ಹೊಸ ಉದ್ಯಮಗಳಿಂದ ಉದ್ಯೋಗ ಸೃಷ್ಟಿ : ದರ್ಶನ್ ಪುಟ್ಟಣ್ಣಯ್ಯ

ಕಟ್ಟೇರಿ ಸರ್ಕಲ್‌ನಲಿ ಶ್ರೀ ವಿನಾಯಕ ರೆಸ್ಟೋರೆಂಟ್‌ ಬೋರ್ಡಿಂಗ್‌ ಮತ್ತು ಲಾಡ್ಜಿಂಗ್‌ ಉದ್ಘಾಟಿಸಿದ ಶಾಸಕ ದರ್ಶನ್‌ ಪುಟ್ಟಣ್ಣಯ್ಯ

ಪಾಂಡವಪುರ : ತಾಲೂಕಿನಲ್ಲಿ ಹೊಸ ಹೊಸ ಉದ್ಯಮಗಳು ಪ್ರಾರಂಭವಾಗುವುದರಿಂದ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ನೂರಾರು ಉದ್ಯೋಗಗಳು ಸೃಷ್ಟಿಯಾಗುತ್ತವೆ ಎಂದು ಶಾಸಕ ದರ್ಶನ್‌ ಪುಟ್ಟಣ್ಣಯ್ಯ ಹೇಳಿದರು.
ತಾಲೂಕಿನ ಕಟ್ಟೇರಿ ಗ್ರಾಮದ ಕೆಆರ್ ಎಸ್ ರಸ್ತೆಯಲ್ಲಿ ನೂತನವಾಗಿ ಪ್ರಾರಂಭವಾದ ಶ್ರೀ ವಿನಾಯಕ ರೆಸ್ಟೋರೆಂಟ್ ಬೋರ್ಡಿಂಗ್ ಮತ್ತು ಲಾಡ್ಜಿಂಗ್ ಉದ್ಘಾಟಿಸಿ ಅವರು  ಮಾತನಾಡಿದರು.

ಸದರಿ ರೆಸ್ಟೋರೆಂಟ್ ಪ್ರಾರಂಭದಿಂದ ಸುಮಾರು 50 ಕ್ಕೂ ಹೆಚ್ಚು ಉದ್ಯೋಗಗಳು ಸೃಷ್ಟಿಯಾಗಿ  ಹತ್ತಾರು ಕುಟುಂಬಗಳಿಗೆ ನೆರವು ನೀಡಿದಂತಾಗಿದೆ.
ಉದ್ಯಮಗಳು ಹೆಚ್ಚು ಅಭಿವೃದ್ಧಿ ಆದಂತೆ ಉದ್ಯೋಗಿಗಳ  ಸಂಖ್ಯೆಯೂ ಹೆಚ್ಚಾಗಲಿದೆ. ಈ ಭಾಗದಲ್ಲಿ ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನವೂ ನೀಡಿದಂತಾಗುತ್ತದೆ ಎಂದರು.
ಈ ಕಾರಣದಿಂದ ತಾಲೂಕಿನಲ್ಲಿ ಹೆಚ್ಚು ಉದ್ಯಮಗಳು ಸೃಷ್ಟಿಯಾಗಬೇಕು. ಇದಕ್ಕೆ ತಮ್ಮ ಸಂಪೂರ್ಣ ಸಹಕಾರವಿದೆ ಎಂದರು.

ಬಳಿಕ ಅವರು ನೂತನ ರೆಸ್ಟೋರೆಂಟ್‌ ಮಾಲಿಕರಿಗೆ ಶುಭ ಕೋರಿದರು. ಈ ಸಂದರ್ಭದಲ್ಲಿ ಶಾಸಕ ದರ್ಶನ್‌ ಪುಟ್ಟಣ್ಣಯ್ಯ ಅವರನ್ನು ಹೋಟೆಲ್‌ ಮಾಲಿಕರು ಆತ್ಮೀಯವಾಗಿ ಸನ್ಮಾನಿಸಿ ನೆನಪಿನ ಕಾಣಿಕೆ ನೀಡಿದರು.

ಈ ಸಂದರ್ಭದಲ್ಲಿ ಹೋಟೆಲ್ ಮಾಲಿಕರಾದ ಕೆ.ಎಸ್‌.ನವಿನಾಯಕ, ಎನ್.ಎಂ.ನರೇಂದ್ರ, ಭೂಮಿ ಮಾಲಿಕರಾದ ಕೆ.ಅನಿಲ್‌ ಕುಮಾರ್‌, ಮುಖಂಡರಾದ ಸಮಿವುಲ್ಲಾ, ಗಂಗಣ್ಣ, ನರೇಂದ್ರ, ರಘು, ಗಿರೀಶ್, ಹರೀಶ್, ಗೋಪಾಲ ಕೃಷ್ಣ, ಆನಂದ್‌, ತೂಬಿನಕೆರೆ ಜಯರಾಮು, ದೀಪು, ಅಭಿ, ರಾಮ್‌ಜೀ ಮುಂತಾದವರು ಇದ್ದರು.




 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು