ಪಿರಿಯಾಪಟ್ಟಣ ಸೆಂಟ್ ಮೇರಿಸ್ ಕ್ಯಾಥೋಲಿಕ್ ಚರ್ಚ್‍ನಲ್ಲಿ ಕಳವು ಆರೋಪಿಯಿಂದ ಬಾಲಯೇಸು ಪ್ರತಿಮೆ ಹಾನಿ :ಎಸ್‍ಪಿ ಸೀಮಾ ಲಟ್ಕರ್
ಜನವರಿ 02, 2023
ಮೈಸೂರು: ಚರ್ಚ್‍ನಲ್ಲಿ ಕಳ್ಳತನ ಮಾಡುವಾಗ ಬಾಲ ಯೇಸುವಿನ ಪ್ರತಿಮೆ ಕೆಳಕ್ಕೆ ಬಿದ್ದು ಹಾನಿಯಾಗಿದ್ದು, ಈ ಸಂಬಂಧ ಒಬ್ಬ ಕಳವು ಆರೋಪಿಯನ್ನು ಬಂಧಿಸಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಟ್ಕರ್ ತಿಳಿಸಿದರು. ಪಿರಿಯಾಪಟ್ಟಣ ಚರ್ಚ್ ಮೇಲೆ ದಾಳಿ ಪ್ರಕರಣ ಕುರಿತು ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಪ್ರಕರಣದ ಸಂಬಂಧ ತನಿಖೆ ನಡೆಸಲು ಮೂರು ತಂಡಗಳನ್ನು ರಚನೆ ಮಾಡಲಾಗಿತ್ತು. ಸ್ಥಳದಲ್ಲಿ ಒಂದು ನೀಲಿ ಬಣ್ಣದ ಹ್ಯಾಂಡ್ ಗ್ಲೌಸ್ ಸಿಕಿತ್ತು, ಇದರ ಆಧಾರದ ಮೇಲೆ ವಿಶ್ವ ಎಂಬ ಪೌರ ಕಾರ್ಮಿಕನನ್ನ ವಶಕ್ಕೆ ಪಡೆದು ವಿಚಾರಣೆ ಮಾಡಲಾಗಿ, ಈತ ಚರ್ಚ್‍ನಲ್ಲಿ ಪೌರಕರ್ಮಿಕನಾಗಿ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಪಿರಿಯಾಪಟ್ಟಣದ ಮಹದೇಶ್ವರ ಬಡವಾಣೆ ನಿವಾಸಿಯಾಗಿರುವ ವಿಶ್ವನಿಗೆ ಎರಡು ತಿಂಗಳಿನಿಂದ ಚರ್ಚ್‍ನಲ್ಲಿ ಸಂಬಳ ನೀಡಿರಲಿಲ್ಲ. ಕ್ರಿಸ್‍ಮಸ್ ಸಂದರ್ಭ ಫಾದರ್ ಜೊತೆ ಮಾತನಾಡಲು ಈತ ಚರ್ಚ್‍ಗೆ ಬಂದಿದ್ದು, ಫಾದರ್ ಇರಲಿಲ್ಲ. ಇದರಿಂದ ಈತ ಚರ್ಚ್‍ನಲ್ಲಿನ ಹುಂಡಿ ಕಳ್ಳತನ ಮಾಡಿದ್ದಾನೆ. ಮೂರು ಹುಂಡಿಯಲ್ಲಿದ್ದ ಸುಮಾರು 2 ರಿಂದ 3 ಸಾವಿರ ಹಣ ಇತ್ತು ಎಂದು ವಿಚಾರಣೆ ವೇಳೆ ತಿಳಿಸಿದ್ದಾನೆ ಎಂದರು. ಈತ ಕಳವು ಮಾಡುವ ಸಂದರ್ಭದಲ್ಲಿ ಟೇಬಲ್ ಮೇಲಿದ್ದ ಬಾಲ ಏಸುವಿನ ಪ್ರತಿಮೆ ಕೆಳಗೆ ಹಣ ಇರಬಹುದು ಎಂದು ಬಟ್ಟೆ ಎಳೆದಾಗ ಮೂರ್ತಿ ಕೆಳಕ್ಕೆ ಬಿದ್ದು ಒಡೆದಿದೆ. ಪ್ರಕರಣ ಸಂಬಂಧ ಆರೋಪಿ ವಿಶ್ವನನ್ನು ಬಂಧಿಸಲಾಗಿದೆ ಎಂದು ವಿವರಿಸಿದರು. ಪತ್ರಿಕಾಗೋಷ್ಠಿಯಲ್ಲಿ ಡಿವೈಎಸ್ಪಿ ಡಾ.ನಂದಿನಿ ಹಾಜರಿದ್ದರು.
0 ಕಾಮೆಂಟ್‌ಗಳು