ತಿ.ನರಸೀಪುರ: ಕಾಲೇಜಿನ ವಾರ್ಷಿಕೋತ್ಸವ ಸಮಾರಂಭದಲ್ಲಿ
ಭಾಗವಹಿಸಿದ್ದ ವಿದ್ಯಾರ್ಥಿನಿಯೊಬ್ಬಳು ಡ್ಯಾನ್ಸ್ ಮಾಡುವಾಗ ಇದ್ದಕ್ಕಿದ್ದಂತೆ ಕುಸಿದು ಬಿದ್ದು,
ಪ್ರಜ್ಞೆ ತಪ್ಪಿ ಸಾವನ್ನಪ್ಪಿರುವ ದಾರುಣ ಘಟನೆ ಇಲ್ಲಿನ ವಿದ್ಯೋದಯಕಾಲೇಜಿನಲ್ಲಿ
ನಡೆದಿದೆ. ದ್ವಿತೀಯಪಿಯುಸಿವ್ಯಾಸಂಗ ಮಾಡುತ್ತಿದ್ದ ನಮಿತಾ (೧೬) ಮೃತವಿದ್ಯಾರ್ಥಿನಿ. ಪಟ್ಟಣದವಿದ್ಯೋದಯಕಾಲೇಜಿನಲ್ಲಿ ಗುರುವಾರ ಸಂಜೆ ನಡೆಯುತ್ತಿದ್ದ
ಕಾಲೇಜುವಾರ್ಷಿಕೋತ್ಸವ ಸಮಾರಂಭದಲ್ಲಿ
ಭಾಗವಹಿಸಿದ್ದ ನಮಿತಾಡ್ಯಾನ್ಸ್
ಮಾಡುವಾಗ ಕುಸಿದು ಬಿದ್ದಳು. ಈ ವೇಳೆ ಅವಳಿಗೆ ಪ್ರಜ್ಞೆ ತಪ್ಪಿತ್ತು. ಕೂಡಲೇ ಕಾಲೇಜು ಸಿಬ್ಬಂದಿಗಳು
ನಮಿತಾಳನ್ನು ಪಟ್ಟಣದ ಸಾರ್ವಜನಿಕಆಸ್ಪತ್ರೆಗೆಚಿಕಿತ್ಸೆಗೆಕರೆದೊಯ್ಯುವ ವೇಳೆ ಮಾರ್ಗಮದ್ಯೆ ಮೃತಪಟ್ಟಳು ಎನ್ನಲಾಗಿದೆ.
0 ಕಾಮೆಂಟ್‌ಗಳು