ್ಪರ್ಧಾ ಕಾರ್ಯಕ್ರಮವು ವಿಶ್ವದ ಅತ್ಯಂತ ಸುಸ್ಥಿರವಾಗಿ ಕಾರ್ಯನಿರ್ವಹಿಸುವ ಕ್ಯಾಂಪಸ್‍ಗಳಲ್ಲಿ ಒಂದಾಗಿರುವ ಮೈಸೂರಿನ ಇನ್ಫೋಸಿಸ್ ಕ್ಯಾಂಪಸ್‍ನಲ್ಲಿ ಫೈನಲ್ ನಡೆಯಿತು. ಇನ್ಫೋಸಿಸ್ ಸಂಸ್ಥೆ ಆಶ್ರಯದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲ ಸ್ಪರ್ಧಿಗಳಿಗೂ 4 ದಿನಗಳ ಕಾಲ ವಸತಿ ಮತ್ತು ಆಹಾರವನ್ನು ಇನ್ಫೋಸಿಸ್ ಸಂಸ್ಥೆಯೇ ಒದಗಿಸಿತು. ಸೋಲಾರ್ ಡೆಕಾಥ್ಲಾನ್ ಇಂಡಿಯಾ 4ನೇ ಆವೃತ್ತಿಯಲ್ಲಿ 188 ವಿದ್ಯಾ ಸಂಸ್ಥೆಗಳ 2,111 ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿದ್ಯಾರ್ಥಿ ತಂಡಗಳು 31 ನೈಜ ಕಟ್ಟಡ ಯೋಜನೆಗಳು ಮತ್ತು 6 ಉತ್ಪನ್ನ ಆವಿಷ್ಕಾರಗಳಿಗೆ ವಿನೂತನ ಪರಿಹಾರಗಳನ್ನು ಪ್ರಸ್ತುತಪಡಿಸಿದವು. ಸೋಲಾರ್ ಡೆಕಾಥ್ಲಾನ್ ಇಂಡಿಯಾ ಕಾರ್ಯಕ್ರಮವನ್ನು ಇಂಡಿಯನ್ ಇನ್‍ಸ್ಟಿಟ್ಯೂಟ್ ಫಾರ್ ಹ್ಯೂಮನ್ ಸೆಟಲ್ಮೆಂಟ್ಸ್, ಅಲೈಯನ್ಸ್ ಫಾರ್ ಎನರ್ಜಿ ಎಫಿಷಿಯನ್ಸಿ ಎಕಾನಮಿ ಸಂಸ್ಥೆಗಳು, ಇಂಡೋ-ಯುಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವೇದಿಕೆ ಸಹಯೋಗದಲ್ಲಿ ಆಯೋಜಿಸಿದ್ದವು. ಇನ್ಫೋಸಿಸ್‍ನ ಹವಾಮಾನ ಕ್ರಿಯೆ ವಿಭಾಗದ ಎವಿಪಿ ಮುಖ್ಯಸ್ಥ ಗುರುಪ್ರಕಾಶ್ ಶಾಸ್ತ್ರಿ, ಮತ್ತು ಐಯುಎಸ್‍ಎಸ್‍ಟಿಎಫ್ ಪ್ರಧಾನ ವಿಜ್ಞಾನ ಅಧಿಕಾರಿ ಡಾ. ಚೈತಾಲಿ ಭಟ್ಟಾಚಾರ್ಯ ಉಪಸ್ಥಿತರಿದ್ದರು. ಇನ್ಫೋಸಿಸ್ ಸಂಸ್ಥೆಯ ಅಧ್ಯಕ್ಷ ಮತ್ತು ಸಹ ಸಂಸ್ಥಾಪಕ ಮತ್ತು ಆಧಾರ್ ಸಂಸ್ಥಾಪಕ ಅಧ್ಯಕ್ಷ ನಂದನ್ ನಿಲೇಕಣಿ ಮತ್ತು ಸೂಪರ್ ಹ್ಯೂಮನ್ ರೇಸ್ ಸಂಸ್ಥಾಪಕರಾದ ಕು. ಗಗನ್‍ದೀಪ್ ಭುಲ್ಲರ್ ಅವರು ಪ್ರೇಕ್ಷಕರ ಜೊತೆಗೆ ಸ್ಫೂರ್ತಿದಾಯಕ ಮಾತುಕತೆ ನಡೆಸಿದರು. ಸೋಲಾರ್ ಡೆಕಾಥ್ಲಾನ್ ಇಂಡಿಯಾ ನಿರ್ದೇಶಕರಾದ ಪ್ರಸಾದ್ ವೈದ್ಯ ಐಯುಎಸ್‍ಎಸ್‍ಟಿಎಫ್ ನಿರ್ದೇಶಕರಾದ ಡಾ. ನಿಶಾ ಮೆಂಡಿರಟ್ಟಾ, ಐಐಹೆಚ್‍ಎಸ್ ನಿರ್ದೇಶಕ, ಅರೋಮರ್ ರೆವಿ, ಎಇಇಇ ಸಂಸ್ಥಾಪಕರು ಮತ್ತು ಅಧ್ಯಕ್ಷರಾದ ಸತೀಶ್ ಕುಮಾರ್ ಮುಂತಾದವರು ಕಾರ್ಯಕ್ರಮ ಕುರಿತು ಮಾತನಾಡಿದರು.
0 ಕಾಮೆಂಟ್‌ಗಳು