ಗೌರ್ಮೆಂಟ್‌ ಸ್ಕೂಲ್‌ ವಿದ್ಯಾರ್ಥಿ ಈಗ ಡಿಸ್ಟ್ರಿಕ್ಟ್‌ ಜಡ್ಜ್

ಸರಗೂರು ತಾಲ್ಲೂಕು ಮುಳ್ಳೂರು ಗ್ರಾಮದ  ಬಿ.ಸೋಮಶೇಖರ್ ಜಿಲ್ಲಾ ನ್ಯಾಯಾಧೀಶರಾಗಿ ಆಯ್ಕೆ


ಮೈಸೂರು : ಸರಗೂರು ತಾಲ್ಲೂಕಿನ ಕಾಡಂಚಿನ ಗ್ರಾಮವಾದ ಮುಳ್ಳೂರಿನ ರಾಜಮ್ಮ ಲೇ. ಭದ್ರಯ್ಯ ಅವರ ನಾಲ್ಕನೇ ಮಗ ಬಿ.ಸೋಮಶೇಖರ್ ಅವರು ಜಿಲ್ಲಾ ನ್ಯಾಯಾಧೀಶರಾಗಿ ಆಯ್ಕೆಯಾಗಿದ್ದಾರೆ.
ಹೆಚ್,ಡಿ. ಕೋಟೆ ಮತ್ತು ಮೈಸೂರಿನಲ್ಲಿ ವಕೀಲಿ ವೃತ್ತಿ ನಡೆಸುತ್ತಿದ್ದ ಸೋಮಶೇಖರ್ ಅವರು ಕಳೆದ ಮಾರ್ಚ್ ತಿಂಗಳಲ್ಲಿ ನಡೆದ ಜಿಲ್ಲಾ ನ್ಯಾಯಾಧೀಶರ ಹುದ್ದೆಯ ಮುಖ್ಯ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಇದೀಗ ಜಿಲ್ಲಾ ನ್ಯಾಯಾಧೀಶರಾಗಿ ಆಯ್ಕೆಯಾಗಿದ್ದಾರೆ
 ಹಳ್ಳಿಗಾಡಿನ ಬಡ ಅನಕ್ಷರಸ್ತ ರೈತ ಕುಟುಂಬದ ಹಿನ್ನಲೆ ಇರುವ ಬಿ.ಸೋಮಶೇಖರ್ ಅವರು ಮುಳ್ಳೂರು ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಮುಳ್ಳೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ, ಸರಗೂರು ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪಿಯುಸಿ ಮುಗಿಸಿ  ಮೈಸೂರಿನ ಮಹಾರಾಜ ಕಾಲೇಜಿನಲ್ಲಿ  ಬಿ.. ಪದವಿ ಪಡೆದು ಇಲ್ಲಿನ ವಿದ್ಯಾವರ್ಧಕ ಕಾಲೇಜಿನಲ್ಲಿ ಕಾನೂನು  ಪದವಿ ಶಿಕ್ಷಣ ಪೂರೈಸಿ ಹೆಚ್.ಡಿ.ಕೋಟೆ ಮತ್ತು ಮೈಸೂರಿನಲ್ಲಿ ವಕೀಲಿ ವೃತ್ತಿ ನಡೆಸುತ್ತಿದ್ದರು.
ಸಿವಿಲ್‌ ಮತ್ತು ಕ್ರಿಮಿನಲ್‌ ವ್ಯಾಜ್ಯಗಳಲ್ಲಿಉತ್ತಮ ವಕೀಲರು ಎಂದು ಸೋಮಶೇಖರ್‌ ಈ ಭಾಗದಲ್ಲಿ ಖ್ಯಾತಿ ಗಳಿಸಿದ್ದರು.
ಸರ್ಕಾರಿ ಶಾಲಾ  ಶಿಕ್ಷಣದ ಗುಣಮಟ್ಟ ಕುರಿತು ಮೂಗು ಮುರಿಯುವ ಈ ಕಾಲದಲ್ಲಿ ೧೫ ವರ್ಷ ಸರ್ಕಾರಿ ಶಾಲೆಯಲ್ಲಿ ಓದಿದ ಬಿ.ಸೋಮಶೇಖರ್‌ ನ್ಯಾಯಾಧೀಶರಾಗಿ ಆಯ್ಕೆಯಾಗಿರುವುದು  ಸರ್ಕಾರಿ ಶಾಲೆಗಳಿಗೆ ಸಂದ ಗೌರವವಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು