ಮದ್ದೂರು ಕ್ಷೇತ್ರದಿಂದ ವಿಧಾನಸಭೆಗೆ ಸ್ಪರ್ಧಿಸಲು ಕದಲೂರು ಉದಯ್ ತೀರ್ಮಾನ
ಜನವರಿ 28, 2023
ಟಿ.ಬಿ.ಸಂತೋಷ, ಮದ್ದೂರು ಮದ್ದೂರು : ತಾಲೋಕಿನಾದ್ಯಂತ ಹಲವಾರು ಸಮಾಜ ಸೇವಾ ಕಾರ್ಯಗಳ ಮೂಲಕ ಪರಿಚಿತರಾಗಿರುವ ಸಮಾಜ ಸೇವಕ ಕದಲೂರು ಉದಯ್ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮದ್ದೂರು ಕ್ಷೇತ್ರದಿಂದ ಸ್ಪರ್ಧೆ ಮಾಡುವುದಾಗಿ ತಿಳಿಸಿದರು. ಪ್ರತಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಕಳೆದ 2 ವರ್ಷದಿಂದ ತಾಲೋಕಿನಾದ್ಯಂತ ತಮ್ಮ ಟ್ರಸ್ಟ್ ಮೂಲಕ ಸಾಕಷ್ಟು ಸಮಾಜ ಸೇವೆಯನ್ನು ಮಾಡಿದ್ದೇನೆ. ತಾಲೋಕಿನ ಸರ್ವಾಂಗೀಣ ಅಭಿವೃದ್ಧಿಗೆ ಕನಸು ಕಂಡಿದ್ದೇನೆ. ಹೀಗಾಗಿ ಸ್ನೇಹಿತರು, ಅಭಿಮಾನಿಗಳು, ಗ್ರಾಮೀಣ ಮಹಿಳೆಯರು, ಹಿತೈಷಿಗಳ ಒತ್ತಾಯದ ಮೇರೆಗೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಾಗಿ ಹೇಳಿದರು. ರಾಷ್ಟ್ರೀಯ ಪಕ್ಷದಿಂದಲೇ ಸ್ಪರ್ಧೆ ಮಾಡುವ ನಿರ್ಧಾರ ಮಾಡಿದ್ದೇನೆ. ಯಾವ ಪಕ್ಷದಿಂದ ಎನ್ನುವುದು ಹಿತೈಷಿಗಳ ಸಲಹೆ ನಂತರ ತೀರ್ಮಾನಮಾಡುತ್ತೇನೆ ಎಂದರು. ಸಿಪಾಯಿ ಶ್ರೀನಿವಾಸ್, ಗೆಜ್ಜಲಗೆರೆ ಗ್ರಾಪಂ ಅಧ್ಯಕ್ಷ ಹರೀಶ್, ಗ್ರಾಪಂ ಮಾಜಿ ಅಧ್ಯಕ್ಷ ಮಧು, ಸದಸ್ಯ ಕದಲೂರು ರವಿ, ತಿಮ್ಮೇಗೌಡ ಮುಂತಾದವರು ಇದ್ದರು.
0 ಕಾಮೆಂಟ್‌ಗಳು