ರೈತಬಣ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಇ.ಎನ್.ಕೃಷ್ಣ ಪಾಂಡವಪುರದಲ್ಲಿ ಭರ್ಜರಿ ರೋಡ್ ಶೋ

ನೂರಾರು ರೈತ ಮಹಿಳೆಯರು, ಮುಖಂಡರು ಭಾಗಿ

ಪಾಂಡವಪುರ : ಕರ್ನಾಟಕ ರಾಜ್ಯ ರೈತಸಂಘ (ರೈತಬಣ) ಬೆಂಬಲಿತ ಪಕ್ಷೇತರ ಅಭ್ಯರ್ಥಿ ಇ.ಎನ್.ಕೃಷ್ಣ ಸೋಮವಾರ ಪಟ್ಟಣದಲ್ಲಿ ಭರ್ಜರಿ ರೋಡ್ ಶೋ ನಡೆಸುವ ಮೂಲಕ ಮತದಾರರ ಗಮನ ಸೆಳೆದರು.
ಇಂಗಲಗುಪ್ಪೆ ಗ್ರಾಮದ ಲಕ್ಷಿö್ಮ ವೆಂಕಟೇಶ್ವರ ದೇವಲಯದಲ್ಲಿ ಪೂಜೆ ಸಲ್ಲಿಸಿ ಬಳಿಕ ತೆರೆದ ವಾಹನದ ಮೂಲಕ ಪಾಂಡವಪುರ ಪಟ್ಟಣದ ಐದು ದೀಪದ ವೃತ್ತಕ್ಕೆ ಆಗಮಿಸಿ ಅಲ್ಲಿಂದ ನಾಗಮಂಗಲ ರಸ್ತೆಯಲ್ಲಿ ರೋಡ್ ಶೋ ನಡೆಸಿದರು.

ಈ ವೇಳೆ ಅವರು ಮಾತನಾಡಿ, ರೈತರ ಸಮಸ್ಯೆಗಳಿಗೆ ಯಾರೂ ಸಹ ಪ್ರಾಮಾಣಿಕವಾಗಿ ಸ್ಪಂದಿಸುತ್ತಿಲ್ಲ. ಬಿಜೆಪಿ ಸರ್ಕಾರದ ನೀತಿ ನಿಯಮಗಳು ರೈತ ವಿರೋಧಿಗಳಾಗಿವೆ. ತಾಲೂಕು ಕಚೇರಿ, ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ರೈತರ ಕೆಲಸಗಳು ಆಗುತ್ತಿಲ್ಲ. ವಿನಾಕಾರಣ ರೈತರಿಗೆ ಕಿರುಕುಳ ನೀಡಲಾಗುತ್ತಿದೆ. ಪಾಂಡವಪುರ ತಾಲೂಕು ಕಚೇರಿ ಭ್ರಷ್ಟರ ಕೂಪವಾಗಿದ್ದು, ಲಂಚಗುಳಿತನ ಹೆಚ್ಚಾಗಿದೆ. ಇದನ್ನೆಲ್ಲಾ ತಡೆಗಟ್ಟಲು ವಿಧಾನಸಭೆಯಲ್ಲಿ ರೈತ ಪ್ರತಿನಿಧಿಯೊಬ್ಬರು ಪ್ರವೇಶ ಮಾಡುವುದು ಅನಿವಾರ್ಯವಾಗಿದೆ ಈ ಕಾರಣದಿಂದ ಕರ್ನಾಟಕ ರಾಜ್ಯ ರೈತಸಂಘ (ರೈತಬಣ)ದ ಬೆಂಬಲಿತ ಪಕ್ಷೇತರ ಅಭ್ಯರ್ಥಿಯಾಗಿ ತಾವು ಈ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿದ್ದು, ರೈತಪರ ಜೀವಗಳು ತಮ್ಮನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು. ರಾಜ್ಯದಲ್ಲಿ ೮ ಕ್ಷೇತ್ರಗಳಲ್ಲಿ ನಮ್ಮ ರೈತಬಣ ಬೆಂಬಲಿತರು ಸ್ಪರ್ಧೆ ಮಾಡುತ್ತಿದ್ದಾರೆ ಎಂದು ಅವರು ವಿವರಿಸಿದರು.



ಮೆರವಣಿಗೆಯಲ್ಲಿ ಗಾರುಡಿಗೊಂಬೆ, ಪಟದ ಕುಣಿತ, ವೀರಗಾಸೆ ಕುಣಿತ, ಡೊಳ್ಳು, ತಮಟೆ, ನಗಾರಿ ಮುಂತಾದ ಕಲಾ ತಂಡಗಳು ಭಾಗವಹಿಸಿದ್ದವು.
ನೂರಾರು ರೈತರು, ರೈತ ಮಹಿಳೆಯರು ಮೆರವಣಿಗೆಯಲ್ಲಿ ಭಾಗವಹಿಸಿ ಇ.ಎನ್.ಕೃಷ್ಣ ಅವರಿಗೆ ಬೆಂಬಲ ನೀಡಿದರು.

ಈ ಸಂದರ್ಭದಲ್ಲಿ ರೈತ ಮುಖಂಡರಾದ ಶಿವಾನಂದ ಮಾಗಳಿಹಾಳ್, ರವಿ ಪಾಟೀಲ್, ಚಂದ್ರಶೇಖರ ಹೆಮ್ಮಿಗೆ, ಮಹೇಶ್ವರ ಸ್ವಾಮಿ, ರವಿ ಪಾಟೀಲ್, ಕೆಂಪರಾಜ್ ಮುಂತಾದವರು ತೆರೆದ ವಾಹನದ ಮೂಲಕ ರ‍್ಯಾಲಿಯಲ್ಲಿ ಭಾಗವಹಿಸಿದ್ದರು. ಮುಖಂಡರಾದ ಕರ್ನಾಟಕ ರಾಜ್ಯ ರೈತಸಂಘ (ರೈತಬಣ)ದ ಉಪಾಧ್ಯಕ್ಷ ಚಂದ್ರಶೇಖರ ಹೆಮ್ಮಿಗೆ, ಬೋಳೇನಹಳ್ಳಿ ಕುಮಾರ, ರಮೇಶ, ರಘು ಮುಂತಾದವರು ಇದ್ದರು.
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು