ಯಶಸ್ವಿಯಾಗಿ ನಡೆದ ತ್ರಿಜನ್ಮ ಮೋಕ್ಷ ಅಥವಾ ಜಯ ವಿಜಯರ ಶಾಪ ವಿಮೋಚನೆ
ಪೌರಾಣಿಕ ನಾಟಕ
ಯಶಸ್ವಿಯಾಗಿ ನಡೆದ ತ್ರಿಜನ್ಮ ಮೋಕ್ಷ ಅಥವಾ ಜಯ ವಿಜಯರ ಶಾಪ ವಿಮೋಚನೆ
ಪೌರಾಣಿಕ ನಾಟಕ
ಪಾಂಡವಪುರ ಪಟ್ಟಣದ ಪಾಂಡವ ಕ್ರೀಡಾಂಗಣದಲ್ಲಿ ವಕೀಲರ ಸಂಘದ ವತಿಯಿಂದ ನಡೆದ ‘ತ್ರಿಜನ್ಮ ಮೋಕ್ಷ ಅಥವಾ ಜಯವಿಜಯರ ಶಾಪ ವಿಮೋಚನೆ’ ಪೌರಾಣಿಕ ನಾಟಕ ಪ್ರದರ್ಶನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಬಿ.ಜಿ.ರಮಾ ಅವರನ್ನು ಪಾಂಡವಪುರದ ವಕೀಲರು ಗೌರವಿಸಿದರು.
ಪಾಂಡವಪುರ : ಪಟ್ಟಣದ ಪಾಂಡವ ಕ್ರೀಡಾಂಗಣದಲ್ಲಿ ಶನಿವಾರ ಬೆಳಿಗ್ಗೆ
ಪಾಂಡವಪುರದ ವಕೀಲರು ಅಭಿನಯಿಸಿದ ತ್ರಿಜನ್ಮ ಮೋಕ್ಷ
ಅಥವಾ ಜಯ ವಿಜಯರ ಶಾಪ ವಿಮೋಚನೆ ಎಂಬ ಪೌರಾಣಿಕ ನಾಟಕ ನೋಡಲು ಭಾರಿ ಸಂಖ್ಯೆಯಲ್ಲಿ ಪ್ರೇಕ್ಷಕರು ಸೇರಿದ್ದುದು
ವಿಶೇಷವಾಗಿತ್ತು.
ಕೇವಲ ಗ್ರಾಮೀಣ ಪ್ರದೇಶಗಳಲ್ಲಿ ಹಬ್ಬ ಹರಿದಿನದ ಸಂದಭದಲ್ಲಿ ನಡೆಯುತ್ತಿದ್ದ
ಪೌರಾಣಿಕ ನಾಟಕಗಳು ನಶಿಸುತ್ತಿವೆ ಎಂಬ ಕಲಾವಿದರ ಕೊರಗನ್ನು ನೀಗಿಸುವಲ್ಲಿ ಯಶಸ್ವಿಯಾದ ಪಾಂಡವಪುರದ
ವಕೀಲರು ಶನಿವಾರ ಭರ್ಜರಿಯಾಗಿ ಅಭಿನಯಿಸುವ ಮೂಲಕ ಪ್ರೇಕ್ಷಕರ ಮನಸೂರೆಗೊಂಡರು.
ದೇವೇಂದ್ರ, ಕುಂಭಕರ್ಣ, ಮಕರಾಕ್ಷ ಮತ್ತು ಕರ್ಣನ ಪಾತ್ರದಲ್ಲಿ ವಕೀಲ
ಕೆ.ಎಸ್.ನಾಗರಾಜು ಅಭಿನಯಿಸಿದರು.
ದಿನನಿತ್ಯ ಕೋರ್ಟು, ಕಚೇರಿ, ಜಡ್ಜು, ಕಕ್ಷಿದಾರ ಎಂಬ ಒತ್ತಡದ ಬದುಕಿನ ನಡುವೆ ಇಂಗ್ಲಿಷ್ ಭಾಷೆಯ ಸೋಂಕಿಲ್ಲದೆ, ಅಪ್ಪಟ ಕನ್ನಡ ಭಾಷೆಯಲ್ಲಿ ಪೌರಾಣಿಕ ನಾಟಕವನ್ನು ಅಭಿನಯಿಸಿ ಬಹುತೇಕ ಹಿರಿಯ ಪ್ರೇಕ್ಷಕರನ್ನು ರಂಜಿಸುವಲ್ಲಿ ವಕೀಲರು ಯಶಸ್ವಿಯಾದರು.
ದೇವೇಂದ್ರ, ಕುಂಭಕರ್ಣ, ಮಕರಾಕ್ಷ ಮತ್ತು ಕರ್ಣನ ಪಾತ್ರದಲ್ಲಿ ವಕೀಲ ಕೆ.ಎಸ್.ನಾಗರಾಜು ವೃತ್ಿನಿರತ ಕಲಾವಿದನ ಹಾಗೆ ಅಭಿನಯಿಸಿ ತಮ್ಮ ಸಹೋದ್ಯೋಗಿಗಳ ಮೆಚ್ಚುಗೆಗೆ ಪಾತ್ರರಾದರೇ, ಹಿರಾಣ್ಯಕ್ಷ ಮತ್ತು ಶಕಿನಿಯ ಪಾತ್ರದಲ್ಲಿ ಹೆಸರಾಂತ ವಕೀಲ ಕಣಿವೆ ಯೋಗೇಶ್ ಮಿಂಚಿದರು. ಈ ನಡುವೆ ಕೆಲವು ಚಲನ ಚಿತ್ರಗಳಲ್ಲಿ ನಟಿಸಿ ಅಭಿನಯವನ್ನು ಕರಗತ ಮಾಡಿಕೊಂಡಿರುವ ಶ್ರೀರಂಗಪಟ್ಟಣ ನ್ಯಾಯಾಲಯದ ವಕೀಲ ಚಂದಗಿರಿಕೊಪ್ಪಲು ಮೂರ್ತಿ ರಾವಣ, ಮಾಯಾ ರಾವಣನ ಪಾತ್ರದಲ್ಲಿ ಹತ್ತು ತಲೆ ಹೊತ್ತು ಪ್ರೇಕ್ಷಕರನ್ನು ರಂಜಿಸಿದರು.ಹಿರಾಣ್ಯಕ್ಷ ಮತ್ತು ಶಕುನಿಯ ಪಾತ್ರದಲ್ಲಿ ಹೆಸರಾಂತ ವಕೀಲ ಕಣಿವೆ
ಯೋಗೇಶ್ ಮಿಂಚಿದರು.
ಅಲ್ಲದೇ, ವಕೀಲ ಎನ್.ಎಂ.ಸುರೇಶ್ ಅವರ ಮಕ್ಕಳಾದ ಸಾಖ್ಯಮುನಿ, ಸಾಖ್ಯಸಿಂಹ
ಅವರು ಸನಾಕಾದಿ ಮುನಿಗಳ ಪಾತ್ರದಲ್ಲಿ ಅಭಿನಯಿಸಿದರು.
ನಾಟಕ ಪ್ರಾರಂಭಕ್ಕೂ ಮುನ್ನ ಅಪರ ಜಿಲ್ಲಾ ಸತ್ರ ನ್ಯಾಯಾಧೀಶ ಗೋಪಾಲಕೃಷ್ಣ ರೈ.ಟಿ. ಅವರು ವೇದಿಕೆ ಕಾರ್ಯಕ್ರಮವನ್ನು
ಉದ್ಘಾಟಿಸಿದರು. ಬಳಿಕ ಅವರು ಮಾತನಾಡಿ, ದಿನನಿತ್ಯ ಕಕ್ಷಿದಾರರು ಮತ್ತು
ನ್ಯಾಯಾಲಯದ ಸಂಪರ್ಕದಲ್ಲಿರುವ ವಕೀಲರು ತಮ್ಮ
ಒತ್ತಡದ ಕಾರ್ಯಕ್ರಮಗಳ ನಡುವೆ ನಾಟಕ ಮಾಡಿರುವುದು
ಪ್ರಶಂಸನೀಯ, ಸತತ ಎರಡೂವರೆ ತಿಂಗಳ ಕಾಲ ಅಭ್ಯಾಸ ನಡೆಸಿ ಇಂಗ್ಲಿಷ್ ಭಾಷೆಯ ಲವಶೇಷವೂ ಇಲ್ಲದೆ, ಸಂಪೂರ್ಣವಾಗಿ ಕನ್ನಡ ಭಾಷೆಯಲ್ಲಿ ಅಭಿನಯಿಸುವುದು ಕಷ್ಟದ ಕೆಲಸ
ಇದನ್ನು ನಮ್ಮ ವಕೀಲರು ಸಾಧ್ಯವಾಗಿಸಿದ್ದಾರೆ ಕನ್ನಡ ಭಾಷೆ, ಸಂಸ್ಕೃತಿ ಉಳಿಸಲು ಪೌರಾಣಿಕ ನಾಟಕಗಳು ಹೆಚ್ಚು ಪ್ರದರ್ಶನಗೊಳ್ಳಬೇಕು ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಬಿ.ಜಿ.ರಮಾ ಅವರು ಮಾತನಾಡಿ,
ನಾಟಕದಲ್ಲಿ ಅಭಿಯನ ಮಾಡೋದು ಸುಲಭದ ಮಾತಲ್ಲ. ಜೀವನವೇ ಒಂದು ನಾಟಕ ರಂಗವಾಗಿದ್ದು ನಾವೆಲ್ಲರು ಅದರಲ್ಲಿ ಬರುವ ಪಾತ್ರಧಾರಿಗಳು. ನಮ್ಮ ವಾಸ್ತವ
ಬದುಕು ಮತ್ತು ಇಂತಹ ನಾಟಕಗಳಲ್ಲಿ ನಮ್ಮ ಪಾತ್ರಗಳು ನಾಟಕೀಯವಾಗಬಾರದು ನಮ್ಮ ಅಭಿನಯ ಸಹಜವಾಗಿರಬೇಕು
ಎಂದು ಸಲಹೆ ನೀಡಿದರು.
ಶ್ರೀರಂಗಪಟ್ಟಣ ನ್ಯಾಯಾಲಯದ ವಕೀಲ ಚಂದಗಿರಿಕೊಪ್ಪಲು ಮೂರ್ತಿ ರಾವಣ,
ಮಾಯಾ ರಾವಣನ ಪಾತ್ರದಲ್ಲಿ ಹತ್ತು ತಲೆ ಹೊತ್ತು ಪ್ರೇಕ್ಷಕರನ್ನು ರಂಜಿಸಿದರು.
ಮೇಲುಕೋಟೆ ಶ್ರೀಚಲುವನಾರಾಯಣಸ್ವಾಮಿ ಕೃಪಾಪೋಷಿತ ನಾಟಕ ಮಂಡಳಿ ಮತ್ತು ವಕೀಲರ ಸಂಘದ ವತಿಯಿಂದ
ವಕೀಲರ ಸಂಘದ ಅಧ್ಯಕ್ಷ ಕೆ.ಕಾಳೇಗೌಡ ಮಾತನಾಡಿ, ವಕೀಲರು ದಿನನಿತ್ಯದ ಜಂಜಾಟದಲ್ಲಿ ತಮ್ಮ
ಮಾನಸಿಕ ಒತ್ತಡ ಕಡಿಮೆ ಮಾಡಿಕೊಳ್ಳಲು ಆಗಾಗ್ಗೆ ಇಂತಹ ಸಾಂಸ್ಕೃತಿಕ ಕಾರ್ಯಕ್ರಮ ನಡೆಸುವುದು ಅಗತ್ಯವಾಗಿದೆ. ಕೆಲವರು ವಕೀಲರು ನಾಟಕ ಆಡುತ್ತಾರೆ ಎಂದು ಹಾಸ್ಯಾಸ್ಪದವಾಗಿ ಮಾತನಾಡುತ್ತಾರೆ. ನಮ್ಮಲ್ಲೂ ಸಹ ಒಂದಲ್ಲಾ ಒಂದು ರೀತಿಯ ಕಲೆಗಳಿದ್ದು ಅವುಗಳನ್ನು ಹೊರಹಾಕಲು ಇದು ಸಹಕಾರಿಯಾಗಿದೆ ಎಂದು ಹೇಳಿದರು.
ಸನಕಾದಿ ಮುನಿಗಳ ಪಾತ್ರದಲ್ಲಿ ಸಾಖ್ಯಮುನಿ, ಸಾಖ್ಯಸಿಂಹ ಅಭಿನಯಿಸಿದರು
0 ಕಾಮೆಂಟ್‌ಗಳು