ಕಟ್ಟೇರಿಯಲ್ಲಿ ಸಿಎಸ್ ಪುಟ್ಟರಾಜುಗೆ ಜೆಡಿಎಸ್ ಯುವ ಮುಖಂಡರಿಂದ ಅದ್ದೂರಿ ಸನ್ಮಾನ: ಬೆಲ್ಲದ ಆರತಿ ಸ್ವಾಗತ

ಪಾಂಡವಪುರ : ತಾಲೂಕಿನ ಕಟ್ಟೇರಿ ಗ್ರಾಮದಲ್ಲಿ ಜೆಡಿಎಸ್‌ ಯುವ ಮುಖಂಡ ವಿನಾಯಕ ರೆಸ್ಟೋರೆಂಟ್‌ ಮಾಲಿಕ ಕೆ.ಅನಿಲ್‌ ಕುಮಾರ್‌ ಮತ್ತು ಸಂಗಡಿಗರಿಂದ  ಜೆಡಿಎಸ್‌ ಅಭ್ಯರ್ಥಿ ಸಿ.ಎಸ್‌.ಪುಟ್ಟರಾಜು ಅವರಿಗೆ ಭರ್ಜರಿ ಸನ್ಮಾನ ಮಾಡಲಾಯಿತು.
ಚುನಾವಣಾ ಪ್ರಚಾರಕ್ಕೆ ಬೈಕ್‌ ರ್ಯಾಲಿ ಮತ್ತು ತೆರೆದ ವಾಹನದ ಮೂಲಕ ರೋಡ್‌ ಶೋ ನಡೆಸಿದ ಪುಟ್ಟರಾಜು ಅವರಿಗೆ ಗ್ರಾಮದ ಮಹಿಳೆಯರು ಬೆಲ್ಲದ ಆರತಿ ಎತ್ತಿ ಆತ್ಮೀಯವಾಗಿ ಸ್ವಾಗತ ಕೋರಿದರು.
ಬಳಿಕ ಅನಿಲ್‌ ಕುಮಾರ್‌ ತಮ್ಮ ಗೆಳೆಯರ ಜತೆಗೂಡಿ ಶಾಸಕ ಹಾಗೂ ಜೆಡಿಎಸ್‌ ಅಭ್ಯರ್ಥಿ ಸಿ.ಎಸ್‌.ಪುಟ್ಟರಾಜು ಅವರನ್ನು ಆತ್ಮೀಯವಾಗಿ ಸನ್ಮಾನಿಸಿದರು. ಈ ವೇಳೆ ಭಾರಿ ಪಟಾಕಿ ಸಿಡಿಸಿ ತಮ್ಮ ನೆಚ್ಚಿನ ನಾಯಕನನ್ನು ಜೆಡಿಎಸ್‌ ಕಾರ್ಯಕರ್ತರು ಗೌರವಿಸಿದರು.
ಈ ಸಂದರ್ಭದಲ್ಲಿ ಶಾಸಕ ಹಾಗೂ ಅಭ್ಯರ್ಥಿ ಸಿ.ಎಸ್‌.ಪುಟ್ಟರಾಜು ಮಾತನಾಡಿ, ತಾಲೂಕಿನ ನೀರಾವರಿ ವಂಚಿತ ಪ್ರದೇಶಗಳು ಮತ್ತು ಮಳೆಯಾಶ್ರಿತ ಗ್ರಾಮಗಳಿಗೆ ಏತ ನೀರಾವರಿ ಯೋಜನೆ ಮೂಲಕ ನೀರು ಹರಿಸಲಾಗಿದೆ. ಇದರಿಂದ ರೈತರು ಆರ್ಥಿಕವಾಗಿ ಸದೃಢರಾಗಲು ಸಹಾಯಕವಾಗಿದೆ. ಅಲ್ಲದೇ 12 ವಿದ್ಯುತ್‌ ಸಬ್‌ ಸ್ಟೇಷನ್‌ಗಳನ್ನು ನಿರ್ಮಿಸಿ ರೈತರಿಗೆ ವಿದ್ಯುತ್‌ ಕೊರತೆ ಆಗದಂತೆ ಮುತುವರ್ಜಿ ವಹಿಸಲಾಗಿದೆ. ಮತದಾರರು ಈ ಬಾರಿಯೂ ನನಗೆ ಆಶೀರ್ವಾದ ಮಾಡಿದರೆ ಉಳಿದಿರುವ ಎಲ್ಲಾ ಅಭಿವೃದ್ಧಿ ಕಾರ್ಯಗಳನ್ನು ತ್ವರಿತವಾಗಿ ಪೂರ್ಣಗೊಳಿಸಲಾಗುವುದು ಎಂದರು.

ಜೆಡಿಎಸ್‌ ಯುವ ಮುಖಂಡ ಅನಿಲ್‌ ಕುಮಾರ್‌ ಮಾತನಾಡಿ, ಕ್ಷೇತ್ರದಲ್ಲಿ ಅಭಿವೃದ್ಧಿಯ ಹೊಳೆಯನ್ನೆ ಹರಿಸಿರುವ ಶಾಸಕ ಪುಟ್ಟರಾಜು ನಮ್ಮ ಕ್ಷೇತ್ರದ ನಿತ್ಯ ಶಾಸಕರು. ಕ್ಷೇತ್ರದಲ್ಲಿ ಇವರ ಕೊಡುಗೆಗಳು ಅಪಾರವಾಗಿವೆ. ಅವರು ಮತ ಯಾಚನೆ ಮಾಡಬೇಕಿಲ್ಲ, ನಾವೇ ಖುದ್ದಾಗಿ ಅವರನ್ನು ಗೆಲ್ಲಿಸುವ ಮೂಲಕ ಮತ್ತೆ ವಿಧಾನಸಭೆಗೆ ಕಳಿಸುತ್ತೇವೆ ಇಂತಹ ಕ್ರಿಯಾಶೀಲ ಶಾಸಕರು ನಮ್ಮ ಕ್ಷೇತ್ರದಲ್ಲಿರುವುದು ನಮ್ಮ ಪುಣ್ಯ ಎಂದರು.
ಈ ಸಂದರ್ಭದಲ್ಲಿ ಜೆಡಿಎಸ್‌ ಮುಖಂಡರಾದ ಸಮಿ ಉಲ್ಲಾ, ರಾಮ್ ಜಿ, ಅನಂತು, ಕುಮಾರ, ಸಚಿನ್, ನಿಖಿಲ್,
ಪವನ, ವರದನ್, ಕುಮಾರ, ರವಿ, ಅಪ್ಪು, ರಂಜನ್ ಕೆ.ಬಿ.,
ಮೋಹನ್, ಕೃಷ್ಣ, ಮದನ್, ಲೋಹಿತ್,‌ಅನಂತ್, ತಮ್ಮಣ್ಣ ಮುಂತಾದ ಜೆಡಿಎಸ್ ಕಾರ್ಯಕರ್ತರು
ಹಾಗೂ ಕಟ್ಟೇರಿ ಗ್ರಾಮಸ್ಥರು ಇದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು