ಚಾಲಕನ ನಿಯಂತ್ರಣ ತಪ್ಪಿ ಲಾರಿ ಅಪಘಾತ ಚಾಲಕನಿಗೆ ಗಂಭೀರ ಗಾಯ

 

ಶಾರುಕ್ ಖಾನ್ ಹನೂರು 
ಹನೂರು : ತಾಲ್ಲೂಕಿನ ಗಡಿ ಭಾಗವಾದ ನಾಲ್ ರೋಡ್ ಸಮೀಪದ ಗರಿಕೆಕಂಡಿ ಚೆಕ್ ಪೋಸ್ಟ್  ಮುಂದೆ ತಮಿಳುನಾಡಿಗೆ ಜೋಳ ತುಂಬಿಕೊಂಡು   ಹೋಗುತ್ತಿದ್ದ ಕರ್ನಾಟಕದ ಲಾರಿಯೊಂದು  ಚಾಲಕನ ನಿಯಂತ್ರಣ ತಪ್ಪಿ ಅಪಘಾತವಾಗಿದ್ದು, ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ.
ಅಪಘಾತದಲ್ಲಿ ಲಾರಿಯೂ ಸಂಪೂರ್ಣ ಜಖಂ ಗೊಂಡಿದ್ದು, ಜೋಳದ ಮೂಟೆಗಳು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು.
ಗಾಯಾಳು ಚಾಲಕನನ್ನು ತಮಿಳುನಾಡಿನ ಅಂದ್ಯೂರ್ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ತಿಳಿದುಬಂದಿದೆ.
ಈ ಸಂಬಂಧ ತಮಿಳುನಾಡಿನ ಬರಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು