ಕಬ್ಬಿನ ಗದ್ದೆಗೆ ಆಕಸ್ಮಿಕ ಬೆಂಕಿ, 7 ಎಕರೆ ಕಬ್ಬು 100 ತೆಂಗಿನ ಗಿಡ ಭಸ್ಮ

ವರದಿ: ಶಾರುಕ್ ಖಾನ್ ಹನೂರು

ಹನೂರು: ಆಕಸ್ಮಿಕವಾಗಿ ಕಬ್ಬಿನ ಗದ್ದೆಗೆ ಬೆಂಕಿ ತಗುಲಿ 7 ಎಕರೆ ಕಬ್ಬು ಹಾಗೂ 100 ಕ್ಕೂ ಹೆಚ್ಚು ತೆಂಗಿನ ಮರಗಳು ಸುಟ್ಟು ಭಸ್ಮವಾಗಿರುವ ಘಟನೆ ತಾಲ್ಲೂಕಿನ ಲೊಕ್ಕನಳ್ಳಿ ಗ್ರಾಮದಲ್ಲಿ ನಡೆದಿದೆ. 
ಗ್ರಾಮದ  ತಾಲ್ಲೂಕು ಪಂಚಾಯತಿ ಮಾಜಿ ಸದಸ್ಯರಾದ ರುಕ್ಮಿಣಿ ವೇಲುಸ್ವಾಮಿ. ಸಾಹುಕರ್ ಸತೀಶ್ ಕುಮಾರ್. ಮಾಜಿ ಗ್ರಾಮ ಪಂಚಾಯತಿ ಸದಸ್ಯರಾದ ವೇಲುಸ್ವಾಮಿ ಅವರುಗಳ ಜಮೀನಿಗೆ  ಬೆಂಕಿ ತಗುಲಿದ ಪರಿಣಾಮ ಕಬ್ಬಿನ ಬೆಳೆಯು ಸಂಪೂರ್ಣವಾಗಿ ನಾಶವಾಗಿದೆ. 
ಘಟನೆಯಿಂದ ಸುಮಾರು 20 ಲಕ್ಷ ರೂ. ನಷ್ಟ ಸಂಭವಿಸಿದೆ ಎನ್ನಲಾಗಿದೆ.