ಕಣ್ಣೂರು ಕುವರ ನಾಗರಾಜು ಗೆ ರಾಷ್ಟ್ರಪತಿ ಪದಕ : ಗ್ರಾಮಸ್ಥರ ಸಂತಸ
ಜನವರಿ 28, 2023
ಶಾರುಕ್ ಖಾನ್,
ಹನೂರು
ಹನೂರು:
ತಾಲೂಕಿನ ಕಣ್ಣೂರು ಗ್ರಾಮದ ನಾಗರಾಜು ಎಸ್ ರವರು 2023 ನೇ
ಸಾಲಿನ ಗಣರಾಜ್ಯೋತ್ಸವದ ರಾಷ್ಟ್ರಪತಿಯವರ ಶ್ಲಾಘನೀಯ ಸೇವಾ
ಪದಕ ಪಡೆದು ತಾಲೂಕಿಗೆ ಕೀರ್ತಿ ತಂದಿದ್ದಾರೆ.
ತಾಲೂಕಿನ
ಕಣ್ಣೂರು ಗ್ರಾಮದ ದಿ. ಸಿದ್ದೇಗೌಡ ಮತ್ತು
ಪುಟ್ಟ ವೀರಮ್ಮ ಅವರ ಕಿರಿಯ ಪುತ್ರ
ರಾಗಿರುವ ನಾಗರಾಜ್ ಅವರು ಪ್ರಾಥಮಿಕ ಶಿಕ್ಷಣವನ್ನು
ಕಣ್ಣೂರು ಗ್ರಾಮದಲ್ಲಿ ಪೂರೈಸಿ ಪ್ರೌಢ ಶಿಕ್ಷಣವನ್ನು ಕೊಳ್ಳೇಗಾಲದ ಎಮ್ ಸಿ ಕೆ
ಸಿ ಪ್ರೌಢಶಾಲೆಯಲ್ಲಿ ಪೂರೈಸಿ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪದವಿ ಮತ್ತು ಸ್ನಾತಕೋತ್ತರ
ಪದವಿ ಪಡೆದಿದ್ದಾರೆ.
2001 ನೇ
ಸಾಲಿನಲ್ಲಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಆಗಿ
ಇಲಾಖೆಗೆ ನೇಮಕಗೊಂಡು ಪಾವಗಡ ತಾಲ್ಲೂಕಿನ ವೈ.ಎನ್. ಹೊಸಕೋಟೆ ಯಲ್ಲಿ ವೃತ್ತಿ ಪ್ರಾರಂಭಿಸಿ, ಬೆಂಗಳೂರು ಹೆಬ್ಬಗೋಡಿ ಪೊಲೀಸ್ ಠಾಣೆ, ಸಂಚಾರ ಪೊಲೀಸ್ ಠಾಣೆ ತುಮಕೂರು ನಗರಗಳಲ್ಲಿ
ಸೇವೆ ಸಲ್ಲಿಸಿ 2008ರಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ಆಗಿ ಮುಂಬಡ್ತಿ ಪಡೆದು, ಬೆಂಗಳೂರು
ನಗರದ ಮಹಾಲಕ್ಷ್ಮಿ ಪೊಲೀಸ್ ಠಾಣೆ, ಮಾಗಡಿ ರಸ್ತೆ ಸಂಚಾರಿ ಪೊಲೀಸ್ ಠಾಣೆ, ಹಾರೋಹಳ್ಳಿ ವೃತ್ತ ರಾಮನಗರ ಜಿಲ್ಲೆ ,ಡಿ ಆರ್ ಸಿ
ಇ ಬೆಂಗಳೂರು ಗ್ರಾಮಾಂತರ, ಆರ್ಎಂಸಿ ಯಾರ್ಡ್
ಪೊಲೀಸ್ ಠಾಣೆ, ಕಬ್ಬನ್ ಪಾರ್ಕ್ ಪೊಲೀಸ್ ಠಾಣೆ, ಬಿಡಿಎ ಜಾಗೃತಿ ದಳ, ಮತ್ತು ಕುಂಬಳಗೋಡು
ಪೊಲೀಸ್ ಠಾಣೆ ಗಳಲ್ಲಿ ವೃತ
ನಿರೀಕ್ಷಕರಾಗಿ ಸೇವೆ ಸಲ್ಲಿಸಿ 2021ರ
ಸಾಲಿನಲ್ಲಿ ಡಿವೈಎಸ್ಪಿ ಯಾಗಿ ಮುಂಬಡ್ತಿ ಹೊಂದಿದ್ದು
ಹಾಲಿ ಡಿಜಿ ಮತ್ತು ಐಜಿಪಿ ಕಚೇರಿ
ಬೆಂಗಳೂರು ಇಲ್ಲಿ ಸೇವೆ ಸಲ್ಲಿಸುತ್ತಿರುವ ಇವರು,
2015 ನೇ ಸಾಲಿನಲ್ಲಿ ಮುಖ್ಯಮಂತ್ರಿಗಳ ಚಿನ್ನದ ಪದಕ ಪುರಸ್ಕೃತರಾಗಿದ್ದಾರೆ.
ಇದೀಗ
ರಾಷ್ಟ್ರಪತಿಯವರ ಶ್ಲಾಘನೀಯ ಸೇವಾ ಪದಕ ಪಡೆದು
ತಾಲೂಕಿಗೆ ಹಾಗೂ ಜಿಲ್ಲೆಗೆ ಕೀರ್ತಿ
ತಂದಿರುವ ಇವರಿಗೆ ತಾಲೂಕು ಕರ್ನಾಟಕ ಸಂಘ ಪತ್ರಕರ್ತರ ಸಂಘದ ಪದಾಧಿಕಾರಿಗಳು ಹಾಗೂ
ಸದಸ್ಯರುಗಳು ಅಭಿನಂದನೆ ಸಲ್ಲಿಸಿದ್ದಾರೆ.
0 ಕಾಮೆಂಟ್‌ಗಳು