9ಕ್ಕೆ ಪಾಂಡವಪುರ ಹೌಸಿಂಗ್ ಬೋರ್ಡ್ 2022-23ನೇ ಸಾಲಿನ ಸರ್ವ ಸದಸ್ಯರ ಸಾಮಾನ್ಯ ಸಭೆ

ಪಾಂಡವಪುರ : ಇದೇ ತಿಂಗಳ 9 ರಂದು ಬೆಳಗ್ಗೆ 11 ಗಂಟೆಗೆ ಪಟ್ಟಣದ ಟಿಎಪಿಸಿಎಂಎಸ್‌ ಸಭಾಂಗಣದಲ್ಲಿ ಪಾಂಡವಪುರ ತಾಲ್ಲೂಕು ಗೃಹ ನಿರ್ಮಾಣ ಸಹಕಾರ ಸಂಘದ 2022-23ನೇ ಸಾಲಿನ ಸರ್ವ ಸದಸ್ಯರ ಸಾಮಾನ್ಯ ಸಭೆ ಕರೆಯಲಾಗಿದೆ ಎಂದು ಸಂಘದ ಅಧ್ಯಕ್ಷ ಜಿ.ಇ.ರವಿಕುಮಾರ್‌ ತಿಳಿಸಿದ್ದಾರೆ.
ಮಂಗಳವಾರ ಬೆಳಗ್ಗೆ ಸಂಘದ ಕಚೇರಿಯಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಸಭೆಯ ಆಹ್ವಾನ ಕುರಿತು ಎಲ್ಲ ಸದಸ್ಯರಿಗೂ ಅಂಚೆ ಮೂಲಕ ಈಗಾಗಲೇ ಆಹ್ವಾನ ಪತ್ರಿಕೆ ಕಳಿಸಲಾಗಿದೆ. ಆದಾಗ್ಯೂ ಪತ್ರಿಕೆ ತಲುಪದಿದ್ದವರಿಗೆ ಮಾಹಿತಿ ನೀಡುವ ಸಲುವಾಗಿ ಮಾಧ್ಯಮಗಳ ಮೂಲಕ ವಿಷಯ ತಿಳಿಸಲು ಸುದ್ದಿಗೋಷ್ಠಿ ಕರೆಯಲಾಗಿದೆ ಎಂದರು.
ಸರ್ವ ಸದಸ್ಯರು ಸಕಾಲಕ್ಕೆ ಆಗಮಿಸಿ ಸಭೆಯನ್ನು ಯಶಸ್ವಿಗೊಳಿಸಬೇಕೆಂದು ಅವರು ಕೋರಿದರು.
ಇದೇ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಸಿ.ಆರ್‌.ರಮೇಶ್‌ ಮಾತನಾಡಿ, ಸಹಕಾರ ಸಂಘಗಳ ನಿಯಮಾವಳಿ ತಿದ್ದುಪಡಿ ಆಗಿರುವ ಕಾರಣ ಸದಸ್ಯರು ಸಂಘದಲ್ಲಿ ಯಾವುದಾದರೊಂದು ವ್ಯವಹಾರ ನಡೆಸುವ ಮೂಲಕ ಚಟುವಟಿಕೆ ಹೊಂದಿರಬೇಕು. ಮತ್ತು ಕನಿಷ್ಠ ಎರಡು ಸಾಮಾನ್ಯ ಸಭೆಗಳಿಗೆ ಹಾಜರಾಗಬೇಕು ಇಲ್ಲದಿದ್ದಲ್ಲಿ ಅಂತಹರವರಿಗೆ ಮತದಾನದ ಹಕ್ಕು ಇರುವುದಿಲ್ಲ. ಈ ಬಗ್ಗೆ ಸದಸ್ಯರು ಜಾಗೃತಿ ವಹಿಸಬೇಕು ಎಂದು ಸಲಹೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ನಿರ್ದೇಶಕರಾದ ಹುಚ್ಚೇಗೌಡ, ಬಿ.ಎಸ್‌.ಜಯರಾಮು, ಭಾಸ್ಕರ,  ಕಾರ್ಯದರ್ಶಿ ಪ್ರಕಾಶ್‌ ಇದ್ದರು
.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು