ಗುಜರಾತ್‌ ಪ್ರವಾಸಿಗರ ಬಸ್‌ ಮಹದೇಶ್ವರ ಬೆಟ್ಟದ ಬಳಿ ಅಪಘಾತ

ಶಾರುಕ್‌ ಖಾನ್‌, ಹನೂರು

ಹನೂರು: ಗುಜರಾತ್ ರಾಜ್ಯದ ಪ್ರವಾಸಿಗರ ಬಸ್‌ ಮಹದೇಶ್ವರ ಬೆಟ್ಟದ ಬಳಿ ಅಪಘಾತವಾಗಿ ಸುಮಾರು ೧೫ ಜನರು ಗಾಯಗೊಂಡಿರುವ ಘಟನೆ ಬುಧವಾರ ಬೆಳಿಗ್ಗೆ ನಡೆದಿದೆ.
ಪ್ರವಾಸಿಗರ ಬಸ್‌ ತಮಿಳುನಾಡಿನಿಂದ ಪಾಲಾರ್ ಮಾರ್ಗವಾಗಿ ಮಲೆ ಮಹದೇಶ್ವರ ಬೆಟ್ಟಕ್ಕೆ ಬರುತ್ತಿರುವಾಗ ಬೆಳಿಗ್ಗೆ ಸುಮಾರು 8 ಗಂಟೆಗೆ ಪಾಲಾರ್ ನಿಂದ ಮಲೆ ಮಹದೇಶ್ವರ ಬೆಟ್ಟದ ಎರಡನೇ ತಿರುವಿನಲ್ಲಿ ಬರುತ್ತಿರುವಾಗ ಚಾಲಕನ ನಿಯಂತ್ರಣ ತಪ್ಪಿ ಹಿಂದಕ್ಕೆ ಜಾರಿದ ಕಾರಣ ಹಳ್ಳಕ್ಕೆ ಬಸ್‌ ಉರುಳಿದೆ. ಘಟನೆಯಲ್ಲಿ 15 ಜನರಿಗೆ ಗಾಯಗಳಾಗಿದ್ದು, ಕೂಡಲೇ ಆಂಬುಲೆನ್ಸ್‌ ಮೂಲಕ ಗಾಯಾಳಯಗಳನ್ನು ಮಲೆ ಮಹದೇಶ್ವರ ಬೆಟ್ಟದ ಪ್ರಾಥಮಿಕ ಆರೋಗ್ಯ
ಕೇಂದ್ರಕ್ಕೆ ಕರೆ ತಂದು ಚಿಕಿತ್ಸೆ ನೀಡಲಾಯಿತು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು