ಪಾಂಡವಪುರ : ಪಟ್ಟಣದ 4 ಮತ್ತು 5ನೇ ವಾರ್ಡಿನ ಮುವತ್ತಕ್ಕೂ ಹೆಚ್ಚು ಮುಸ್ಲಿಂ ಯುವಕರು ಕಾಂಗ್ರೆಸ್ ಮತ್ತು ರೈತಸಂಘವನ್ನು ತೊರೆದು ಜೆಡಿಎಸ್ ಮುಖಂಡರಾದ ಶುಹೇಬ್, ಸಾದಿಖ್ ಮತ್ತು ಸಮಿಉಲ್ಲಾ ನೇತೃತ್ವದಲ್ಲಿ ಯುವ ಮುಖಂಡ ಸಿ.ಪಿ.ಶಿವರಾಜು ಸಮ್ಮುಖದಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು. ಪಟ್ಟಣದ ಶಾಸಕರ ನಿವಾಸದಲ್ಲಿ ಈ ಸೇರ್ಪಡೆ ಕಾರ್ಯಕ್ರಮ ನಡೆಯಿತು. ಬಳಿಕ ಸಿಪಿ.ಶಿವರಾಜು ಅವರು ಮಾತನಾಡಿ, ಮುಸ್ಲಿಂ ಯುವಕರು ಜೆಡಿಎಸ್ ಪಕ್ಷಕ್ಕೆ ಬೆಂಬಲ ನೀಡುತ್ತಿರುವುದು ಸ್ವಾಗತಾರ್ಹ, ಶಾಸಕರಾದ ಸಿ.ಎಸ್.ಪುಟ್ಟರಾಜು ಮೇಲುಕೋಟೆ ಕ್ಷೇತ್ರದಲ್ಲಿ ಯಾವುದೇ ಕೋಮು ಸಂಘರ್ಷಕ್ಕೆ ಅವಕಾಶ ನೀಡಿಲ್ಲ. ಇಲ್ಲಿ ಸೌಹಾರ್ದತೆ ಇರುವ ಕಾರಣ ಯುವಕರು ನೆಮ್ಮದಿಯಿಂದ ಇದ್ದಾರೆ. ಪುಟ್ಟರಾಜು ಅವರು ಮತ್ತೊಮ್ಮೆ ಶಾಸಕರಾಗಿ ಆಯ್ಕೆಯಾದಲ್ಲಿ ಮುಸ್ಲಿಂ ಯುವಕರ ಸ್ವಯಂ ಉದ್ಯೋಗ ಮತ್ತು ಸಬಲೀಕರಣಕ್ಕೆ ಹೆಚ್ಚು ಒತ್ತು ನೀಡಲಿದ್ದಾರೆ ಎಂದರು. ಈ ಸಂದರ್ಭದಲ್ಲಿ ವಸೀಂ, ಸದ್ದಾಂ, ಅತೀಖ್, ರಿಯಾಜ್, ಶಬ್ಬೀರ್, ಇಲಿಯಾಸ್, ತನ್ವೀರ್, ಆದಿಲ್, ಮೊಹಮ್ಮದ್ ನವಾಜ್, ಶಕೀಬ್, ಸಾದಿಖ್, ಸೈಫ್, ಸುಹೇಲ್, ತನ್ನು, ಏಜಾಸ್, ಅಸ್ಲಂ, ಮುನವರ್, ಫರ್ಹಾನ್, ಸಿದ್ದಿಖ್, ಟಿಪ್ಪು, ಕಟ್ಟೇರಿ ಅನಿಲ್ ಕುಮಾರ್, ರಾಮ್‍ಜಿ ಮುಂತಾದವರು ಇದ್ದರು.
0 ಕಾಮೆಂಟ್‌ಗಳು