ದೇವನೂರು ಮಹಾದೇವ ಬಗ್ಗೆ ಎಚ್ಚರಿಕೆಯಿಂದ ಮಾತನಾಡಿ: ಕೆ.ಬಿ.ರಾಮು
ಮೇ 04, 2023
ಪಾಂಡವಪುರ : ದಲಿತರ ರಕ್ಷಣೆಗಾಗಿ 70ರ ದಶಕದಿಂದಲೂ ಹೋರಾಟ ನಡೆಸುತ್ತಿದ್ದು, ದಲಿತ ಸಂಘರ್ಷ ಸಮಿತಿ ಹುಟ್ಟಿಗೆ ಕಾರಣಕರ್ತರಾದ ದೇವನೂರು ಮಹಾದೇವ ಬಗ್ಗೆ ಎಚ್ಚರಿಕೆಯಿಂದ ಮಾತನಾಡಬೇಕು ಎಂದು ಕಾಂಗ್ರೆಸ್ ಮುಖಂಡ ಕೆ.ಬಿ.ರಾಮು ಹೇಳಿದರು. ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಚುನಾವಣೆಗಳು ಬರುತ್ತವೇ ಹೋಗುತ್ತವೆ. ಕೇವಲ ಒಂದು ಪಕ್ಷದ ಓಲೈಕೆಗಾಗಿ ದೇವನೂರು ಕುರಿತು ನಿಂದನೆ ಮಾಡುವುದು ಅವರ ಬಗ್ಗೆ ಹಗುರವಾಗಿ ಮಾತನಾಡುವುದು ತಪ್ಪು. ಈ ಬಗ್ಗೆ ಜೆಡಿಎಸ್ ಪಕ್ಷದಲ್ಲಿರುವ ದಲಿತ ಮುಖಂಡರು ಎಚ್ಚರಿಕೆ ವಹಿಸಬೇಕು ಎಂದರು. ಕ್ಷೇತ್ರದಲ್ಲಿ ದಲಿತರ ಕೇರಿಗಳು ಅಭಿವೃದ್ಧಿಯಾಗಿಲ್ಲ. ಅಂಬೇಡ್ಕರ್ ಭವನಗಳು ಅಪೂರ್ಣವಾಗಿವೆ. ದಲಿತರ ಆರ್ಥಿಕ ಸ್ಥಿತಿ ಹೀನಾಯವಾಗಿದೆ. ಯಾವ ದಲಿತ ಮುಖಂಡರನ್ನೂ ಶಾಸಕರು ಬೆಳೆಸಿಲ್ಲ. ಈ ನಿಟ್ಟಿನಲ್ಲಿ ಕೇವಲ ಓಲೈಕೆಗಾಗಿ ದೇವನೂರು ವಿರುದ್ಧ ಮಾಡುವುದನ್ನು ಬಿಡಬೇಕು ಎಂದು ಹೇಳಿದರು. ರೈತಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ ಮಾತನಾಡಿ, ದೇವನೂರು ಮಹಾದೇವ ಅವರು ರಾಜ್ಯದ ನಾಯಕರು. ದಲಿತರ ರಕ್ಷಣೆಗಾಗಿ ನಿರಂತರವಾಗಿ ಹೋರಾಟ ನಡೆಸುತ್ತಿದ್ದಾರೆ. ಹಲವಾರು ಪ್ರಶಸ್ತಿ ಪುರಸ್ಕಾರಗಳನ್ನು ತಿರಸ್ಕಾರ ಮಾಡಿದ್ದಾರೆ. ಅವರ ಬಗ್ಗೆ ಯಾರೂ ಕೂಡ ಹಗುರವಾಗಿ ಮಾತನಾಡಬಾರದು ಎಂದರು. ಸುದ್ದಿಗೋಷ್ಠಿಯಲ್ಲಿ ರೈತಸಂಘದ ವರಿಷ್ಠ ನಾಯಕಿ ಸುನೀತಾ ಪುಟ್ಟಣ್ಣಯ್ಯ, ದಲಿತ ಮುಖಂಡರಾದ ವಕೀಲ ಜಿ.ಬಿ.ಸುರೇಶ್, ಸಂಪಳ್ಳಿ ಬಸವರಾಜು, ಅಂತನಹಳ್ಳಿ ಬಸವರಾಜು, ಶ್ರೀಧರ್, ಸಿದ್ದರಾಜು, ದೇವರಾಜು, ಹನುಮಯ್ಯ ಮುಂತಾದವರು ಇದ್ದರು.
0 ಕಾಮೆಂಟ್‌ಗಳು