ವಿವಿಧ ಗ್ರಾಮಗಳಲ್ಲಿ ಸಿ.ಎಸ್.ಪುಟ್ಟರಾಜು ಬಿರುಸಿನ ಪ್ರಚಾರ : ಅದ್ದೂರಿ ಸ್ವಾಗತ : ಭಾರಿ ಜನ ಬೆಂಬಲ

ಪಾಂಡವಪುರ: ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸಿ.ಎಸ್.ಪುಟ್ಟರಾಜು ಅವರು ಕಸಬಾ ಹಾಗೂ ಚಿನಕುರಳಿ ಹೋಬಳಿಯ ಹಲವು ಗ್ರಾಮಗಳಲ್ಲಿ ಬಿರುಸಿನ ಪ್ರಚಾರ ನಡೆಸಿ ಮತಯಾಚಿಸಿದರು.
ಕೆ.ಬೆಟ್ಟಹಳ್ಳಿ, ಹರವು, ಅರಳಕುಪ್ಪೆ, ಕಟ್ಟೇರಿ, ಬನ್ನಂಗಾಡಿ, ಡಿಂಕಾ, ಗುಮ್ಮನಹಳ್ಳಿ, ಹೊನಗಾನಹಳ್ಳಿ ಹಾಗೂ ಕೆನ್ನಾಳು ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಹಳ್ಳಿಗಳಲ್ಲಿ ಬೆಳಿಗ್ಗೆ 7 ಗಂಟೆಯಿಂದ ರಾತ್ರಿ 8 ಗಂಟೆಯವರೆಗೂ ರೋಡ್ ಶೋ ಮೂಲಕ ಮತಯಾಚಿಸಿದರು.
ಜೆಡಿಎಸ್ ಅಭ್ಯರ್ಥಿ ಸಿ.ಎಸ್.ಪುಟ್ಟರಾಜು ಅವರು ಹೋದಕಡೆ ಎಲ್ಲಾ ಕಾರ್ಯಕರ್ತರು, ಮುಖಂಡರು ಭವ್ಯವಾದ ಸ್ವಾಗತ ಕೋರಿ ತಮ್ಮ ಬೆಂಬಲ ವ್ಯಕ್ತಪಡಿಸಿದರಲ್ಲದೇ, ಬೃಹತ್ ಹೂಮಾಲೆಗಳು, ಪುಷ್ಪಾರ್ಚನೆ ಮಾಡಿ ತಮ್ಮ ನೆಚ್ಚಿನ ನಾಯಕನನ್ನು ಸ್ವಾಗತಿಸಿದರು.
ಮಹಿಳೆಯರೂ ಸಹ ಆರತಿ ಬೆಳಗಿ ಪುಟ್ಟರಾಜು ಅವರನ್ನು ಸ್ವಾಗತಿಸಿದರು. ಎಲ್ಲಾ ಗ್ರಾಮಗಳಲ್ಲೂ ಸಿ.ಎಸ್. ಪುಟ್ಟರಾಜು ಅವರಿಗೆ ಅಭೂತಪೂರ್ವವಾದ ಬೆಂಬಲ ದೊರೆಯಿತು. ಕೆಲವು ಗ್ರಾಮಗಳಲ್ಲಿ ಬೈಕ್ರ್ಯಾಲಿ ನಡೆಸಿದರು. ಸ್ವತಃ ಅಭ್ಯರ್ಥಿ ಸಿ.ಎಸ್.ಪುಟ್ಟರಾಜು ಅವರು ಕಾರ್ಯಕರ್ತರ ಜತೆಯಲ್ಲಿ ಬೈಕ್ ಓಡಿಸುವ ಮೂಲಕ ಮತಯಾಚಿಸಿ ಎಲ್ಲರ ಗಮನಸೆಳೆದರು. ಕಟ್ಟೇರಿ ಗ್ರಾಮದಲ್ಲಿ ಜೆಡಿಎಸ್ ಮುಖಂಡ ಕಟ್ಟೇರಿ ಪ್ರಸನ್ನಕುಮಾರ್ ನೇತೃತ್ವದಲ್ಲಿ ಶಾಸಕ ಸಿ.ಎಸ್.ಪುಟ್ಟರಾಜು ಅವರಿಗೆ ಅದ್ದೂರಿ ಸ್ವಾಗತ ನೀಡಲಾಯಿತು. ಮಂಡಿಬೆಟ್ಟಹಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ನೂರಾರು ಕಾರ್ಯಕರ್ತರು ರೈತಸಂಘ ತೊರೆದು ಜೆಡಿಎಸ್ ಸೇರ್ಪಡೆಗೊಂಡರು.

ಶಾಸಕ ಸಿ.ಎಸ್.ಪುಟ್ಟರಾಜು ಮಾತನಾಡಿ, ಕ್ಷೇತ್ರದ ಮಹಾಜನತೆಯ ಆಶೀರ್ವಾದದಿಂದ ಮೂರುಬಾರಿ ಶಾಸಕ, ಸಚಿವನಾಗಿ ರಾಜ್ಯದಲ್ಲಿಯೇ ಮೇಲುಕೋಟೆ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಅಭಿವೃದ್ದಿಪಡಿಸಿದ್ದೇನೆ. ಸಿಕ್ಕಂತಹ ಅವಕಾಶದಲ್ಲಿ ಕ್ಷೇತ್ರದಲ್ಲಿ 750 ಕೋಟಿಗೂ ಅಧಿಕ ವೆಚ್ಚದಲ್ಲಿ ನೀರಾವರಿ ಯೋಜನೆಗಳನ್ನು ಮಂಜೂರು ಮಾಡಿಸಿ ರೈತರ ನೆರವಿಗೆ ನಿಂತಿದ್ದೇನೆ. ಕೋವಿಡ್ನಂತಹ ಕಷ್ಟಕಾಲದಲ್ಲಿ ನಿಮ್ಮ ಜತೆ ಇದ್ದು ಸೇವೆ ಸಲ್ಲಿಸಿದ್ದೇನೆ. ರಸ್ತೆಗಳು, ಶಾಲಾ-ಕಾಲೇಜುಗಳ ಅಭಿವೃದ್ದಿ, ವಿದ್ಯುತ್ ಕ್ಷೇತ್ರದಲ್ಲಿ ಮಹತ್ತರವಾದ ಸಾಧನೆ ಮಾಡಿ ಕ್ಷೇತ್ರದಲ್ಲಿ ವಿದ್ಯುತ್ ಸಮಸ್ಯೆಯೇ ಎದುರಾಗದಂತೆ ಕೆಲಸ ಮಾಡಿದ್ದೇನೆ. ಕ್ಷೇತ್ರವನ್ನು ಇನ್ನಷ್ಟು ಅಭಿವೃದ್ದಿಪಡಿಸಬೇಕು, ಕ್ಷೇತ್ರದ ಜನರಿಗೆ ಯಾವುದೇ ಕುಂದುಕೊರತೆ ಎದುರಾಗದಂತೆ ಕ್ಷೇತ್ರವನ್ನು ಅಭಿವೃದ್ದಿಪಡಿಸುವ ಕಾರ್ಯಕ್ರಮಗಳನ್ನು ರೂಪಿಸಿಕೊಂಡಿದ್ದೇನೆ. ಹಾಗಾಗಿ ಕ್ಷೇತ್ರದ ಮಹಾಜನತೆ ನನ್ನ ಹೊರೆಹೊತ್ತ ಮಹಿಳೆಯ ಗುರುತಿಗೆ ಮತ ನೀಡುವ ಮೂಲಕ ಎಚ್.ಡಿ.ದೇವೇಗೌಡರು, ಎಚ್.ಡಿ.ಕುಮಾರಸ್ವಾಮಿ ಅವರ ಕೈ ಬಲಪಡಿಸಬೇಕು ಎಂದು ಮನವಿ ಮಾಡಿದರು.
ರಾಜ್ಯದಲ್ಲಿ ಜೆಡಿಎಸ್ ನೀಡಿರುವ ಪಂಚರತ್ನ ಯೋಜನೆಗಳು ಜಾರಿಯಾದರೆ ರಾಜ್ಯದ ಎಲ್ಲಾ ವರ್ಗದ ಜನರು ನೆಮ್ಮದಿಯಿಂದ ಜೀವನ ನಡೆಸಲು ಸಾಧ್ಯವಾಗುತ್ತಿದೆ. ಬಾರಿ ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗೋದು ಖಚಿತವಾಗಿದ್ದು ಪಂಚರತ್ನ ಯೋಜನೆಗಳು ಅನುಷ್ಠಾನಗೊಳಲ್ಲಿವೆ. ಅದಕ್ಕಾಗಿ ಜನತೆ ಜೆಡಿಎಸ್ ಅಭ್ಯರ್ಥಿಯಾದ ನನ್ನನ್ನು ಬೆಂಬಲಿಸಿ ಸಹಕಾರ ನೀಡಬೇಕು ಎಂದು ತಿಳಿಸಿದರು.
ಸಂದರ್ಭದಲ್ಲಿ ಜೆಡಿಎಸ್ ಅಧ್ಯಕ್ಷ ಎಸ್..ಮಲ್ಲೇಶ್, ವೈರಮುಡಿಗೌಡ, ನಂಜೇಗೌಡ, ಗುರುಸ್ವಾಮಿ, ಮಧುಸೂದನ್, ಲಯನ್‌ ಎಲ್.ಕೆ.ಜಯರಾಮು, ಕಟ್ಟೇರಿ ಪ್ರಸನ್ನಕುಮಾರ್, ಗವಿಗೌಡ, ವಿ.ಎಸ್.ನಿಂಗೇಗೌಡ, ದ್ಯಾವಪ್ಪ, ಜಯಶಂಕರಪ್ಪ, ಅಲ್ಪಳ್ಳಿ ಗೋವಿಂದಯ್ಯ, ಎಂ.ಎಸ್.ಮಂಜುನಾಥ್, ಇಂದ್ರಕುಮಾರ್, ಕೆ.ಎಸ್.ಸತೀಶ್, ವಿಕ್ರಾಂತ್ನಾಗೇಗೌಡ ಸೇರಿದಂತೆ ಹಲವರು ಹಾಜರಿದ್ದರು
.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು