ಲಕ್ಷ್ಮಿಸಾಗರ ಗ್ರಾಮದಲ್ಲಿ ಸಿಎಸ್‍ಪಿಗೆ ಭಾರಿ ಬೆಂಬಲ : ಅದ್ದೂರಿ ಸ್ವಾಗತ ಪುಟ್ಟರಾಜು ದಣಿವರಿಯದ ನಾಯಕ ಎಂದು ಹೊಗಳಿದ ಎಲ್.ಡಿ.ಕೃಷ್ಣಪ್ಪ
ಮೇ 06, 2023
ಪಾಂಡವಪುರ : ಶಾಸಕ ಹಾಗೂ ಜೆಡಿಎಸ್ ಅಭ್ಯರ್ಥಿಸಿ.ಎಸ್.ಪುಟ್ಟರಾಜು ಒಬ್ಬ ದಣಿವರಿಯದ ಜನ ನಾಯಕ, ನಮ್ಮ ಕ್ಷೇತ್ರಕ್ಕೆ ಇಂತಹ ದೂರದೃಷ್ಟಿಯುಳ್ಳ ಕ್ರಿಯಾಶೀಲ ನಾಯಕನ ಅಗತ್ಯವಿದೆ ಎಂದು ಜೆಡಿಎಸ್ ಹಿರಿಯ ಮುಖಂಡ ಎಲ್.ಡಿ.ಕೃಷ್ಣಪ್ಪ ಹೇಳಿದರು. ತಾಲೂಕಿನ ಲಕ್ಷ್ಮಿ ಸಾಗರ ಗ್ರಾಮದಲ್ಲಿ ಶುಕ್ರವಾರ ಸಂಜೆ ಏರ್ಪಡಿಸಿದ್ದ ಜೆಡಿಎಸ್ ಅಭ್ಯರ್ಥಿ ಶಾಸಕ ಸಿ.ಎಸ್.ಪುಟ್ಟರಾಜು ಅವರ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಈ ಹಿಂದೆ ನಾನು ಇವರ ವಿರುದ್ಧ ಚುನಾವಣೆಗೆ ಸ್ಪರ್ಧಿಸಿ ಸೋತಿದ್ದೆ. ಇವರ ಕಾರ್ಯ ವೈಖರಿ, ಉತ್ಸಾಹ, ಕ್ರಿಯಾಶೀಲತೆ, ಜನಪರ ಕಾಳಜಿ ಕಂಡು ನಾನು ಜೆಡಿಎಸ್ ಸೇರಿ ಪಕ್ಷ ಸಂಘಟನೆ ಮಾಡುತಿದ್ದೇನೆ. ನಮ್ಮ ಕ್ಷೇತ್ರದ ಅಭಿವೃದ್ಧಿಗೆ ಪುಟ್ಟರಾಜು ಗೆಲುವು ಅನಿವಾರ್ಯಗಿದೆ. ಗ್ರಾಮಸ್ಥರು ಯಾವುದೇ ಯೋಚನೆ ಮಾಡದೆ ಪುಟ್ಟರಾಜು ಅವರಿಗೆ ಹೆಚ್ಚಿನ ಲೀಡ್ ಕೊಡಬೇಕು. ಈ ಮೂಲಕ ನಮ್ಮ ಗ್ರಾಮದ ಅಭಿವೃದ್ಧಿಗೆ ನೆರವಾಗಬೇಕು ಎಂದರು. ಈ ವೇಳೆ ಜೆಡಿಎಸ್ ಅಭ್ಯರ್ಥಿ ಸಿ.ಎಸ್ಪುಟ್ಟರಾಜು ಮಾತನಾಡಿ, ದೇವೇಗೌಡರು ಈ ಭಾಗದ ಜಮೀನುಗಳಿಗೆ ನೀರುಣಿಸಲು ಹೇಮಾವತಿ ನಾಲೆ ನಿರ್ಮಾಣಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಕಾವೇರಿ ನದಿಯಿಂದ ಹದಿನಾಲ್ಕು ಮುಕ್ಕಾಲು ಟಿಎಂಸಿ ನೀರು ಹೆಚ್ಚುವರಿಯಾಗಿ ಬಳಸಿಕೊಳ್ಳಲು ಮತ್ತು ತಣ್ಣೂರು ಕೆರೆಯ ಅಭಿವೃದ್ಧಿಗೂ ದೇವೇಗೌಡರು ಕಾರಣರ್ತರು ಎಂದು ಮೇಲುಕೋಟೆ ಕ್ಷೇತ್ರದಲ್ಲಿ ದೇವೇಗೌಡರ ಕೊಡುಗೆಯನ್ನು ಜನರಿಗೆ ಮನವರಿಕೆ ಮಾಡಿಕೊಟ್ಟರು.
ಈ ಹಿಂದೆ ಲಕ್ಷ್ಮಿಸಾಗರ ಗ್ರಾಮದಲ್ಲಿ ನನಗೆ ಕೇವಲ 246 ಮತಗಳು ಬಿದ್ದಿದ್ದವು. ಅವುಗಳೇ ನನ್ನ ಗೆಲುವಿಗೆ ಶ್ರೀರಕ್ಷೆಯಾಗಿದ್ದನ್ನು ನಾನು ಮರೆತಿಲ್ಲ. ಕ್ಷೇತ್ರದ ಮಹಾಜನತೆಯ ಆಶೀರ್ವಾದದಿಂದ ನಾನು ಮೂರು ಬಾರಿ ಶಾಸಕನಾಗಿ, ಸಚಿವನಾಗಿ ರಾಜ್ಯದಲ್ಲಿಯೇ ಮೇಲುಕೋಟೆ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಅಭಿವೃದ್ದಿಪಡಿಸಿದ್ದೇನೆ ಎಂದರು. ಸಚಿವನಾಗಿ ಸಿಕ್ಕಂತಹ ಕಡಿಮೆ ಅವಕಾಶದಲ್ಲಿ ಕ್ಷೇತ್ರದಲ್ಲಿ 750 ಕೋಟಿಗೂ ಅಧಿಕ ವೆಚ್ಚದಲ್ಲಿ ನೀರಾವರಿ ಯೋಜನೆಗಳನ್ನು ಮಂಜೂರು ಮಾಡಿಸಿ ರೈತರ ನೆರವಿಗೆ ನಿಂತಿದ್ದೇನೆ. ಕೋವಿಡ್‍ನಂತಹ ಕಷ್ಟಕಾಲದಲ್ಲಿ ನಿಮ್ಮ ಜತೆ ಇದ್ದು ಸೇವೆ ಸಲ್ಲಿಸಿದ್ದೇನೆ. ರಸ್ತೆಗಳು, ಶಾಲಾ-ಕಾಲೇಜುಗಳ ಅಭಿವೃದ್ದಿ, ವಿದ್ಯುತ್ ಕ್ಷೇತ್ರದಲ್ಲಿ ಮಹತ್ತರವಾದ ಸಾಧನೆ ಮಾಡಿ ಕ್ಷೇತ್ರದಲ್ಲಿ ವಿದ್ಯುತ್ ಸಮಸ್ಯೆಯೇ ಎದುರಾಗದಂತೆ ಕೆಲಸ ಮಾಡಿದ್ದೇನೆ. ಕ್ಷೇತ್ರವನ್ನು ಇನ್ನಷ್ಟು ಅಭಿವೃದ್ದಿಪಡಿಸಬೇಕು, ಕ್ಷೇತ್ರದ ಜನರಿಗೆ ಯಾವುದೇ ಕುಂದುಕೊರತೆ ಎದುರಾಗದಂತೆ ಕ್ಷೇತ್ರವನ್ನು ಅಭಿವೃದ್ದಿಪಡಿಸುವ ಕಾರ್ಯಕ್ರಮಗಳನ್ನು ರೂಪಿಸಿಕೊಂಡಿದ್ದೇನೆ. ಹಾಗಾಗಿ ಕ್ಷೇತ್ರದ ಮಹಾಜನತೆ ನನ್ನ ಹೊರೆಹೊತ್ತ ಮಹಿಳೆಯ ಗುರುತಿಗೆ ಮತ ನೀಡುವ ಮೂಲಕ ಎಚ್.ಡಿ.ದೇವೇಗೌಡರು, ಎಚ್.ಡಿ.ಕುಮಾರಸ್ವಾಮಿ ಅವರ ಕೈ ಬಲಪಡಿಸಬೇಕು ಎಂದು ಮನವಿ ಮಾಡಿದರು.
ರಾಜ್ಯದಲ್ಲಿ ಜೆಡಿಎಸ್ ನೀಡಿರುವ ಪಂಚರತ್ನ ಯೋಜನೆಗಳು ಜಾರಿಯಾದರೆ ರಾಜ್ಯದ ಎಲ್ಲಾ ವರ್ಗÀದ ಜನರು ನೆಮ್ಮದಿಯಿಂದ ಜೀವನ ನಡೆಸಲು ಸಾಧ್ಯವಾಗುತ್ತಿದೆ. ಈ ಬಾರಿ ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗೋದು ಖಚಿತವಾಗಿದ್ದು ಪಂಚರತ್ನ ಯೋಜನೆಗಳು ಅನುμÁ್ಠನಗೊಳಲ್ಲಿವೆ. ಅದಕ್ಕಾಗಿ ಜನತೆ ಜೆಡಿಎಸ್ ಅಭ್ಯರ್ಥಿಯಾದ ನನ್ನನ್ನು ಬೆಂಬಲಿಸಿ ಸಹಕಾರ ನೀಡಬೇಕು ಎಂದು ತಿಳಿಸಿದರು. ಕ್ರೇನ್ ಮೂಲಕ ಹೂಮಳೆ : ಕಾರ್ಯನಕ್ರಮಕ್ಕೂ ಮುನ್ನ ಗ್ರಾಮದಲ್ಲಿ ಜೆಡಿಎಸ್ ಮುಖಂಡರು ಮತ್ತು ಗ್ರಾಮಸ್ಥರು ಅಭ್ಯರ್ಥಿ ಪುಟ್ಟರಾಜು ಅವರಿಗೆ ಕ್ರೇನ್ ಮೂಲಕ ಬೃಹತ್ ಹೂವಿನ ಹಾರ ಹಾಕಿ ಸ್ವಾಗತಿಸಿದರು. ಅಲ್ಲದೇ ಹೂವಿನ ಮಳೆ ಸುರಿಸಿ ತಮ್ಮ ನೆಚ್ಚಿನ ನಾಯಕನನ್ನು ಅದ್ದೂರಿಯಾಗಿ ಸ್ವಾಗತಿಸಿದರು. ಕಳಸ ಹೊತ್ತ ನೂರಾರು ಮಹಿಳೆಯರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಗ್ರಾಮದಲ್ಲಿ ಪುಟ್ಟರಾಜು ಅವರಿಗೆ ಭಾರಿ ಜನಬೆಂಬಲ ವ್ಯಕ್ತವಾಗಿ ಸಾವಿರಾರು ಗ್ರಾಮಸ್ಥರು ಸ್ವಯಂ ಪ್ರೇರಿತರಾಗಿ ಪುಟ್ಟರಾಜು ಜತೆ ಗ್ರಾಮದಲ್ಲಿ ಮೆರವಣಿಗೆ ನಡೆಸಿ ಚುನಾವಣಾ ಪ್ರಚಾರ ಮಾಡಿದ್ದು ವಿಶೇಷವಾಗಿತ್ತು. ಪ್ರಚಾರಕ್ಕಾಗಿ ಗ್ರಾಮಕ್ಕೆ ಆಗಮಿಸಿದ ಪುಟ್ಟರಾಜು ಅವರನ್ನು ಗ್ರಾಮಸ್ಥರು ಸಿಂಗರಿಸಿದ ಎತ್ತಿನಗಾಡಿಯಲ್ಲಿ ಮೆರವಣಿಗೆ ನಡೆಸಿದರು. ಈ ವೇಳೆ ಭಾರಿ ಸದ್ದಿನ ಪಟಾಕಿ ಸಿಡಿತ, ಅಪಾರ ಜನಸ್ತೋಮ ಕಂಡು ಎತ್ತುಗಳು ಬೆದರಿದವು ನಂತರ ಪುಟ್ಟರಾಜು ತೆರೆದ ವಾಹನದಲ್ಲಿ ರೋಡ್ ಶೋ ನಡೆಸಿದರು. ಈ ಸಂರ್ಭದಲ್ಲಿ ಜೆಡಿಎಸ್ ಅಧ್ಯಕ್ಷ ಎಸ್.ಎ.ಮಲ್ಲೇಶ್, ಲಕ್ಷ್ಮಿಸಾಗರ ಗ್ರಾಮದ ಮುಖಂಡರಾದ ಲಯನ್ ಎಲ್.ಕೆ.ಜಯರಾಮ್, ಎಲ್.ಡಿ.ಕೃಷ್ಣಪ್ಪ, ರಾಜಣ್ಣ ಸೇರಿದಂತೆ ಹಲವರು ಹಾಜರಿದ್ದರು.
73 ಸಾವಿರ ಮತ ಪಡೆದು ಓಡಿ ಹೋಗಲಿಲ್ಲ ನಾನೇನೂ 73 ಸಾವಿರ ಮತ ಹಾಕಿಸಿಕೊಂಡು ಓಡಿ ಹೋದವನಲ್ಲ ಎಂದು ಪರೋಕ್ಷವಾಗಿ ದರ್ಶನ್ ಪುಟ್ಟಣ್ಣಯ್ಯ ಅವರನ್ನು ಕುಟುಕಿದ ಪುಟ್ಟರಾಜು, ಎಲ್ಲಾ ಗ್ರಾಮಗಳಲ್ಲೂ ನನಗೆ ಶೇ,60 ಮತಗಳಿವೆ ಅದು ಕೆಲವು ಗ್ರಾಮಗಳಲ್ಲಿ ಶೇ,85 ರಷ್ಟಕ್ಕೂ ಹೋಗುತ್ತವೆ. ನಿಮ್ಮ ಯಾವ ಅಟವೂ ನಡೆಯಲ್ಲ. ಲಕ್ಷ್ಮಿಸಾಗರದಲ್ಲೂ ನನಗೆ ಶೇ,85 ರಷ್ಟು ಮತಗಳು ದೊರೆಯುತ್ತವೆ. ಸಿ.ಎಸ್.ಪುಟ್ಟರಾಜು ಜೆಡಿಎಸ್ ಅಭ್ಯರ್ಥಿ
0 ಕಾಮೆಂಟ್‌ಗಳು