ರಾಜವಂಶಸ್ಥರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಂದ ʻʻಶಿರೋʼʼ ಅವಾರ್ಡ್ ಲಾಂಛನ ಬಿಡುಗಡೆ
ಜೂನ್ 03, 2023
ಮೈಸೂರು : ದೇಶದ ಮಹಿಳಾ ಸಾಧಕಿಯರ ಸಾಧನೆಯ ಗರಿಯನ್ನು ಎತ್ತಿಹಿಡಿಯುವ
ಉದ್ದೇಶದಿಂದ ಟ್ವೆಲ್ ಮೀಡಿಯಾ ಸಂಸ್ಥೆಯಿಂದ ನೀಡಲಾಗುತ್ತಿರುವ ʻʻಶಿರೋʼʼ (She is Hero) ಅವಾರ್ಡ್ ಲಾಂಛನವನ್ನು ಮೈಸೂರು
ಸಂಸ್ಥಾನದ ರಾಜವಂಶಸ್ಥರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಶನಿವಾರ ಬಿಡುಗಡೆ ಮಾಡಿದರು. ನಗರದ ಪ್ರತಿಸ್ಥಿಯ ರ್ಯಾಡಿಸನ್ ಬ್ಲೂ ಹೋಟೆಲ್‌ನಲ್ಲಿ ಶನಿವಾರ ನಡೆದ
ಅದ್ಧೂರಿ ಸಮಾರಂಭದಲ್ಲಿ ಟ್ವೆಲ್ ಮೀಡಿಯಾ ಸಂಸ್ಥೆಯ ಸಂಸ್ಥಾಪಕರೂ ಹಾಗೂ ವ್ಯವಸ್ಥಾಪಕ ನಿರ್ದೇಶಕರೂ
ಆದ ದೀಪಕ್ ಟಾಟೀರ್ ಜೈನ್ ಅವರ ಜತೆಗೂಡಿ ಯದುವೀರ್ ಅವರು ಲಾಂಛನ ಅನಾವರಣಗೊಳಿಸಿದರು.
ಬಳಿಕ ಅವರು ಮಾತನಾಡಿ, ಶಿಕ್ಷಣ, ಆರೋಗ್ಯ ಮತ್ತು ನೀರಾವರಿ ಯೋಜನೆಗಳಿಗೆ
ಮೈಸೂರು ಸಂಸ್ಥಾನದ ಕೊಡುಗೆ ಅಪಾರವಾಗಿದೆ. ನಮ್ಮ ಪೂರ್ವಿಕರು ಅತ್ಯಂತ ದೂರ ದೃಷ್ಟಿಯಿಂದ ಮೈಸೂರು ನಗರವನ್ನು
ಮತ್ತು ಮೈಸೂರು ಸಂಸ್ಥಾನವನ್ನು ಸಮೃದ್ಧಿಗೊಳಿಸಿದ್ದಾರೆ. ಈ ನಿಟ್ಟಿನಲ್ಲಿ ಅದನ್ನು ಕಾಪಾಡಿಕೊಂಡು
ಹೋಗಬೇಕಿದೆ ಎಂದರು. ಮೈಸೂರು ನಗರದಲ್ಲಿ ಉತ್ತಮ ಪರಿಸರ ನಿರ್ಮಾಣ, ಸ್ವಚ್ಛತೆ ಕಾಪಾಡುವುದು
ಎಲ್ಲರ ಜವಾಬ್ದಾರಿಯಾಗಿದೆ. ಈ ವಿಷಯದಲ್ಲಿ ನಾವು ಸದಾ ಜನರ ಅಭಿವೃದ್ಧಿಯ ಜತೆಗಿದ್ದೇವೆ ಎಂದರು.
ಇದೇ ವೇಳೆ ಯದುವೀರ್ ಅವರು ಟ್ವೆಲ್ ಮೀಡಿಯಾ ಸಂಸ್ಥೆಯ ಜತೆ ಮಾಧ್ಯಮ
ಸಂವಾದ ನಡೆಸಿ ವಿದ್ದಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಿದರು. ಟ್ವೆಲ್ ಮೀಡಿಯಾ ಸಂಸ್ಥೆಯ ಸಂಸ್ಥಾಪಕರೂ ಹಾಗೂ ವ್ಯವಸ್ಥಾಪಕ ನಿರ್ದೇಶಕರೂ
ಆದ ದೀಪಕ್ ಟಾಟೀರ್ ಜೈನ್ ಮಾತನಾಡಿ, ಸಂಸ್ಥೆಯು ಕಳೆದ 6 ವರ್ಷಗಳಿಂದ ಮಹಿಳಾ ಸಬಲೀಕರಣಕ್ಕಾಗಿ ನಿರಂತರವಾಗಿ
ಶ್ರಮಿಸುತ್ತಾ ಬಂದಿದೆ. ಸಮಾಜದ ವಿವಿಧ ವರ್ಗಗಳಲ್ಲಿ ಸಾಧನೆ ಮಅಡಿದ ಸಾಧಕಿಯರನ್ನು ಗುರುತಿಸಿ ನಾವು
ಗೌರವಿಸುತ್ತಿದ್ದೇವೆ.ಈಗಾಗಲೇ ನಾವು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕಾರ್ಯಕ್ರಮಗಳನ್ನೂ ಸಹ ನಡೆಸಿದ್ದೇವೆ.
ಮಹಿಳಾ ಸಾಧಕಿಯರ ಬೆನ್ನುಲುಬಾಗಿ ನಿಂತು ಮಹಿಳಾ ಸಬಲೀಕರಣಕ್ಕೆ ಸಾಧ್ಯವಾದಷ್ಟು ಶ್ರಮವಹಿಸುತ್ತಿದ್ದೇವೆ.
ರಾಷ್ಟ್ರಮಟ್ಟದ ʻʻಶಿರೋʼʼ ಅವಾರ್ಡ್ ಗೆ ಮಹಿಳಾ ಸಾಧಕಿಯರು ಸಂಸ್ಥೆಯ
ವೆಬ್ ಸೈಟ್ ಮೂಲಕ ಈಗ ಅರ್ಜಿ ಸಲ್ಲಿಸಬಹುದಾಗಿದ್ದು, ಇದೇ ಡಿಸೆಂಬರ್ ತಿಂಗಳಲ್ಲಿ ʻʻಶಿರೋʼʼ
ಅವಾರ್ಡ್ ಸಮಾರಂಭ ಆಯೋಜಿಸಲಾಗಿದೆ ಎಂದರು. ಸರಳತೆ
ಮೆರೆದ ಯದುವೀರ್ : ರಾಜವಂಶಸ್ಥರ ಯಾವ ಹಮ್ಮು ಬಿಮ್ಮು ಇಲ್ಲದೆ ಯದುವೀರ್ ಅವರು ವೇದಿಕೆಯಲ್ಲಿ
ಅತ್ಯಂತ ಸರಳತೆ ಮೆರೆದ ಘಟನೆ ನಡೆಯಿತು. ಮಾಧ್ಯಮ ಸಂವಾದದ ವೇಲೆ ತಾವು ಕುಳಿತುಕೊಳ್ಳುವ ಕುರ್ಚಿಯನ್ನು
ತಾವೇ ಎತ್ತಿಟ್ಟುದು ಕಂಡು ಬಂತು. ಜತೆಗೆ ಮಾಧ್ಯಮ ಸಂವಾದದಲ್ಲಿ ಹತ್ತಾರು ವಿದ್ಯಾರ್ಥಿಗಳ ಪ್ರಶ್ನೆಗಳಿಗೆ
ಯಾವುದೇ ರತಾರುತಿ ಇಲ್ಲದೆ ಉತ್ತರಿಸಿದರು. ನೂರಾರು ವಿದ್ಯಾರ್ಥಿಗಳು ಯದುವೀರ್ ಅವರೊಂದಿಗೆ ಭಾವಚಿತ್ರ
ತೆಗೆಸಿಕೊಳ್ಳಲು ಮುಗಿಬಿದ್ದಾಗ ಎಲ್ಲರ ಜತೆಯೂ ಭಾವಚಿತ್ರವನ್ನು ತೆಗೆಸಿಕೊಂಡು ವಿದ್ಯಾರ್ಥಿಗಳ ಮನಗೆದ್ದರು. ಸಮಾರಂಭದಲ್ಲಿ ಟ್ವೆಲ್ ಮೀಡಿಯಾ ಸಂಸ್ಥೆಯ ಕಾರ್ಯಕಾರಿ ಮಂಡಳಿ ನಿರ್ದೇಶಕರಾದ
ಸಿಂಧೂ ಮಂಗಳವೇಢ ಮುಂತಾದವರು ಇದ್ದರು.
0 ಕಾಮೆಂಟ್‌ಗಳು