ಮಣಿಪುರ ಹತ್ಯಾಕಾಂಡ ನಿಯಂತ್ರಿಸುವಲ್ಲಿ ಕೇಂದ್ರ ಸರ್ಕಾರದ ನಿರ್ಲಕ್ಷ್ಯ ಖಂಡಿಸಿ ಮೈಸೂರಿನಲ್ಲಿ ಎಸ್ಡಿಪಿಐ, ಪ್ರಗತಿಪರ ಕ್ರೈಸ್ತ ಸಂಘಟನೆಗಳಿಂದ ಪ್ರತಿಭಟನೆ

ಮಣಿಪುರ ಹತ್ಯಾಕಾಂಡ ನಿಯಂತ್ರಿಸುವಲ್ಲಿ ಕೇಂದ್ರ ಸರ್ಕಾರದ ನಿರ್ಲಕ್ಷ್ಯ ಖಂಡಿಸಿ ಮೈಸೂರಿನಲ್ಲಿ ಎಸ್‌ಡಿಪಿಐ, ಪ್ರಗತಿಪರ ಕ್ರೈಸ್ತ ಸಂಘಟನೆಗಳಿಂದ ಪ್ರತಿಭಟನೆ

ಮೈಸೂರು : ಕಳೆದ ಮೂರು ತಿಂಗಳಿನಿಂದ ಮಣಿಪುರ ರಾಜ್ಯವು ಜನಾಂಗೀಯ ಘರ್ಷಣೆಗಳಿಂದ ಹೊತ್ತಿ ಉರಿಯುತ್ತಿದ್ದರೂ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಅರಾಜಕತೆ ಬಗ್ಗೆ ತಲೆ ಕೆಡಿಸಿಕೊಳ್ಳದೆ ವಿದೇಶ ಪ್ರವಾಸದಲ್ಲಿ ಮಗ್ನರಾಗಿದ್ದಾರೆಂದು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ರಾಜ್ಯಾಧ್ಯಕ್ಷ  ಅಬ್ದುಲ್ ಮಜೀದ್ ಆರೋಪಿಸಿದರು.
 ನಗರದ ಸೆಂಟ್ ಫಿಲೋಮಿನಾ ಚರ್ಚ್ ವೃತ್ತದಲ್ಲಿ  ಗುರುವಾರ ರಾತ್ರಿ ಎಸ್ಡಿಪಿಐ ಮತ್ತು ಪ್ರಗತಿಪರ ಕ್ರೈಸ್ತ ಸಂಸ್ಥೆ ಮಣಿಪುರದಲ್ಲಿ ಕ್ರೈಸ್ತರ ಮೇಲಿನ ಹಿಂಸಾಚಾರ ಖಂಡಿಸಿ ಆಯೋಜಿಸಿದ್ದ ಕ್ಯಾಂಡಲ್ ಮಾರ್ಚ್ ಪ್ರತಿಭಟನೆಯ ನೇತೃತ್ವ ವಹಿಸಿ ಅವರು ಮಾತನಾಡಿದರು

ಮಣಿಪುರದಲ್ಲಿ ಕ್ರೈಸ್ತ ಬಂಧುಗಳ ಮೇಲೆ ನಡೆಯುತ್ತಿರುವ ಗಲಭೆ, ಜನಾಂಗೀಯ ಹತ್ಯೆಗಳು, ಹಿಂಸಾಚಾರ ತಾರಕಕ್ಕೇರಿದೆಗಲಭೆಯಲ್ಲಿ ಇಲ್ಲಿಯ ತನಕ ಸುಮಾರು ೧೪೨ ಮಂದಿ ಕೊಲ್ಲಲ್ಪಟ್ಟಿದ್ದು, ೫೦ ಸಾವಿರಕ್ಕೂ ಹೆಚ್ಚು ಜನರು ನಿರಾಶ್ರಿತರಾಗಿದ್ದಾರೆ.
ಒಟ್ಟು ,೯೯೫ ಎಫ್ಐಆರ್ ದಾಖಲಾಗಿದೆ ೫೦೫೩ ಬೆಂಕಿ ಹಚ್ಚಿದ ಪ್ರಕರಣಗಳು ನಡೆದಿವೆಒಂದು ಸಣ್ಣ ರಾಜ್ಯದಲ್ಲಿ  ಇಷ್ಟೊಂದು ದೊಡ್ಡ ಮಟ್ಟದಲ್ಲಿ ಜನಾಂಗೀಯ ಹತ್ಯೆ, ಗಲಭೆ
ನಡೆಯುತ್ತಿದ್ದರೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮಣಿಪುರಕ್ಕೆ ಭೇಟಿ ಕೊಟ್ಟಿಲ್ಲ, ಇಲ್ಲಿವರೆಗೂ ಗಲಭೆಯೂ ನಿಂತಿಲ್ಲ. ಮಣಿಪುರದಲ್ಲಿ ಬಿಜೆಪಿ ಸರ್ಕಾರ ಆಡಳಿತದಲ್ಲಿದೆ. ಕೇಂದ್ರದಲ್ಲಿಯೂ ಬಿಜೆಪಿ ಸರ್ಕಾರವಿದೆ. ಆದರೂ ಗಲಭೆ ನಿಯಂತ್ರಿಸಲು ಯಾರೂ ಮುಂದಾಗುತ್ತಿಲ್ಲ. ಈಗ ನಡೆಯುತ್ತಿರುವ ಜನಾಂಗೀಯ ಘರ್ಷಣೆ ಮತ್ತು ಕೊಲೆ ಸುಲಿಗೆಗಳು ತಕ್ಷಣ ತಡೆಯಬೇಕು ಮತ್ತು ಮಣಿಪುರದಲ್ಲಿ ಶಾಂತಿ ನೆಲೆಸುವಂತೆ ಕ್ರಮ ಕೈಗೊಳ್ಳಬೇಕೆಂದು ಅವರು ಗ್ರಹಿಸಿದರು.

ಪ್ರತಿಭಟನೆಯಲ್ಲಿ ನೂರಾರು ಎಸ್ಡಿಪಿಐ ಕಾರ್ಯಕರ್ತರು ಮತ್ತು ಕ್ರೈಸ್ತ ಮುಖಂಡರು ಕ್ಯಾಂಡಲ್ ಮಾರ್ಚ್ ಮೆರವಣಿಗೆ ನಡೆಸಿದರು. ಮಣಿಪುರದ ಸಂತ್ರಸ್ತ ಜನರೊಂದಿಗೆ ನಾವು
ಬೆಂಬಲವಾಗಿ ನಿಂತಿದ್ದೇವೆ ಎಂದು ಘೊಷಣೆ ಕೂಗಿ ಕೇಂದ್ರ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಎಸ್ಡಿಪಿಐ ಮೈಸೂರು ಜಿಲ್ಲಾಧ್ಯಕ್ಷ ರಫತ್ ಖಾನ್, ಮೈಸೂರು ಮಹಾನಗರಪಾಲಿಕೆ ಮಾಜಿ ಸದಸ್ಯ ಸ್ವಾಮಿ, ಮುಖಂಡರಾದ ಅಮ್ಜದ್ ಖಾನ್,ಶಫಿಯುಲ್ಲಾ  ಮುಂತಾದವರು ಇದ್ದರು.
 
 
 
 
 
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು