ಸಮಾಜ ಸೇವಕ ಚಿನಕುರಳಿ ಪ್ರದೀಪ್‍ಗೆ ಸ್ಯಾಂಡಲ್‍ವುಡ್ ಸ್ಟಾರ್ಸ್ ಅವಾರ್ಡ್ ಪ್ರಶಸ್ತಿ ಪ್ರದಾನ

ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತು ಅಕ್ಕಮಹಾದೇವಿ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಸಮಾಜ ಸೇವಕ ಚಿನಕುರಳಿ ಪ್ರದೀಪ್ ಅವರಿಗೆ ಸ್ಯಾಂಡಲ್‍ವುಡ್ ಸ್ಟಾರ್ಸ್ ಅವಾರ್ಡ್-2023 ಪ್ರಶಸ್ತಿ ನೀಡಿ ಗೌರವಿಸಿದರು. ಚಿತ್ರನಟ ರಾಸಾ ಡಿಜಿಟಲ್ ಮಿಡಿಯಾ ವ್ಯವಸ್ಥಾಪಕ ರಾಸಾ ಆರ್.ಈಶ್ವರ್ ಹಾಗೂ ಟ್ರಸ್ಟಿ ಹೇಮಾ ಮುಂತಾದ ಗಣ್ಯರು ಇದ್ದರು.

ಪಾಂಡವಪುರ : ತಾಲ್ಲೂಕಿನ ಚಿನಕುರಳಿ ಗ್ರಾಮದ ಸಮಾಜ ಸೇವಕ ಪ್ರದೀಪ್ ಅವರಿಗೆ ಬೆಂಗಳೂರಿನ ರಾಸಾ ಕನ್ನಡ ಮತ್ತು ಕಲಾ ಸಂಸ್ಕøತಿ ಟ್ರಸ್ಟ್ ವತಿಯಿಂದ ಸ್ಯಾಂಡಲ್‍ವುಡ್ ಸ್ಟಾರ್ಸ್ ಅವಾರ್ಡ್-2023 ಪ್ರಶಸ್ತಿ ನೀಡಿ ಗೌರವಿಸಲಾಯಿತು. 

ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತು ಅಕ್ಕಮಹಾದೇವಿ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಚಿತ್ರನಟ ರಾಸಾ ಡಿಜಿಟಲ್ ಮಿಡಿಯಾ ವ್ಯವಸ್ಥಾಪಕ ರಾಸಾ ಆರ್.ಈಶ್ವರ್ ಹಾಗೂ ಟ್ರಸ್ಟಿ ಹೇಮಾ ಮುಂತಾದ ಗಣ್ಯರು ಚಿನಕುರಳಿ ಪ್ರದೀಪ್ ಅವರಿಗೆ ಸ್ಯಾಂಡಲ್‍ವುಡ್ ಸ್ಟಾರ್ಸ್ ಅವಾರ್ಡ್-2023 ಪ್ರಶಸ್ತಿ ಪ್ರದಾನ ಮಾಡಿದರು. 

ಈ ಸಂದರ್ಭದಲ್ಲಿ ರಾಸಾ ಆರ್.ಈಶ್ವರ್ ಮಾತನಾಡಿ, ರಾಜ್ಯದಾದ್ಯಂತ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಸಾಧಕರನ್ನು ಗುರುತಿಸಿ ನಮ್ಮ ಸಂಸ್ಥೆ ವಾರ್ಷಿಕ ಪ್ರಶಸ್ತಿ ಪ್ರದಾನ ಮಾಡುತ್ತಿದೆ. ಈ ನಿಟ್ಟಿನಲ್ಲಿ ಚಿನಕುರಳಿ ಪ್ರದೀಪ್ ಅವರ ನಿಷ್ಕಳಂಕ ಸಮಾಜ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗುತ್ತಿದೆ. ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡುವುದರಿಂದ ಅವರಲ್ಲಿನ ಸೇವಾ ಮನೋಭಾವ ಮತ್ತಷ್ಟು ಹೆಚ್ಚಾಗಲಿದೆ ಮತ್ತು ಉಳಿದವರಿಗೆ ಪ್ರೇರಣೆಯಾಗಲಿದೆ ಎಂದರು.


 

 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು