ಪತ್ನಿಗೆ ಮೆಸೆಜ್ ಮಾಡುತ್ತಿದ್ದ ಗೆಳೆಯನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದ ಆರೋಪಿ ಬಂಧನ

ಮೈಸೂರು : ಸ್ನೇಹಿತನನ್ನು ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು 24 ಗಂಟೆಯ ಒಳಗೆ ವಿಜಯನಗರ ಪೊಲೀಸರು ದಸ್ತಗಿರಿ ಮಾಡಿದ್ದಾರೆ. 
ಡಿಸೆಂಬರ್, 23 ರಂದು ಮೈಸೂರಿನ ವಿಜಯನಗರ ಪೊಲೀಸ್ ಠಾಣಾ
ವ್ಯಾಪ್ತಿಯಲ್ಲಿರುವ ಕೂರ್ಗಳ್ಳಿಯ ಸಾಯಿನಗರಿ ಬಾರ್ ಪಕ್ಕದ ಮನೆಯೊಂದರಲ್ಲಿ ವಾಸವಿದ್ದ ದರ್ಶನ್ ಎಂಬಾತನನ್ನು ಅದೇ ಮನೆಯಲ್ಲಿ ವಾಸವಿದ್ದ ಆರೋಪಿ ಚಾಕುವಿನಿಂದ ಮಾರಣಾಂತಿಕವಾಗಿ
ಹಲ್ಲೆ ಮಾಡಿ ಪರಾರಿಯಾಗಿದ್ದು, ದರ್ಶನ್ ಚಿಕಿತ್ಸೆ ಫಲಕಾರಿಯಾಗದೇ ಮರಣ ಹೊಂದಿದ್ದನು. ಆರೋಪಿಯು ತಲೆ ಮರೆಸಿಕೊಂಡಿದ್ದು, ಈತನ ಪತ್ತೆಗೆ ಕ್ರಮ ಕೈಗೊಂಡ ವಿಜಯನಗರ ಪೊಲೀಸರು ಆರೋಪಿಯನ್ನು ಡಿಸೆಂಬರ್ 24 ರಂದು ಕೆ.ಆರ್. ನಗರದಲ್ಲಿ ಪತ್ತೆ ಮಾಡಿ ಬಂಧಿಸಿದ್ದಾರೆ. ವಿಚಾರಣೆ ವೇಳೆ ಮೃತನು ಆರೋಪಿಯ 2ನೇ ಹೆಂಡತಿಗೆ ಪದೇ ಪದೇ ಮೆಸೇಜ್ ಮಾಡಿ, ಕಾಲ್ ಮಾಡಿ ಮಾತನಾಡುತ್ತಾನೆ ಎಂಬ
ಅನುಮಾನದ ಮೇರೆಗೆ ಕೊಲೆ ಮಾಡಿರುವುದಾಗಿ ಹೇಳಿದ್ದಾನೆಂದು  ಪೊಲೀಸರು ತಿಳಿಸಿದ್ದಾರೆ.
 ಡಿಸಿಪಿ ಮುತ್ತುರಾಜ್, ಎಸಿಪಿ ಶಿವಶಂಕರ್ ಮಾರ್ಗದರ್ಶನದಲ್ಲಿ ವಿಜಯನಗರ ಪೊಲೀಸ್ ಇನ್ಸ್‍ಪೆಕ್ಟರ್ ರವಿ ಶಂಕರ್, ಪಿಎಸ್‍ಐ ಶಬರೀಶ್, ನಾರಾಯಣ ಹಾಗೂ ಸಿಬ್ಬಂದಿಗಳಾದ ಶಂಕರ್, ಮುರಳಿಧರ್, ಲೋಕೇಶ್, ಪ್ರಭಾಕರ್, ಸೋಮಾರಾಧ್ಯ, ಮೆಹಬೂಬ್ ಪಾಷ, ಶಿವಕುಮಾರ್, ಶ್ರೀನಿವಾಸ ಮೂರ್ತಿ, ಅಣ್ಣಪ್ಪ
ದೇವಾಡಿಗಾ, ಕಾಮಣ್ಣ ಪತ್ತೆ ಕಾರ್ಯದಲ್ಲಿ ಭಾಗವಹಿಸಿದ್ದು, ಪತ್ತೆ ಕಾರ್ಯವನ್ನು ಮೈಸೂರು ನಗರದ ಪೊಲೀಸ್ ಆಯುಕ್ತರಾದ ಬಿ. ರಮೇಶ್ ಪ್ರಶಂಸಿಸಿದ್ದಾರೆ.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು