ಪಾಂಡವಪುರ : ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಬಜರಂಗದಳ ನಿಷೇದ ಮಾಡುವ ಬಗ್ಗೆ ಹೇಳುವ ಮೂಲಕ ಮುಸ್ಲಿಂ ಒಲೈಕೆ ಮಾಡುತ್ತಿದ್ದು, ಹಿಂದೂ ವಿರೋಧಿ ನಡವಳಿಕೆ ಪ್ರದರ್ಶಿಸಿದೆ ಎಂದು ಮೈಶುಗರ್ ಮಾಜಿ ಅಧ್ಯಕ್ಷ ಜೆ.ಶಿವಲಿಂಗೇಗೌಡ ಹೇಳಿದರು. ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಬಜರಂಗದಳ ದೇಶಭಕ್ತರ ಸಂಘಟನೆ. ಬಿಜೆಪಿ ಬೆಂಬಲಿತ ಸಂಘ ಪರಿವಾರದ ಒಂದು ಭಾಗವಾಗಿದೆ. ಲವ್ ಜಿಹಾದ್ ಮುಂತಾದವುಗಳನ್ನು ಅದು ವಿರೋದಿಸುತ್ತದೆ. ಇಂತಹ ಸಂಘಟನೆಯನ್ನು ನಿಷೇಧ ಮಾಡಲು ಕಾಂಗ್ರೆಸ್ ಪಕ್ಷಕ್ಕೆ ತಾಕತ್ತು, ದಂ ಇದೆಯಾ? ಎಂದು ಆಕ್ರೋಶ ವ್ಯಕ್ತಪಡಿಸಿದರು. ಮೇಲುಕೋಟೆ ಕ್ಷೇತ್ರದ ಬಿಜೆಪಿ ಉಸ್ತುವಾರಿ ಸುನಿಲ್ ಯಾದವ್ ಮಾತನಾಡಿ, ಕಾಂಗ್ರೆಸ್ ಪಕ್ಷ ಅಭಿವೃದ್ಧಿ ಮಾಡುವ ಯೋಜನೆಗಳ ಮೂಲಕ ಮತ ಪಡೆಯಬೇಕು. ಬದಲಾಗಿ ಧರ್ಮವನ್ನು ಒಡೆಯುವ ಮೂಲಕ ಜನರನ್ನು ಸೆಳೆಯಲು ಯತ್ನಿಸುತ್ತಿದೆ. ಜತೆಗೆ ಕ್ರೈಸ್ತ ಮತ್ತು ಮುಸಲ್ಮಾನರನ್ನು ಓಲೈಕೆ ಮಾಡುತ್ತಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಹೆಚ್.ಎನ್.ಮಂಜುನಾಥ್, ಅಶೋಕ್, ಕಾಂತರಾಜು, ರೂಪ, ಶ್ರೀನಿವಾಸನಾಯಕ, ಜೋಗೀಗೌಡ, ರವೀಂದ್ರ, ಚಿಕ್ಕಮರಳಿ ನವೀನ ಮುಂತಾದವರು ಇದ್ದರು.
0 ಕಾಮೆಂಟ್‌ಗಳು